ಮೂತ್ರಪಿಂಡ ಕಾಯಿಲೆ ಜೀವಕ್ಕೇ ಮಾರಕ | ಕಿಡ್ನಿಯ ಸಮಸ್ಯೆಗಳು ಮತ್ತು ಪರಿಹಾರ

August 27, 2023
11:28 AM
ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನಾರೋಗ್ಯಕರ ಜೀವನ ಶೈಲಿ ಮೂತ್ರ ಪಿಂಡ ವೈಪಲ್ಯಕ್ಕೆ ಕಾರಣ. ಈ ಕಿಡ್ನಿ ಸಮಸ್ಯೆಗಳನ್ನು ಸರಿಯಾಗಿ ಚಿಕಿತ್ಸೆ ನೀಡದೆ ಇದ್ದಲ್ಲಿ ಮೂತ್ರಪಿಂಡ ಅಂತಿಮವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು.

ಮೂತ್ರ ಪಿಂಡಗಳು ದೇಹದ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡ ಕಾಪಾಡಿಕೊಳ್ಳುತ್ತವೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತವೆ. ಮೂತ್ರಪಿಂಡದಲ್ಲಿ ಉಂಟಾಗುವ ಸಮಸ್ಯೆಗಳು ಈ ಕಾರ್ಯಗಳ ಮೇಲೆ ಪರಿಣಾಮ ಬೀರಬಹುದು. ಮೂತ್ರಪಿಂಡದ ತೊಂದರೆಗಳು ನಮ್ಮ ದೇಶದಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.

Advertisement

ಈ ಕಾಯಿಲೆಗೆ ವಿವಿಧ ಅಂಶಗಳು ಕಾರಣವಾಗಿವೆ ಮುಖ್ಯವಾಗಿ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಅನಾರೋಗ್ಯಕರ ಜೀವನ ಶೈಲಿ. ಈ ಕಿಡ್ನಿ ಸಮಸ್ಯೆಗಳನ್ನು ಸರಿಯಾಗಿ ಚಿಕಿತ್ಸೆ ನೀಡದೆ ಇದ್ದಲ್ಲಿ ಮೂತ್ರಪಿಂಡ ಅಂತಿಮವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. kidney failure, chronic kidney diseases (CKD ) Nephrotic syndrom, polycystic kidney Diseases ಇತ್ಯಾದಿ ಮೂತ್ರಪಿಂಡ ರೋಗಗಳು ಉಂಟಾಗಬಹುದು.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆ… ಸಾಮಾನ್ಯವಾಗಿ ಇದು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದೇ ಇರುವುದರಿಂದ ಕಂಡು ಬರುತ್ತದೆ ದೀರ್ಘಕಾಲದವರೆಗೆ ಈ ಅಧಿಕ ರಕ್ತದ ಒತ್ತಡ (BP)ಹಾಗೂ ಹೆಚ್ಚಿನ ಸಕ್ಕರೆಯ ಮಟ್ಟವು(Diabetis) ಮೂತ್ರಪಿಂಡದ ರಕ್ತನಾಳಗಳನ್ನು ಹಾನಿಗೊಳಿಸುವುದು ಮತ್ತು ಮೂತ್ರಪಿಂಡದ ಕಾರ್ಯಗಳನ್ನು ಕ್ಷೀಣಿಸುತ್ತವೆ. ಡಯಾಲಿಸಿಸ್ ಜೊತೆಗೆ ಇದನ್ನು ನಿಯಂತ್ರಿಸಬೇಕಾಗುತ್ತದೆ.ರೋಗವು ಕೊನೆ ಹಂತಕ್ಕೆ ತಲುಪಿದಾಗ ಮೂತ್ರಪಿಂಡದ ಕಸಿ ಶಿಫಾರಸು ಮಾಡಲಾಗುತ್ತದೆ (Kidney transplantation )

Acute Renal failure :(ಕಿಡ್ನಿ ವೈಪಲ್ಯ) ತೀವ್ರವಾದ ಮೂತ್ರಪಿಂಡದ ಹಾನಿಯು ಸಾಮಾನ್ಯವಾಗಿ ಗಾಯಗಳು ಅಥವಾ ಅಪಘಾತಗಳಿಂದ ಮೂತ್ರಪಿಂಡಗಳಿಗೆ ನೇರ ಹಾನಿಯಾಗುವುದರಿಂದ ಉಂಟಾಗುತ್ತದೆ.

