ರಕ್ತದಾನ ಮಾಡುವ ಮುನ್ನ ಈ ಎಲ್ಲಾ ಆಂಶಗಳನ್ನು ತಿಳಿದುಕೊಳ್ಳಿ

December 11, 2025
7:41 AM

ರಕ್ತದಾನ ಮಹಾದಾನ ಎಂಬುದು ನಮಗೆಲ್ಲ ಗೊತ್ತಿದೆ. ಹಾಗಾಂತ ನಮ್ಮ ಆರೋಗ್ಯವನ್ನು ಕಡೆಕಣಿಸುತ್ತಾ ರಕ್ತದಾನ ಮಾಡಲು ಹೋದರೆ ಜೀವಕ್ಕೆ ಆಪತ್ತು ಬರುವುದು ಖಂಡಿತ. ಆಸ್ಪತ್ರೆಗಳಲ್ಲಿ ವೈದ್ಯರೇ ಆಗಲಿ ರಕ್ತ ತೆಗೆದುಕೊಳ್ಳುವ ಮುನ್ನ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಾರೆ. ಯಾಕೆಂದರೆ ಕೆಲವರಿಗೆ ರಕ್ತದಾನ ಮಾಡಿದ ನಂತರ ಆಯಾಸ ತಲೆಸುತ್ತು ಇತ್ಯಾದಿ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಕ್ತದಾನ ಮಾಡುವ ಮುಂಚಿತವಾಗಿ ನಾವು ಯಾವ ಆಹಾರವನ್ನು ಸೇವಿಸಿದ್ದೇವೆ ಎಂಬುದು ಮುಖ್ಯವಾಗಿದೆ.

ರಕ್ತದಾನಕ್ಕೆ ಮೊದಲು ಪೌಷ್ಟಿಕ, ಲಘು ಮತ್ತು ಕಬ್ಬಿಣಾಂಶಯುಕ್ತ ಆಹಾರ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಹಿಮೋಗ್ಲೋಬಿನ್ ಮಟ್ಟ ಉತ್ತವೂವಾಗಿರುತ್ತದೆ ಎಂದು ವೈದ್ಯರ ಸಲಹೆಯನ್ನು ನೀಡುತ್ತಾರೆ. ನಮ್ಮಲ್ಲಿ ಯಾವರೀತಿ ಆಹಾರ ಪದ್ಥತಿಗಳು ಇರುತ್ತದೋ ಆದರಂತೆ ಆರೋಗ್ಯ ಇರಲು ಸಾಧ್ಯ. ರಕ್ತದಾನಕ್ಕಿಂತ ಮೊದಲು ಆಹಾರ ಕ್ರಮ ಹೇಗಿರಬೇಕು?

  •  ಕಬ್ಬಿಣಾಂಶ ಸಮೃದ್ಧ ಆಹಾರ: ರಕ್ತದಾನದ ಮೊದಲು ಅಂದರೆ 24 ಗಂಟೆಗಳ ಮುಂಚಿತವಾಗಿ ಕಬ್ಬಿಣಾಂಶುಕ್ತ ಆಹಾರ ಸೇವನೆ ಉತ್ತಮ. ಪಾಲಕ್, ಮೆಂತ್ಯೆ, ಬೀಟ್ರೋಟ್, ಹಣ್ಣುಗಳು, ಇತ್ಯಾದಿಗಳ ಸೇವನೆಯಿಂದ ಕಬ್ಬಿಣಾಂಶ ಸಮೃದ್ಧವಾಗುತ್ತದೆ.
  •  ಪ್ರೊಟೀನ್ ಯುಕ್ತ ಆಹಾರ: ರಕ್ತದಲ್ಲಿ ಪ್ಲಾಸ್ಮಾ ಮತ್ತು ಇತರ ಘಟಕಗಳನ್ನು ಪಡೆದುಕೊಳ್ಳಲು ಪ್ರೋಟೀನ್ ಯುಕ್ತ ಆಹಾರ ಸಹಕಾರಿಸುತ್ತದೆ.
  • ಲಘು ಉಪಹಾರ: ಖಾಲಿ ಹೊಟ್ಟೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಿಕೊಳ್ಳಬಾರದು. ಹಾಗಾಂತ ಎಣ್ಣೆಯುತ ಆಹಾರವೂ ಒಳ್ಳೆಯದಲ್ಲ.
  • ನೀರಿನಾಂಶ: ನೀರಿನಾಂಶವಿರುವ ಆಹಾರ ಸೇವನೆ ಉತ್ತಮ. ಏಕೆಂದರೆ ರಕ್ತದಲ್ಲಿ ಬಹು ಪಾಲು ನೀರಿರುತ್ತದೆ. ಆದ್ದರಿಂದ ರಕ್ತದಾನದ ಸಮಯ ದ್ರವದ ಅಂಶ ಕಡಿಮೆಯಾದರೆ ತಲೆತಿರುಗುವಿಕೆ ಬರಲು ಕಾರಣವಾಗುತ್ತದೆ. ಎಳೆ ನೀರು, ಲಿಂಬೆರಸ, ಹಣ್ಣಿನ ಜ್ಯೂಸ್ ಗಳ ಸೇವನೆ ಉತ್ತಮ.
    ರಕ್ತದಾನದ ಮಾಡುವ ಮುನ್ನ ನಮ್ಮ ಆರೋಗ್ಯ ಯಾವರೀತಿ ಇದೆ ಯಾವರೀತಿ ಆಹಾರವನ್ನು ಸೇವಿಸಿದ್ದೇವೆ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಅತೀಯಾದ ಎಣ್ಣೆ ಅಂಶವಿರುವ ಆಹಾರವನ್ನು ಎಂದಿಗೂ ಸೇವಿಸಬಾರದು. ಈ ಎಲ್ಲ ಅಂಶಗಳನ್ನು ಸರಿಯಾಗಿ ಪಾಲಿಸಿದರೆ. ರಕ್ತದಾನದ ನಂತರ ತಲೆಸುತ್ತು, ಹಿಮೋಗ್ಲೋಮಿನ್ ಕಡಿಮೆಯಾಗುವುದು ಇತ್ಯಾದಿ ತೊಂದರೆ ಯಾಗುವುದಿಲ್ಲ.
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ
January 9, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror