ನೆಲ್ಯಾಡಿ- ಕೊಕ್ಕಡ ರಸ್ತೆ ಅವ್ಯವಸ್ಥೆ | ದುರಸ್ತಿ ಯಾವಾಗ ಎಂದು ಕೇಳುತ್ತಾರೆ ಗ್ರಾಮದ ಜನ |

March 4, 2022
2:36 PM

ಕಡಬ ತಾಲೂಕಿನ ನೆಲ್ಯಾಡಿಯಿಂದ ಕೊಕ್ಕಡ ವನ್ನು ಸಂಪರ್ಕಿಸುವ ನೆಲ್ಯಾಡಿ ಪುತ್ಯೆ‌ ರಸ್ತೆಯ ಕೇವಲ ಅರ್ಧ ಕಿಲೋ ಮೀಟರ್ ರಸ್ತೆ ಜನಸಂಚಾರಕ್ಕೆ ಅಯೋಗ್ಯವಾದ ರಸ್ತೆಯಾಗಿ ಮಾರ್ಪಟ್ಟಿದೆ.

Advertisement
Advertisement
Advertisement
Advertisement

ಪ್ರಸ್ತುತ ದಿನಗಳಲ್ಲಿ ನೆಲ್ಯಾಡಿಯು ವ್ಯಾಪಾರ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹೀಗೆ ನಾನಾ ವಿಷಯದಲ್ಲಿ ಬೆಳೆದುನಿಂತ ಮುಖ್ಯ ಪೇಟೆಯಾಗಿದೆ. ಹೀಗಾಗಿ ಕೊಕ್ಕಡ , ಪುತ್ಯೆ, ಹಾರ ಪ್ರದೇಶದ ಜನರು ನೆಲ್ಯಾಡಿಯನ್ನು ಹೆಚ್ಚಿನ ವಹಿವಾಟುಗಳಿಗಾಗಿ ದಿನನಿತ್ಯ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಜನರು ಇದೇ ಪುತ್ಯೆ ಮಾರ್ಗವನ್ನು‌ ಬಳಸಿಕೊಂಡು ನೆಲ್ಯಾಡಿಗೆ ಹೋಗಬೇಕಾಗಿದೆ. ಆದರೆ ಸಂಚಾರಕ್ಕೆ ಮಾತ್ರಾ ಅಯೋಗ್ಯವಾಗಿದೆ.

Advertisement

ಈ ಭಾಗದ ರಸ್ತೆಯ ಮಧ್ಯದಲ್ಲಿ ಒಂದು ಸೇತುವೆ ಇದ್ದು, ಸೇತುವೆಯ ಒಂದು ಭಾಗ ಕಡಬ ತಾಲೂಕಿಗೆ ಸೇರಿದರೆ ಸೇತುವೆಯ ಇನ್ನೊಂದು ಭಾಗದ ರಸ್ತೆಯು ಬೆಳ್ತಂಗಡಿ ತಾಲೂಕಿಗೆ ಸೇರಿದೆ. ಪ್ರಸ್ತುತ ಈ ರಸ್ತೆಯು ಜಿಲ್ಲಾ ಪಂಚಾಯತ್ ರಸ್ತೆಯಿಂದ ಕಳೆದ ಐದು ತಿಂಗಳ ಹಿಂದೆಯೇ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹಾಗೂ ಈ ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತಿದೆ.

Advertisement

ಕರ್ನಾಟಕ ಕೇರಳದ ಗಡಿಭಾಗವಾದ ಸುಳ್ಯ ಸಮೀಪದ ಪೈಚಾರಿನಿಂದ ಆರಂಭಗೊಳ್ಳುವ ಈ ರಸ್ತೆಯು ಬೆಳ್ಳಾರೆ – ಸವಣೂರು- ಆಲಂಗಾರು – ನೆಲ್ಯಾಡಿ- ಕೊಕ್ಕಡ- ಪಟ್ರಮೆ -ಧರ್ಮಸ್ಥಳ – ಉಜಿರೆ- ಮುಂಡಾಜೆ ಮೂಲಕ ದಿಡುಪೆ ಸೇರಲಿದೆ. ರಸ್ತೆಯು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಕಾರಣ ಇಲ್ಲಿನ ಸ್ಥಳೀಯ ಆಡಳಿತಗಳು ಕೂಡ ಈ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಪ್ರಶ್ನಿಸಿದರೆ ನಮಗೆ ಸರಕಾರದಿಂದ ಅನುದಾನ ದೊರೆತಿಲ್ಲ ಹಾಗಾಗಿ ಕಾಮಗಾರಿಯನ್ನು ಆರಂಭಿಸಲು ಆಗುವುದಿಲ್ಲ ಎನ್ನುತ್ತಾರೆ.

ಸರ್ಕಾರ, ಆಡಳಿತ ಎಲ್ಲವೂ ಇದ್ದರೂ ಇಚ್ಛಾಶಕ್ತಿ ಮಾತ್ರ ನಿಮ್ಮಲ್ಲಿಲ್ಲ. ಚುನಾವಣೆ ಹತ್ತಿರ ಬಂದಾಗ ಮತಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳು ಈಗೊಂದು ಬಾರಿ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಇಲ್ಲಿನ ಜನರ ಕಷ್ಟ ಅರ್ಥ ಆದೀತು ಅನ್ನುವುದು ಇಲ್ಲಿನ ಜನರ ವಿಷಾದ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror