ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಭಾರತದ ಸನಾತನ ಆಚರಣೆಯಾದ ಯೋಗವನ್ನು ತಲುಪಿಸಿದ್ದೇ ಹೆಮ್ಮೆ. ಅದಾದ ನಂತರದ ದಿನಗಳಲ್ಲಿ ಯೋಗ ಮ್ಯಾಟ್ ಕೊಳ್ಳುವುದು ಭಾರಿ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದರೆ ಅದು ರಬ್ಬರ್ ನಿಂದ ಮಾಡಿದ್ದು. ಇದು ಕೆಲವರಿಗೆ ಅಲರ್ಜಿ ಉಂಟು ಮಾಡಿದರೆ, ಇನ್ನು ಕೆಲವು ಕೆಟ್ಟ ವಾಸನೆ ಬರುತ್ತಿತ್ತು. ಆದರೆ ಇದೀಗ ನಮ್ಮ ಭಾರತದ್ದೇ ಹೆಮ್ಮೆಯ ಖಾದಿ ಮ್ಯಾಟ್ ಅನ್ನು ಪರಿಚಯಿಸಲಾಗಿದೆ. 21 ಜೂನ್ 2023 ರಂದು ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಗೌರವಾನ್ವಿತ ಅಧ್ಯಕ್ಷರಾದ ಮನೋಜ್ ಕುಮಾರ್ ಬಹು ನಿರೀಕ್ಷಿತ ಖಾದಿ ಯೋಗ ಮ್ಯಾಟ್ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಮುಂಬೈನ ಕೆವಿಐಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಖಾದಿ ಪ್ರಿಯರಿಗಾಗಿರುವ ಯೋಗ ಮ್ಯಾಟ್ ಬಿಡುಗಡೆಯಾಗಿದೆ .ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ‘ಆತ್ಮನಿರ್ಭರ ಭಾರತ್ ಅಭಿಯಾನ’ ದಿನದಿಂದ ದಿನಕ್ಕೆ ಹೊಸ ಮಾದರಿಗಳನ್ನು ರೂಪಿಸುತ್ತಿದೆ. ‘ಖಾದಿ ಯೋಗ ಮ್ಯಾಟ್’ ಬಿಡುಗಡೆ ಮಾಡಿದ್ದೂ ಇದೇ ಅಭಿಯಾನದ ಒಂದು ಭಾಗವಾಗಿದೆ. ಈ ಮ್ಯಾಟ್ ಸಂಪೂರ್ಣವಾಗಿ ಸ್ಥಳೀಯ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ, ಕೆವಿಐಸಿಯು “ಲೋಕಲ್ ಫಾರ್ ವೋಕಲ್” ಮತ್ತು ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಹೊಸದಕ್ಕೆ ಕೊಂಡೊಯ್ಯುವ ಮೂಲಕ ಉತ್ಕೃಷ್ಟ ಭಾರತದ ಉತ್ಕೃಷ್ಟ ಚಿತ್ರವನ್ನು ಜಗತ್ತಿಗೆ ಪ್ರಸ್ತುತಪಡಿಸಿದೆ ಎಂದು ಕೆವಿಐಸಿ ಅಧ್ಯಕ್ಷರು ಹೇಳಿದರು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಕೆವಿಐಸಿ ಉತ್ಪನ್ನಗಳ ವಹಿವಾಟು ರೂ.1.34 ಲಕ್ಷ ಕೋಟಿಗಳನ್ನು ದಾಟಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ 9,54,899 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಇಂದು ಬಿಡುಗಡೆಗೊಂಡಿರುವ ‘ಖಾದಿ ಯೋಗ ಮ್ಯಾಟ್’ ಖಾದಿ ಕುಶಲಕರ್ಮಿಗಳ ಕೌಶಲ್ಯದಿಂದ ಸಿದ್ಧಪಡಿಸಲಾದ ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿದೆ.. ಈ ಹೊಸ ಸ್ಥಳೀಯ ಉತ್ಪನ್ನಕ್ಕೆ ನಾವೆಲ್ಲರೂ ಧ್ವನಿಗೂಡಿಸಬೇಕು. ಮತ್ತು ನಾವು ನಮ್ಮ ಉತ್ಪನ್ನಗಳಿಗೆ ದನಿಯಾಗುವಾಗ ನಮ್ಮ ಉತ್ಪನ್ನಗಳು ಮಾತ್ರ ‘ಸ್ಥಳೀಯದಿಂದ ಜಾಗತಿಕ’ ವರ್ಗವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.