ಮೂತ್ರಪಿಂಡ ಕಾಯಿಲೆ ಲಕ್ಷಣಗಳು
– ಕಡಿಮೆಯಾದ ಮೂತ್ರ ವಿಸರ್ಜನೆ
– ಕೀಲುಗಳು ಪಾದಗಳು ಮುಖದಲ್ಲಿ ಊತ ಹಾಗೂ ನೋವು
– ಉಸಿರಾಟದ ತೊಂದರೆ
– ಆಯಾಸ, ನಿದ್ರಾಹೀನತೆ
– ಎದೆ ನೋವು ಗೊಂದಲ

Advertisement

ಪರಿಹಾರ 
– ಕಿಡ್ನಿ ವೈಫಲ್ಯದಿಂದ ರಕ್ಷಿಸಲು ಅನೇಕ ಗಿಡಮೂಲಿಕೆಗಳು ಬಳಸುವುದು ಉತ್ತಮ.. ವರುಣ ಗೋಕ್ಷುರ ಪುನರ್ನವ ಶುಂಠಿ ತ್ರಿಫಲ ಅರಶಿನ ಇತ್ಯಾದಿ ಹಾಗೂ ಇವುಗಳಿಂದ ತಯಾರಿಸಿದ ಅನೇಕ ಆಯುರ್ವೇದ ಔಷಧಿಗಳು ಕಿಡ್ನಿಯ ಸಮಸ್ಯೆಯ ಆರಂಭದಲ್ಲಿ ತೆಗೆದುಕೊಳ್ಳುವುದರಿಂದ ಕಿಡ್ನಿಯ ವೈಫಲ್ಯದಿಂದ ರಕ್ಷಿಸಬಹುದು ಇವುಗಳ ನೈಸರ್ಗಿಕ ಗುಣಲಕ್ಷಣಗಳೊಂದಿಗೆ ಮೂತ್ರಪಿಂಡದ ಕಾರ್ಯ ನಿರ್ವಹಣೆ ಸರಿಯಾಗಿ ಮಾಡಲು ಸಹಾಯ ಮಾಡುವುದು
– ಉತ್ತಮ ಆಹಾರ….ತಾಜಾ ತರಕಾರಿ ಹಣ್ಣುಗಳ ಸೇವನೆ, ಶುದ್ಧವಾದ ಹಿತಮಿತವಾದ ನೀರು ಸೇವನೆ, ಗೋಧಿಯ ಹುಲ್ಲು, ದಾಳಿಂಬೆ ಹಾಗೂ – ಲಿಂಬೆಹಣ್ಣಿನ ರಸ ಕಿಡ್ನಿಯ ರಕ್ಷಣೆ ಮಾಡುವಲ್ಲಿ ಸಹಾಯಕಾರಿಯಾಗುತ್ತವೆ.
– ಮಾಂಸಹಾರವು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವುದರಿಂದ ಸಸ್ಯಾಹಾರ ಸೇವನೆ ಉತ್ತಮ.
– ಆರೋಗ್ಯಕರ ಜೀವನ ಶೈಲಿ ಜೊತೆಗೆ ಮಾನಸಿಕ ಒತ್ತಡ ನಿಗ್ರಹಿಸಲು ಧ್ಯಾನ ಯೋಗ ಪ್ರಾಣಾಯಾಮ ದಿನನಿತ್ಯ ವ್ಯಾಯಾಮ ಮಾಡುವುದರಿಂದ
– ಮೂತ್ರಪಿಂಡದ ರೋಗಗಳನ್ನು ತಡೆಗಟ್ಟಬಹುದು.
ಯಾವುದೇ ಕಿಡ್ನಿಯ ಸಮಸ್ಯೆಯ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದ ವಾಯುವ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ
July 10, 2025
11:26 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ವಿಧಾತ್ರಿ ಎಂ, ಮೈಸೂರು
July 10, 2025
10:42 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನೈನಿಕಾ ಬಿ ಸಿ
July 10, 2025
10:27 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ನಯೋನಿಕಾ.ಬಿ.ಸಿ.
July 10, 2025
10:11 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group