ಸುದ್ದಿಗಳು

#KhadiIndia | ರಬ್ಬರ್ ಯೋಗ ಮ್ಯಾಟ್ ಗೆ ಹೇಳಿ ಬೈ ಬೈ | ಬಂದಿದೇ ಖಾದಿ ಯೋಗ ಮ್ಯಾಟ್ |

Share

ಅಂತರಾಷ್ಟ್ರೀಯ ಮಟ್ಟಕ್ಕೆ ನಮ್ಮ ಭಾರತದ ಸನಾತನ ಆಚರಣೆಯಾದ ಯೋಗವನ್ನು ತಲುಪಿಸಿದ್ದೇ ಹೆಮ್ಮೆ. ಅದಾದ ನಂತರದ ದಿನಗಳಲ್ಲಿ ಯೋಗ ಮ್ಯಾಟ್ ಕೊಳ್ಳುವುದು ಭಾರಿ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಆದರೆ ಅದು ರಬ್ಬರ್ ನಿಂದ ಮಾಡಿದ್ದು. ಇದು ಕೆಲವರಿಗೆ ಅಲರ್ಜಿ ಉಂಟು ಮಾಡಿದರೆ, ಇನ್ನು ಕೆಲವು ಕೆಟ್ಟ ವಾಸನೆ ಬರುತ್ತಿತ್ತು. ಆದರೆ ಇದೀಗ ನಮ್ಮ ಭಾರತದ್ದೇ ಹೆಮ್ಮೆಯ ಖಾದಿ ಮ್ಯಾಟ್ ಅನ್ನು ಪರಿಚಯಿಸಲಾಗಿದೆ. 21 ಜೂನ್ 2023 ರಂದು ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC) ಗೌರವಾನ್ವಿತ ಅಧ್ಯಕ್ಷರಾದ ಮನೋಜ್ ಕುಮಾರ್ ಬಹು ನಿರೀಕ್ಷಿತ  ಖಾದಿ ಯೋಗ ಮ್ಯಾಟ್​​ನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಮುಂಬೈನ ಕೆವಿಐಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಖಾದಿ ಪ್ರಿಯರಿಗಾಗಿರುವ ಯೋಗ ಮ್ಯಾಟ್ ಬಿಡುಗಡೆಯಾಗಿದೆ .ಉದ್ಘಾಟನಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ‘ಆತ್ಮನಿರ್ಭರ ಭಾರತ್ ಅಭಿಯಾನ’ ದಿನದಿಂದ ದಿನಕ್ಕೆ ಹೊಸ ಮಾದರಿಗಳನ್ನು ರೂಪಿಸುತ್ತಿದೆ. ‘ಖಾದಿ ಯೋಗ ಮ್ಯಾಟ್’ ಬಿಡುಗಡೆ ಮಾಡಿದ್ದೂ ಇದೇ ಅಭಿಯಾನದ ಒಂದು ಭಾಗವಾಗಿದೆ. ಈ ಮ್ಯಾಟ್ ಸಂಪೂರ್ಣವಾಗಿ ಸ್ಥಳೀಯ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಮೋದಿ ನೇತೃತ್ವದಲ್ಲಿ, ಕೆವಿಐಸಿಯು “ಲೋಕಲ್ ಫಾರ್ ವೋಕಲ್” ಮತ್ತು ‘ಆತ್ಮನಿರ್ಭರ ಭಾರತ್’ ಅಭಿಯಾನವನ್ನು ಹೊಸದಕ್ಕೆ ಕೊಂಡೊಯ್ಯುವ ಮೂಲಕ ಉತ್ಕೃಷ್ಟ ಭಾರತದ ಉತ್ಕೃಷ್ಟ ಚಿತ್ರವನ್ನು ಜಗತ್ತಿಗೆ ಪ್ರಸ್ತುತಪಡಿಸಿದೆ ಎಂದು ಕೆವಿಐಸಿ ಅಧ್ಯಕ್ಷರು ಹೇಳಿದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಕೆವಿಐಸಿ ಉತ್ಪನ್ನಗಳ ವಹಿವಾಟು ರೂ.1.34 ಲಕ್ಷ ಕೋಟಿಗಳನ್ನು ದಾಟಿದೆ, ಆದರೆ ಗ್ರಾಮೀಣ ಪ್ರದೇಶಗಳಲ್ಲಿ 9,54,899 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಇಂದು ಬಿಡುಗಡೆಗೊಂಡಿರುವ ‘ಖಾದಿ ಯೋಗ ಮ್ಯಾಟ್’ ಖಾದಿ ಕುಶಲಕರ್ಮಿಗಳ ಕೌಶಲ್ಯದಿಂದ ಸಿದ್ಧಪಡಿಸಲಾದ ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿದೆ.. ಈ ಹೊಸ ಸ್ಥಳೀಯ ಉತ್ಪನ್ನಕ್ಕೆ ನಾವೆಲ್ಲರೂ ಧ್ವನಿಗೂಡಿಸಬೇಕು. ಮತ್ತು ನಾವು ನಮ್ಮ ಉತ್ಪನ್ನಗಳಿಗೆ ದನಿಯಾಗುವಾಗ ನಮ್ಮ ಉತ್ಪನ್ನಗಳು ಮಾತ್ರ ‘ಸ್ಥಳೀಯದಿಂದ ಜಾಗತಿಕ’ ವರ್ಗವನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

4 hours ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

4 hours ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

4 hours ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

20 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

20 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

20 hours ago