Advertisement
Opinion

ರಾಸಾಯನಿಕ ಕೃಷಿ ಮತ್ತು ಸಾವಯವ ಕೃಷಿಯ ನಡುವಿನ ವ್ಯತ್ಯಾಸದ ಪ್ರಮುಖ ಅಂಶಗಳು

Share

ಭಾರತದಲ್ಲಿ(India) ಪ್ರಾಚೀನ ಕಾಲದಿಂದಲೂ ನೈಸರ್ಗಿಕ ಕೃಷಿಯನ್ನೇ(Natural Farming) ಮಾಡಲಾಗುತ್ತಿತ್ತು. ಈ ಪದ್ಧತಿಯಲ್ಲಿ ನೈಸರ್ಗಿಕ ಪದಾರ್ಥಗಳ ಮೇಲೆ ಅತ್ಯಲ್ಪ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಆಪತ್ಕಾಲದಲ್ಲಿ ರಾಸಾಯನಿಕ ಅಥವಾ ಸಾವಯವ ಗೊಬ್ಬರಗಳು(Chemical and organic fertilizer) ದೊರಕುವುದು ಕಠಿಣವಾಗಿದೆ. ನೈಸರ್ಗಿಕ ಕೃಷಿಯು ಸಂಪೂರ್ಣ ಸ್ವಾವಲಂಬಿ ಕೃಷಿಯಾಗಿದ್ದು(Self farming) ಆಪತ್ಕಾಲಕ್ಕಾಗಿ, ಹಾಗೆಯೇ ಇತರ ಸಮಯದಲ್ಲಿಯೂ ಅತ್ಯಂತ ಉಪಯುಕ್ತವಾಗಿದೆ. ನೈಸರ್ಗಿಕ ಪದ್ಧತಿಯಿಂದ ಬೆಳೆಸಿದ ತರಕಾರಿ, ಹಣ್ಣುಗಳು, ಹಾಗೆಯೇ ಔಷಧಿ ವನಸ್ಪತಿಗಳು ಸಂಪೂರ್ಣ ವಿಷರಹಿತ ಮತ್ತು ಆರೋಗ್ಯಕರವಾಗಿರುತ್ತವೆ(Healthy). ದೇಶಿ ಹಸುವಿನ ಸೆಗಣಿ ಮತ್ತು ಗೊಮೂತ್ರ, ಹಾಗೆಯೇ ಸಹಜವಾಗಿ ದೊರಕುವ ನೈಸರ್ಗಿಕ ವಿಷಯಗಳನ್ನು ಉಪಯೋಗಿಸಿ ಜೀವಾಮೃತ, ಬೀಜಾಮೃತ ಇವುಗಳಂತಹ ಗೊಬ್ಬರ ಮತ್ತು ಔಷಧಿಗಳನ್ನು ತಯಾರಿಸಿ ಉಪಯೋಗಿಸಲಾಗುತ್ತದೆ.

– ರಾಸಾಯನಿಕ ಕೃಷಿಯು(Chemical Farming) ಜೀವಜಾಲವನ್ನು ಛಿದ್ರಗೊಳಿಸುತ್ತದೆ; ಸಾವಯವ ಕೃಷಿಯು(Organic farming) ಅದರ ಸಂಪೂರ್ಣತೆಯನ್ನು ಪೋಷಿಸುತ್ತದೆ.
– ರಾಸಾಯನಿಕ ಕೃಷಿ ಪಳೆಯುಳಿಕೆ ತೈಲದ ಮೇಲೆ ಅವಲಂಬಿತವಾಗಿದೆ; ಸಾವಯವ ಕೃಷಿ ಜೀವಂತ ಮಣ್ಣಿನ ಮೇಲೆ ಅವಲಂಬಿತವಾಗಿದೆ.
– ರಾಸಾಯನಿಕ ಕೃಷಿ ಮಾಡುವ ರೈತರು ತಮ್ಮ ಭೂಮಿಯನ್ನು ಜೀವರಹಿತ ಮಾಧ್ಯಮವಾಗಿ ನೋಡುತ್ತಾರೆ; ಸಾವಯವ ಕೃಷಿಕರು ಮಣ್ಣಿನೊಂದಿಗೆ ಜೀವನ ಕೂಡಿದೆ ಎಂದು ತಿಳಿದಿದ್ದರೆ.
– ರಾಸಾಯನಿಕ ಕೃಷಿಯು ಗಾಳಿ, ನೀರು ಮತ್ತು ಮಣ್ಣನ್ನು ಕಲುಷಿತಗೊಳಿಸುತ್ತದೆ; ಸಾವಯವ ಕೃಷಿಯು ಅವುಗಳನ್ನು ಶುದ್ಧೀಕರಿಸುತ್ತದೆ ಮತ್ತು ನವೀಕರಿಸುತ್ತದೆ.

