ಹಾಲಿನ (Milk Rate) ಬೆಲೆ ಹೆಚ್ಚಳದ ಕೆಎಂಎಫ್ (KMF) ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮ್ಮತಿ ಸೂಚಿಸಲಿಲ್ಲ. ಹೀಗಾಗಿ ಹಾಲಿನ ದರ ಏರಿಕೆಯ ಗ್ರಾಹಕರ ಹೊರೆ ತಗ್ಗಿದಂತಾಗಲಿದೆ. ಈಗಾಗಲೇ ಪೇಸಿಎಂ ಅಭಿಯಾನ ಸೇರಿದಂತೆ ವಿವಿಧ ಅಬಿಯಾನ ಸಂಕಷ್ಟಗಳ ನಡುವೆ ಹಾಲಿನ ದರ ಏರಿಕೆಗೆ ಬಿಸಯಿಂದ ಸರ್ಕಾರದ ಮೇಲೆ ಇನ್ನಷ್ಟು ಋಣಾತ್ಮಕ ಅಭಿಪ್ರಾಯ ಬೀರುವುದನ್ನು ತಪ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ 3 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಸಲ್ಲಿಸಿರುವ ಪ್ರಸ್ತಾವನೆಗೆ ಸಿಎಂ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ. ಹಾಲಿನ ಬೆಲೆ ಹೆಚ್ಚಳ ಮಾಡುವುದರಿಂದ ಗ್ರಾಹಕರಿಗೆ ಹೊರೆಯಾಗಲಿದೆ. ಆದ್ದರಿಂದ ಪರ್ಯಾಯ ಮಾರ್ಗಗಳನ್ನು ಹುಡುಕಿ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವಿಸ್ತರಿಸಿಕೊಳ್ಳುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel