ಕೇರಳದ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಶಾಲೆಯೊಂದರಲ್ಲಿ ಇನ್ನುಮುಂದೆ ಮಕ್ಕಳು ಗುರುವನ್ನು ಸರ್ ಅಥವಾ ಮೇಡಂ ಎಂಬ ಹೆಸರಿನಿಂದ ಕರೆಯುವಂತಿಲ್ಲ. ಕೇರಳ ಅನೇಕ ಶಾಲೆಗಳು ಲಿಂಗ-ತಟಸ್ಥ ಸಮವಸ್ತ್ರವನ್ನು ಬೆಂಬಲಿಸಿದ ನಂತರ ಈ ಕ್ರಮವು ಬಂದಿದೆ. ಇನ್ನುಂದೆ ಲಿಂಗ ಬೇಧವಿಲ್ಲದೆ ವಿದ್ಯಾರ್ಥಿಗಳು ಟೀಚರ್ ಎಂದು ಕರೆಯಲಾಗುತ್ತದೆ.
ಹಲವಾರು ಮಹಿಳಾ ಹಕ್ಕುಗಳು ಗುಂಪುಗಳು ಯುನಿಸೆಕ್ಸ್ ಯೂನಿಫಾರ್ಮ್ ಉಪಕ್ರಮವನ್ನು ಬೆಂಬಲಿಸಲು ಬಂದಿವೆ. ಈ ಶಾಲೆಯಿಂದ 14 ಕಿ.ಮೀ ದೂರದಲ್ಲಿರುವ ಮಾತೂರು ಪಂಚಾಯಿತಿಯು ಕಳೆದ ವರ್ಷ ಜುಲೈನಲ್ಲಿ ಸರ್ ಮತ್ತು ಮೇಡಂ ಎಂದು ಕರೆಯುವ ಪದ್ಧತಿಯನ್ನು ಕೈಬಿಡುವ ನಿರ್ಧಾರ ಕೈಗೊಂಡಿತ್ತು. ಪಂಚಾಯಿತಿ ಸಿಬ್ಬಂದಿಯನ್ನು ಅವರ ಪದನಾಮದಿಂದ ಸಂಬೋಧಿಸುವಂತೆ ಆಡಳಿತ ಮಂಡಳಿ ಸಾರ್ವಜನಿಕ ಸೂಚಿಸಿತ್ತು. ಇದು ಲಿಂಗ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಮುಖ್ಯೋಪಾಧ್ಯಾಯರಾದ ವೇಣುಗೋಪಾಲನ್ ಹೆಚ್ ಅವರು ಹೇಳಿದರು.
ಈ ಕ್ರಮವನ್ನು ಮಕ್ಕಳ ಪೋಷಕರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದ್ದಾರೆ. ಶಾಲೆಯಲ್ಲಿ ಅನುಸರಿಸಲಾಗುವ ಈ ಪದ್ಧತಿಯು ಲಿಂಗಾನುಸಾರ ಸಂಬೋಧನೆಗೆ ಸಂಬಂಧಿಸಿದಂತೆ ತಟಸ್ತ ಧೋರಣೆಯ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದಿದ್ದಾರೆ.