– ರಾಸಾಯನಿಕ ಕೃಷಿಯು ಹೆಚ್ಚಿನ ಪ್ರಮಾಣದ ನೀರನ್ನು ಬಳಸುತ್ತದೆ ಮತ್ತು ಜಲಚರಗಳನ್ನು ಖಾಲಿ ಮಾಡುತ್ತದೆ;ಸಾವಯವ ಕೃಷಿಗೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ ಮತ್ತು ಅಂತರ್ಜಲವನ್ನು ವೃದ್ಧಿ ಮಾಡುತ್ತದೆ.
– ರಾಸಾಯನಿಕ ಕೃಷಿಯು ಏಕಬೆಳೆ ಪದ್ಧತಿಯಾಗಿದೆ ಮತ್ತು ವೈವಿಧ್ಯತೆಯನ್ನು ನಾಶಪಡಿಸುತ್ತದೆ; ಸಾವಯವ ಕೃಷಿಯು ಬಹುಬೆಳೆ ಪದ್ದತಿಯಾಗಿದೆ ಮತ್ತು ವೈವಿಧ್ಯತೆಯನ್ನು ಪೋಷಿಸುತ್ತದೆ.
– ರಾಸಾಯನಿಕ ಕೃಷಿಯು ವಿಷಯುಕ್ತ ಆಹಾರವನ್ನು ಉತ್ಪಾದಿಸುತ್ತದೆ;ಸಾವಯವ ಕೃಷಿಯು ಪೌಷ್ಟಿಕ,ವಿಷಮುಕ್ತ ಆಹಾರವನ್ನು ನೀಡುತ್ತದೆ.

– ರಾಸಾಯನಿಕ ಕೃಷಿಯು ಒಂದು ಸಣ್ಣ ಇತಿಹಾಸವನ್ನು ಹೊಂದಿದೆ ಮತ್ತು ಸುಸ್ಥಿರ ಭವಿಷ್ಯವನ್ನು ನೀಡುವ ಭರವಸೆ ನೀಡುವುದಿಲ್ಲ,ಸಾವಯವ ಕೃಷಿಯು ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಉಜ್ವಲ ಭವಿಷ್ಯದ ಭರವಸೆ ನೀಡುತ್ತದೆ.
– ರಾಸಾಯನಿಕ ಕೃಷಿಯು ಬೇರೆಡೆಯಿಂದ ಆಮದು ಮಾಡಿಕೊಂಡ ತಂತ್ರಜ್ಞಾನವಾಗಿದೆ;ಸಾವಯವ ಕೃಷಿಯು ಸ್ಥಳೀಯವಾಗಿ ವಿಕಸನಗೊಂಡಿದೆ.
– ಶಿಕ್ಷಣದ ತಪ್ಪು ಮಾಹಿತಿಯ ಮೂಲಕ ರಾಸಾಯನಿಕ ಕೃಷಿಯನ್ನು ಪ್ರಚಾರ ಮಾಡಲಾಗುತ್ತದೆ;ಸಾವಯವ ಕೃಷಿಯನ್ನು ಪ್ರಕೃತಿ ಮತ್ತು ರೈತರ ಅನುಭವದಿಂದ ಕಟ್ಟಲಾಗಿದೆ.

– ರಾಸಾಯನಿಕ ಕೃಷಿಯು ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಪ್ರಯೋಜನವನ್ನು ನೀಡುತ್ತದೆ; ಸಾವಯವ ಕೃಷಿಯು ರೈತ,ಪರಿಸರ ಮತ್ತು ಒಟ್ಟಾರೆ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ.
– ರಾಸಾಯನಿಕ ಕೃಷಿಯು ರೈತರ ಮತ್ತು ಹಳ್ಳಿಗಳ ಸ್ವಾವಲಂಬನೆ ಮತ್ತು ಸ್ವಾಭಿಮಾನವನ್ನು ಕಸಿದುಕೊಳ್ಳುತ್ತದೆ;ಸಾವಯವ ಕೃಷಿಯು ಅದನ್ನು ಪುನಃಸ್ಥಾಪಿಸುತ್ತದೆ ಮತ್ತು ಬಲಪಡಿಸುತ್ತದೆ.
– ರಾಸಾಯನಿಕ ಕೃಷಿಯು ಹಂತಹಂತವಾಗಿ ದಿವಾಳಿತನ ಮತ್ತು ದುಃಖಕ್ಕೆ ಕಾರಣವಾಗುತ್ತದೆ; ಸಾವಯವ ಕೃಷಿಯು ಸಾಲ ಮತ್ತು ಸಂಕಟದಿಂದ ಮುಕ್ತಿ ನೀಡುತ್ತದೆ.
– ರಾಸಾಯನಿಕ ಕೃಷಿಯು ಹಿಂಸಾತ್ಮಕ ಮತ್ತು ಸಮಸ್ಯಾತ್ಮಕವಾಗಿದೆ, ಸಾವಯವ ಕೃಷಿಯು ಅಹಿಂಸಾತ್ಮಕ ಮತ್ತು ಪರಿಹಾರತ್ಮಾಕವಾಗಿದೆ.

Advertisement

– ರಾಸಾಯನಿಕ ಕೃಷಿ ಒಂದು ಪೊಳ್ಳಾದ ‘ಹಸಿರು ಕ್ರಾಂತಿ’; ಸಾವಯವ ಕೃಷಿ ನಿಜವಾದ ಹಸಿರು ಕ್ರಾಂತಿ.
– ರಾಸಾಯನಿಕ ಕೃಷಿ ಸ್ವಯಂ ತನೂ ಸಾಯುತ್ತದೆ, ಸಂಪರ್ಕಿಸಿದ ಎಲ್ಲಾವನ್ನು ಸಾಯಿಸುತ್ತದೆ,ಹಾಗಾಗಿ ಇದು ಸಾಯುವ ಕೃಷಿ.ಸಾವಯವ ಕೃಷಿಯು ಪುನರುತ್ಪಾದನೆಯ ಹಾದಿಯಾಗಿದೆ.
– ರಾಸಾಯನಿಕ ಕೃಷಿಯು ವಾಣಿಜ್ಯ ಮತ್ತು ದಬ್ಬಾಳಿಕೆಯ ಮಾರ್ಗವಾಗಿದೆ; ಸಾವಯವ ಕೃಷಿಯು ಸಂಸ್ಕೃತಿ ಮತ್ತು ಸಹ-ವಿಕಾಸದ ಮಾರ್ಗವಾಗಿದೆ.

ಬರಹ :
ಭಾಸ್ಕರ್ ಸಾವೆ,
, ಸಹಜ ಕೃಷಿ ಪ್ರತಿಪಾದಕರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

8 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

9 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

17 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

17 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

18 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

18 hours ago