ಕಿಡ್ನಿ ಮಾರಾಟಕ್ಕಿದೆ…! ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು…! | ಹೀಗೊಂದು ಪೋಸ್ಟರ್ ವೈರಲ್….! |

February 27, 2023
6:14 PM

ಬೆಂಗಳೂರು ಅಂದ್ರೆ ಅದೊಂದು ಮಾಯಾನಗರಿ. ನೀವು ಕೆಲಸಕ್ಕೆಂದು ಹೋದರೆ ಕೈ ಹಿಡಿಯುತ್ತೆ… ಹಾಗೆ ಕೈ ಸುಡುತ್ತೆ ಕೂಡಾ…!.  ಇಂತಹ ಮಹಾನಗರಿಯಲ್ಲಿ ಒಂದು ಮನೆ ಹುಡುಕುವುದು ಅಂದರೆ ಅದು ತಮಾಷೆಯ ವಿಷಯವಲ್ಲ. ಅದರಲ್ಲೂ ಕೋಟಿ ಜನರ ಕನಸಿನ ನಗರಿಯಲ್ಲಿ ಸಿಂಗಲ್ ಬೆಡ್​ ರೂಂಗೂ ಬಾಯಿ ತೆರೆಯುವಷ್ಟು ಕಾಸು ಕೊಡ್ಬೇಕು. ಇಲ್ಲಿ ನಮಗೆ ಇಷ್ಟ ಆಗುವ ಮನೆ ಬೇಕು ಅಂದರೆ ದುಪ್ಪಟ್ಟು ಹಣ ನೀಡಲೇಬೇಕು. ಅದರಲ್ಲೂ ಓನರ್​ಗಳ ಒಂದಷ್ಟು ರೂಲ್ಸ್​ಗೆ ಓಕೆ ಅನ್ನಬೇಕು…! ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆ ಮನೆ ಪಡೆಯಲು ಮನೆಗೆ ಠೇವಣಿ ನೀಡುವ ಬಗ್ಗೆ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಬಾರಿ ಕಮೆಂಟ್ ಗಳನ್ನೇ ಹಾಕುತ್ತಿದ್ದಾರೆ.

Advertisement
Advertisement
Advertisement

ಕಿಡ್ನಿ ಮಾರಾಟಕ್ಕಿದೆ….!

ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟಕ್ಕಿದೆ… ಇದು ತಮಾಷೆಗಾಗಿ, ಆದ್ರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕಿದೆ. ನನ್ನ ಪ್ರೊಫೈಲ್​ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ ಎಂದು ಕ್ಯೂಆರ್ ಕೋಡ್ ಹಾಕಿರುವ ಪೋಸ್ಟರನ್ನು ಮರಕ್ಕೆ ಅಂಟಿಸಲಾಗಿದೆ. ಸದ್ಯ ಈ ಪೋಸ್ಟರ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement

ಇದು ತಮಾಷೆಯ ಪೋಸ್ಟ್ ಆಗಿದ್ದರೂ ಜನಸಾಮಾನ್ಯರ ಗೋಳಾಗಿದೆ. ಟ್ವಿಟರ್ ಬಳಕೆದಾರ ಹೆಸರಿನಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಟೆಕ್ ಕ್ಯಾಪಿಟಲ್‌ ಬೆಂಗಳೂರಿನಲ್ಲಿ ಮನೆಗಳ ಹೆಚ್ಚಿನ ಬಾಡಿಗೆ ಮತ್ತು ಠೇವಣಿಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಗೆ ವೇದಿಕೆಯಾಗಿದೆ.

ಅನಿತಾ ರಾಣೆ ಎಂಬುವವರು, ಬೆಂಗಳೂರು ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

Advertisement

ಅಭಿತೋಷ್ ಅನ್ನೋರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಬದುಕಬೇಕು ಎಂದು ನಿರ್ಧರಿಸುವವರಿಗೆ ನಿಜಕ್ಕೂ ಇದೊಂದು ಎಚ್ಚರಿಕೆಯ ಗಂಟೆ. ದುಡಿದದ್ದೆಲ್ಲಾ ಬಾಡಿಗೆ ಕಟ್ಟಾಕೆ ಸರಿ ಎಂಬ ಮಾತು ಬೆಂಗಳೂರಿನಲ್ಲಿ ಜನಜನಿತ. ಕೊರನಾ ಮುಗಿದ ಮೇಲಂತು ಸಿಲಿಕಾನ್ ಸಿಟಿಯಲ್ಲಿ ಬಾಯಿಗೆ ಬಂದ ರೇಟ್ ಹೇಳುತ್ತಾರೆ. ಮನೆ ಖಾಲಿ ಇದ್ರು ತಾವು ನಿರೀಕ್ಷಿಸಿದಷ್ಟು ಭಾಡಿಗೆ ಬಂದಿಲ್ಲ ಅಂದ್ರೆ ಹಾಗೆ ಖಾಲಿ ಬೇಕಾದ್ರು ಇಟ್ಟುಕೊಳ್ಳುತ್ತಾರೆ, ಆದ್ರೆ ಬಾಡಿಗೆಗ ಮಾತ್ರ ಕೊಡಲ್ಲ. ಇದು ಸದ್ಯದ ಬೆಂಗಳೂರಿನ ಬಾಡಿಗೆ ಮನೆ ಮಾಲಿಕರ ಸ್ಟೇಟಸ್..

Advertisement

ಅವರ ಈ ಹಠಮಾರಿತನಕ್ಕೆ ಬಾಡಿಗೆದಾರರು ಕಿಡ್ನಿ ಮಾರಿ ಬದುಕುವ ಪರಿಸ್ಥಿತಿ ಬಾರದಿದ್ದರೆ ಅಷ್ಟೇ ಸಾಕು..!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
2025 ರ ಜನವರಿಯಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ
November 20, 2024
4:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror