ನಾಡಿನತ್ತ ಗಜ ಪಯಣ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿಯಲ್ಲಿ ಇಬ್ಬರ ಪ್ರಾಣವನ್ನೇ ಬಲಿಪಡೆದಿತ್ತು. ಆಮೇಲೆ ನರ ಹಂತಕ ಆನೆಯನ್ನು ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸವನ್ನೇ ಪಡಬೇಕಾಯಿತು. ಆನೆ ಮತ್ತು ಮನುಷ್ಯನ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಹಾಗೆಯೇ ಇದು ನಿಲ್ಲದ ಸಮಸ್ಯೆ. ಆದರೂ ಈ ಸಮಸ್ಯೆ ಪರಿಹಾರಕ್ಕೆ ಕೆಲವೊಂದು ಮಾರ್ಗಗಳನ್ನು ಅರಣ್ಯ ಇಲಾಖೆ ಕಂಡು ಹಿಡಿಯುತ್ತಲೇ ಇದೆ. ಇದೀಗ ಆನೆ ಆಗಮನದ ಸುದ್ದಿ ತಿಳಿಯಲು ಹೊಸ ಸಾಧನವೊಂದನ್ನು ಅಳವಡಿಸಲು ಮುಂದಾಗಿದೆ.
ಸಾರ್ವಜನಿಕರಿಗೆ ಕೊಡುತ್ತೆ ಎಚ್ಚರಿಕೆ: ಇವುಗಳು ಸ್ವಯಂ ಚಾಲಿತವಾಗಿ ಕೆಲಸ ನಿರ್ವಹಿಸುವ ಸಿಗ್ನಲ್ ಕೂಡಾ ಆಗಿದ್ದು, ಕಾಡಾನೆಗಳ ಬಗ್ಗೆ ವಾಹನ ಸವಾರರಿಗೆ ಹಾಗೂ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡಿ ಎಚ್ಚರಿಸುತ್ತದೆ.
ಆನೆ ಚಲನವಲನ ಕಂಡ್ರೆ ರೆಡ್ ಲೈಟ್! : ಸದ್ಯ ಮೀನುಕೊಲ್ಲಿ ಮತ್ತು ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿರುವ ಐದು ಸಂಘರ್ಷ ವಲಯಗಳಲ್ಲಿ ಆನೆ ಫಲಕಗಳನ್ನು ಹಾಕಲಾಗಿದೆ. ಈ ಸೈನ್ ಬೋರ್ಡ್ಗಳು ಕಾಡು ಆನೆಗಳ ಚಲನವಲನ ಅಥವಾ ಉಪಸ್ಥಿತಿಯ ಬಗ್ಗೆ ಪ್ರಯಾಣಿಕರನ್ನು ಎಚ್ಚರಿಸುತ್ತವೆ. ಕಾಡಾನೆಗಳ ಚಲನವಲನ ಪತ್ತೆಯಾದಾಗ ಈ ಬೋರ್ಡ್ನಲ್ಲಿ ರೆಡ್ ಲೈಟ್ ಬೆಳಗುತ್ತವೆ. ಅಷ್ಟೇ ಅಲ್ದೇ, ಪ್ರಯಾಣಿಕರನ್ನು ಅಲರ್ಟ್ ಇರುವಂತೆ ಮಾಡುತ್ತವೆ.
ಅಲರ್ಟ್ ಮೆಸೇಜ್ ಹೋಗುತ್ತೆ! : ಈ ಸಿಗ್ನಲ್ ಬೋರ್ಡ್ ಆನೆಯ ಚಲನೆಯನ್ನು ಪತ್ತೆಹಚ್ಚಿದ ನಂತರ SMS ಅನ್ನು ಸರ್ವರ್ ವ್ಯವಸ್ಥೆಗೆ ರವಾನಿಸುತ್ತವೆ. ಸ್ಥಳೀಯ DRFO ಗಳು ಕಾಡು ಆನೆಗಳ ಚಲನವಲನವನ್ನು ಟ್ರ್ಯಾಕ್ ಮಾಡುತ್ತಾರೆ. ಹೀಗೆ ಒಂದು ಕಡೆ ಪ್ರಯಾಣಿಕರಿಗೆ ಅಲರ್ಟ್ ಮೆಸೇಜ್ ಹೋದರೆ, ಇನ್ನೊಂದೆಡೆ ಅರಣ್ಯ ಇಲಾಖೆಯನ್ನೂ ಎಚ್ಚರಿಸುತ್ತವೆ. ಇನ್ನು ಈ ಸಿಗ್ನಲ್ ಬೋರ್ಡ್ ಸೌರ ಚಾಲಿತ ವ್ಯವಸ್ಥೆಯಾಗಿದ್ದು, ಈ ಫಲಕಗಳು ಮತ್ತು ಸಿಗ್ನಲ್ ಬೋರ್ಡ್ಗಳನ್ನು ಸೂರ್ಯನ ಬೆಳಕು ಇಲ್ಲದ ಸಂದರ್ಭದಲ್ಲಿಯೂ ಸಂಪರ್ಕಿಸಬಹುದು.
ಒಟ್ಟಾರೆ ಹಲವು ವರ್ಷಗಳ ಆನೆ-ಮಾನವ ಸಂಘರ್ಷದಿಂದ ಕಾಡಾನೆ ನಿಯಂತ್ರಣಕ್ಕೆ ವಿದ್ಯುತ್ ಬೇಲಿ, ರೈಲ್ವೇ ಬ್ಯಾರಿಕೇಡ್ ಅಳವಡಿಕೆ, ಆನೆಗೇಟ್, ಕಾಡಾನೆಗಳಿಗೆ ರೇಡಿಯೋ ಕಾಲರ್ ಹೀಗೆ ಹತ್ತು ಹಲವು ಯೋಜನೆಗಳನ್ನ ಹಾಕಿಕೊಳ್ಳಲಾಗಿತ್ತು. ಇದೀಗ ಅದಕ್ಕೊಂದು ಸೇರ್ಪಡೆ ಅನ್ನೋ ಹಾಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇನ್ನಾದ್ರೂ ಆನೆಗಳ ಹಾಗೂ ಮಾನವನ ನಡುವಿನ ಸಂಘರ್ಷ ಕೊನೆಯಾಗಲಿ ಅನ್ನೋ ಆಶಯ ಎಲ್ಲರದ್ದು. ಕೊಡಗು ಜಿಲ್ಲೆಯಲ್ಲಿ ಯಶಸ್ವಿ ಕಂಡರೆ ನಮ್ಮಲ್ಲೂ ಈ ಸಾಧನವನ್ನು ಅಳವಡಿಸುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಬಹದು.
ಎಲ್ಲಾ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ವ್ಯಾಪ್ತಿಯಲ್ಲಿ ನೀರು ಉಳಿಸಿ ಅಭಿಯಾನವನ್ನು ಯುನಿಸೆಫ್…
ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಖಾಲಿ ಇರುವ ಮೂರು ಸಾವಿರ ಲೈನ್ಮನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಏಪ್ರಿಲ್…
ರೈತರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಮೊದಲ ಆದ್ಯತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ…
ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಲ್ಲಿಂದು ಆಯೋಜಿಸಿದ್ದ ಸುಸ್ಥಿರ ಮಣ್ಣಿನ…
ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ…