ಕೇರಳ ದೇವಸ್ಥಾನಗಳಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳು ನಡೆಸದಂತೆ ಟಿಡಿಬಿ ಸುತ್ತೋಲೆ

May 24, 2023
7:54 PM

ತಿರುವನಂತಪುರಂ: ಕೇರಳ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ಕವಾಯತುಗಳನ್ನು ಹಾಗೂ ಇತರೆ ಚಟುವಟಿಕೆಗಳನ್ನು ನಡೆಸದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್‌) ಮೇಲೆ ನಿರ್ಬಂಧ ವಿಧಿಸಿ ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸುತ್ತೋಲೆ ಹೊರಡಿಸಿದೆ.

ಭಾರತದ ದಕ್ಷಿಣ ಭಾಗದಲ್ಲಿ ಸುಮಾರು 1200 ದೇವಸ್ಥಾನಗಳನ್ನು ನಿರ್ವಹಣೆ ಮಾಡುತ್ತಿರುವ ಟಿಡಿಬಿ, ತಮ್ಮ ಆವರಣಗಳಲ್ಲಿ ಯಾವುದೇ ಚಟುವಟಿಕೆಗಳನ್ನು ನಡೆಸಲು ಆರೆಸ್ಸೆಸ್‌ಗೆ ಅವಕಾಶ ನೀಡಬಾರದು ಎಂದು ನಿರ್ದೇಶಿಸಿ ತನ್ನ ನಿಯಂತ್ರಣಕ್ಕೆ ಒಳಪಡುವ ಎಲ್ಲಾ ದೇವಸ್ಥಾನಗಳಿಗೆ ಸುತ್ತೋಲೆ ಜಾರಿ ಮಾಡಿದೆ.ಈ ಸೂಚನೆಯನ್ನು ಎಲ್ಲ ದೇವಾಲಯಗಳೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಅದನ್ನು ಪಾಲನೆ ಮಾಡದೆ ಇದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಕೆ ಅನಂತಗೋಪಾಲನ್, “ಆರೆಸ್ಸೆಸ್ ಶಾಖೆಗಳು ಅನೇಕ ದೇವಸ್ಥಾನಗಳಿಂದ ಕಾರ್ಯ ನಿರ್ವಹಿಸುತ್ತಿವೆ ಮತ್ತು ಅಲ್ಲಿ ಕವಾಯತುಗಳನ್ನು ನಡೆಸುತ್ತಿವೆ. ನಾವು ಇಂತಹ ಸುತ್ತೋಲೆ ಹೊರಡಿಸಲು ಕಾರಣ ಇದು. ದೇವಸ್ಥಾನಗಳು ದೇವರ ಆರಾಧಕರಿಗಾಗಿ ಇರುವುದು. ಭಕ್ತರಿಗೆ ಇಂತಹ ಚಟುವಟಿಕೆಗಳಿಂದ ಯಾವುದೇ ಅನನುಕೂಲತೆ ಉಂಟಾಗಬಾರದು. ಇದು ಮಂಡಳಿಯ ನಿಲುವು” ಎಂದು ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಮಾರ್ಚ್‌ನಲ್ಲಿ‌ ಮಳೆ ಶಾಕ್….! ರೈತರಿಗೆ ನಷ್ಟದ ಭೀತಿ
March 23, 2026
7:01 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೂ ಇದೆ ಹೋರ್ಮುಜ್‌ ಸಂಕಷ್ಟ…! ರಸಗೊಬ್ಬರ ಪೂರೈಕೆ ಆತಂಕ…? | ಪ್ರಧಾನಿ ನೇತೃತ್ವದಲ್ಲಿ ಸಭೆ
March 22, 2026
8:47 PM
by: ದ ರೂರಲ್ ಮಿರರ್.ಕಾಂ
ತೈವಾನ್‌ನಲ್ಲಿ “ಸಿಹಿ ಅಡಿಕೆ” – “ಅಡಿಕೆ ಕ್ಯಾಂಡಿ” ಈಗ ಚರ್ಚೆ : ಮಕ್ಕಳಿಗೆ ನಿಷೇಧ ಬೇಡಿಕೆ ಹೆಚ್ಚಳ
March 22, 2026
6:30 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror