ರೈತ ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ರೈತನ ಖಾತೆಗೆ ಹಣ ಯಾವಾಗ ಜಮೆ ಆಗುತ್ತದೆ ಎಂದು ಎಲ್ಲಾ ರೈತರು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.
ಸರ್ಕಾರವು ಈ ಬಾರಿ ಕಿಸಾನ್ ಹಣವನ್ನು ಇದೇ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ. ಸರ್ಕಾರವು ರೈತರ ಹಿತದೃಷ್ಠಿಯಿಂದ ಇಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ಕಂತಿನ ಹಣವನ್ನು 6 ತಿಂಗಳಿಗೊಮ್ಮೆ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ. ಈ ಬಾರಿ ಕಂತಿನ ಹಣವನ್ನು ಫೆಬ್ರವರಿ 27 ಕ್ಕೆ ಜಮಾ ಮಾಡಲಾಗುತ್ತದೆ. ಫೆಬ್ರವರಿ 27 ಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗಾವಿಗೆ ಆಗಮಿಸಲಿದ್ದಾರೆ. ಈ ಸಮಯದಲ್ಲಿ ಹಲವಾರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ಸಮಯದಲ್ಲಿ ಕಂತಿನ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ಕಂತು ಮಾರ್ಚ್‌ನಲ್ಲಿ 13 ನೇ ಕಂತು ಜಮಾ ಆಗಲಿದೆ. ಫೆಬ್ರವರಿ 27 ಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ರೈತರು 54 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.