ಹಾಲನ್ನು(Milk) ಭೂಲೋಕದ ಅಮೃತ(Nectar) ಎನ್ನಲಾಗುತ್ತದೆ. ಆದರೆ ಹಸುವಿನ ಹಾಲಿಗೆ(Cow Milk) ಮೊದಲ ಪ್ರಾಶಸ್ತ್ಯ. ತದನಂತರ ಎಮ್ಮೆ, ಮೇಕೆ, ಕತ್ತೆ ಹಾಲು(Baffalo, Goat, Donkey) ಹೀಗೆ. ದನದ ಹಾಲಿನಷ್ಟೇ ಪ್ರಾಮುಖ್ಯತೆ ಇರುವುದು ಎಮ್ಮೆ ಹಾಲಿಗೆ. ಹಳ್ಳಿಗಳಲ್ಲಿ ಇಂದಿಗೂ ಎಮ್ಮೆ ಹಾಲಿನ ಉಪಯೋಗ ಇದೆ. ಆದರೆ ಪಟ್ಟಣಗಳಲ್ಲಿ ನಂದಿನಿ ಪ್ಯಾಕೆಟ್(Nandini milk) ಹಾಲಿನದ್ದೇ ಕಾರುಬಾರು. ಅದರಲ್ಲೂ ದನದ ಹಾಲಿಗೆ ಡಿಮ್ಯಾಂಡ್. ಇದೀಗ ಎಮ್ಮೆ ಹಾಲನ್ನು ಕೆಎಂಎಫ್ ನವರು ಪ್ಯಾಕೆಟ್ ತುಂಬಿ ಮಾರಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ಕೆಎಂಎಫ್ (KMF) ಎಮ್ಮೆ ಹಾಲು (Buffalo Milk) ಶುಕ್ರವಾರದಿಂದ ಮಾರುಕಟ್ಟೆಗೆ ಲಭ್ಯವಾಗುತ್ತಿದ್ದು, ಗ್ರಾಹಕರಿಂದಲೂ ಭಾರೀ ಬೇಡಿಕೆ ಬರುತ್ತಿದೆ.
ಪ್ರತಿ ಲೀಟರ್ ಹಾಲಿಗೆ (Milk) 60 ರೂ. ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರೂಪಾಯಿಗೆ (5 ರೂ. ಪ್ರೋತ್ಸಾಹಧನವನ್ನೊಳಗೊಂಡು) ಖರೀದಿ ಮಾಡಲಾಗುತ್ತಿದೆ.
ಕೆಎಂಎಫ್ ವತಿಯಿಂದ ಎಮ್ಮೆ ಹಾಲು ಪೂರೈಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ನಂದಿನಿ ಎಮ್ಮೆ ಹಾಲನ್ನು (Nandini Buffalo Milk) ಮಾರುಕಟ್ಟೆಗೆ ಬಿಡಲಾಗಿತ್ತು. ಆದ್ರೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಅಂದು ಪ್ರತಿದಿನ ಸುಮಾರು 5,000 ಲೀಟರ್ ಹಾಲನ್ನು ಕೆಎಂಎಫ್ ಮಾರಾಟ ಮಾಡುತ್ತಿತ್ತು. ಸದ್ಯ ಬೆಂಗಳೂರು ಸೇರಿದಂತೆ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾರುಕಟ್ಟೆಗಳಲ್ಲಿಯೂ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ.
KMF (Buffalo Milk) is available in the market from Friday (today) in the state and there is a huge demand from consumers. 60 per liter of milk. is scheduled. Milk unions are supplied with 60 thousand liters of buffalo milk every day. It is being purchased from farmers at Rs 39.50 per liter (including Rs 5 subsidy). – ಅಂತರ್ಜಾಲ ಮಾಹಿತಿ