ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ರಾಜ್ಯ ಮಟ್ಟದ ಖಾದಿ ಉತ್ಸವ-2022ರ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನ.26 ರಿಂದ ಡಿಸೆಂಬರ್ 10ರವರೆಗೆ ನಗರದ ಲಾಲ್‍ಬಾಗ್ ನಲ್ಲಿರುವ ಕರಾವಳಿ ಮೈದಾನದಲ್ಲಿ ಆಯೋಜಿಸಿದೆ.
ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಆಯೋಗದಿಂದ ಮಾನ್ಯತೆ ಪಡೆದ ಘಟಕಗಳ ಫಲಾನುಭವಿ, ಸಂಘ-ಸಂಸ್ಥೆಗಳು ಭಾಗವಹಿಸಬಹುದು. ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಗ್ರಾಮ ಕೈಗಾರಿಕೆ (6×10 ಅಡಿ) ಮಳಿಗೆಗೆ 12,050 ರೂ.ಗಳು ಮತ್ತು ಖಾದಿ ಮಳಿಗೆಗೆ (10×10) 14,410 ರೂ.ಗಳನ್ನು ಪಾವತಿಸಿ ಮಳಿಗೆ ಮುಂಗಡವಾಗಿ ಕಾಯ್ದಿರಿಸಲು ಡಿ.ಡಿ ಮೂಲಕ ಕರ್ನಾಟಕ ಸ್ಟೇಟ್ ಖಾದಿ ಆಂಡ್ ವಿಲೇಜ್ ಇಂಡಸ್ಟ್ರೀಸ್ ಬೋರ್ಡ್, ಮಂಗಳೂರು ಹಾಗೂ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಬೇಕು.
ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ:9480825644, 0824-2454800 ಅಥವಾ ನಗರದ ಲಾಲ್‍ಬಾಗ್ ನಲ್ಲಿರುವ ಮಹಾನಗರ ಪಾಲಿಕೆ ಕೆಳ ಮಹಡಿಯಲ್ಲಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.