ನಂಬಬೇಕು ಅದೃಷ್ಟ, ಕೊಹ್ಲಿಯಿಂದ ದುರಾದೃಷ್ಟವೇ?

November 6, 2021
11:46 AM

ಬುಧವಾರ ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ 20 ವಿಶ್ವಕಪ್ ನಲ್ಲಿ ಭಾರತ ಹಳೆಯ ಬ್ಯಾಟಿಂಗ್ ಖದರ್ ತೋರಿಸಿದ್ದು, ಸಂಘಟಿತ ಪ್ರದರ್ಶನ ಸಂತೋಷವೇ. ಆದರೆ ಸೆಮೀಫೈನಲ್ ಗೆ ಅದೃಷ್ಟ ಕೈ ಹಿಡಿಯುವುದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಹೌದು,ಕ್ರೀಡಾಭಿಮಾನಿಗಳು ಯೋಚಿಸಬೇಕಾದ ವಿಚಾರವೇ. ಕಾಗದದ ಮೇಲೆ ಟಿ 20 ಮಾದರಿಗೆ ಹೇಳಿ ಮಾಡಿಸಿದಂತೆ ಬಲಾಢ್ಯ ತಂಡವೇ ಆಗಿದ್ದರೂ ಒಗ್ಗಟಿನ ಕೊರತೆಯಿಂದ ಹಾಗೂ ಸ್ವಯಂ ತಪ್ಪುಗಳಿಂದ ಸೆಮಿಸ್ ಹಾದಿ ದುರ್ಗಮಗೊಳಿಸಿಕೊಂಡಿದೆ ಎನ್ನುವುದೂ ನಿಜ ಆಗಿದೆ.

Advertisement

ಆಫ್ಘನ್ ವಿರುದ್ಧ ತೋರಿದ ಅತ್ಯದ್ಭುತ ತಾಕತ್ತಿನ ಪ್ರದರ್ಶನ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಬಂದಿದ್ದರೆ ಅಭಿಮಾನಿಗಳ ಹರ್ಷಕ್ಕೆ ಎಲ್ಲೆಯೇ ಇರುತ್ತಿರಲಿಲ್ಲವೇನೊ. ವಾಸ್ತವದಲ್ಲಿ ಭಾರತಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನ ಇನ್ನೂ ಕ್ರಿಕೆಟ್ ಕೂಸು.ಆದರೂ ಭಾರತಕ್ಕಿಂತ ಎರಡು ಸ್ಥಾನ ಮೇಲಿರುವುದು ಹಾಗೂ ಎಲ್ಲ ವಿಭಾಗಗಳಲ್ಲಿಯೂ ಭಾರತಕ್ಕೆ ಸಮಾನ ಪ್ರದರ್ಶನ ನೀಡುತ್ತಿರುವುದು ನಮ್ಮ ಪಾಲಿನ ದುರಾದೃಷ್ಟ.

ಇಲ್ಲಿ ಮುಖ್ಯವಾಗಿ ಕಂಡು ಬರುವ ತಪ್ಪುಗಳು ಇವುಗಳೇ ಆಗಿವೆ. ನಾಯಕ ವಿರಾಟ್ ಕೊಹ್ಲಿಯ ಅತಿರೇಖದ ಎಡವಟ್ಟುಗಳು ಹಾಗೂ ಅನಗತ್ಯ ಪ್ರಯೋಗಗಳು. ಕೊಹ್ಲಿ ಕೋರಿಕೆ ಮೇರೆ ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಿಸಿಸಿಐ ಮೆಂಟರ್ ಎಂದು ನೇಮಕ ಮಾಡಿದರೂ ಅವರ ಸಲಹೆಗಳಿಗೆ ಕಿಮ್ಮತ್ತಿನ ಬೆಲೆ ಇಲ್ಲ. ಪರಿಣಾಮ ಗೆಲ್ಲುವಂಥ ಪಂದ್ಯಗಳನ್ನು ಸುಲಭವಾಗಿ ಕೈ ಚೆಲ್ಲಿದ್ದು.

ಇದೀಗ ಭಾರತದ ಸೆಮಿಸ್ ಹಾದಿ ಸುಗಮಗೊಳ್ಳಲು ಮುಂದಿನ ಎರಡೂ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಿದ್ದು,ಜತೆಗೆ ಬದ್ಧ ವೈರಿ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಿದೆ.ಜತೆಗೆ ನ್ಯೂಜಿಲ್ಯಾಂಡ್ ಮುಂದಿನ ಪಂದ್ಯದಲ್ಲಿ ಸೋಲಬೇಕಿದೆ.ಇದರಿಂದ ಮಾತ್ರ ಭಾರತದ ಸೆಮಿಸ್ ಹಾದಿ ಸುಗಮವಾಗಲಿದೆ ಎಂದು ಕ್ರಿಕೆಟ್ ಪಂಡಿಥ ಲೆಕ್ಕಾಚಾರ.

ಹಿರಿಯ ಹಾಗೂ ಮಾಜಿ ಆಟಗಾರರ ಆಕ್ರೋಶ, ಧೋನಿ ಕೊಹ್ಲಿ ನಡುವೆ ಇದೇ ವಿಶೇಷ ವ್ಯತ್ಯಾಸ. ಧೋನಿಯವರು ಹಿರಿಯ ಹಾಗೂ ಮಾಜಿ ಆಟಗಾರರ ಸಲಹೆಗಳನ್ನು ಗೌರವಿಸಿದರೆ,ಕೊಹ್ಲಿ ತಿರಸ್ಕರಿಸುವ ಮೂಲಕ ಎಡವಟ್ಟು ನಿರ್ಧಾರಗಳಿಗೆ ಕೈ ಹಾಕುತ್ತಿರುವುದೇ ತಂಡಕ್ಕೆ ಬಹು ದೊಡ್ಡ ಹಿನ್ನಡೆ. ಜತೆಗೆ ಡಿ.ಆರ್.ಎಸ್ ಬಳಕೆಯಲ್ಲಿಯೂ ವಿಫಲವಾಗುತ್ತಿರುವುದು ಕೂಡ ದುಬಾರಿಯಾಗುತ್ತಿದೆ.

Advertisement

ಏನೆ ಆಗಲಿ, ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸದೆ ಇದ್ದರೆ ಹಾಗೂ ಅದೃಷ್ಟ ಕೈಗೂಡಿದರೆ ಮಾತ್ರ ವಿಶ್ವಕಪ್ ನಮ್ಮದಾಗಲಿದೆ ಎಂಬುದು ಸತ್ಯ.

# ಬಾಲಚಂದ್ರ ಕೋಟೆ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..
July 8, 2025
10:18 AM
by: The Rural Mirror ಸುದ್ದಿಜಾಲ
ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ
July 8, 2025
7:11 AM
by: The Rural Mirror ಸುದ್ದಿಜಾಲ
ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!
July 8, 2025
7:04 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್
July 7, 2025
11:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group