ಕಡಬ ತಾಲೂಕಿನ ನೆಲ್ಯಾಡಿಯಿಂದ ಕೊಕ್ಕಡ ವನ್ನು ಸಂಪರ್ಕಿಸುವ ನೆಲ್ಯಾಡಿ ಪುತ್ಯೆ ರಸ್ತೆಯ ಕೇವಲ ಅರ್ಧ ಕಿಲೋ ಮೀಟರ್ ರಸ್ತೆ ಜನಸಂಚಾರಕ್ಕೆ ಅಯೋಗ್ಯವಾದ ರಸ್ತೆಯಾಗಿ ಮಾರ್ಪಟ್ಟಿದೆ.
ಪ್ರಸ್ತುತ ದಿನಗಳಲ್ಲಿ ನೆಲ್ಯಾಡಿಯು ವ್ಯಾಪಾರ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹೀಗೆ ನಾನಾ ವಿಷಯದಲ್ಲಿ ಬೆಳೆದುನಿಂತ ಮುಖ್ಯ ಪೇಟೆಯಾಗಿದೆ. ಹೀಗಾಗಿ ಕೊಕ್ಕಡ , ಪುತ್ಯೆ, ಹಾರ ಪ್ರದೇಶದ ಜನರು ನೆಲ್ಯಾಡಿಯನ್ನು ಹೆಚ್ಚಿನ ವಹಿವಾಟುಗಳಿಗಾಗಿ ದಿನನಿತ್ಯ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಜನರು ಇದೇ ಪುತ್ಯೆ ಮಾರ್ಗವನ್ನು ಬಳಸಿಕೊಂಡು ನೆಲ್ಯಾಡಿಗೆ ಹೋಗಬೇಕಾಗಿದೆ. ಆದರೆ ಸಂಚಾರಕ್ಕೆ ಮಾತ್ರಾ ಅಯೋಗ್ಯವಾಗಿದೆ.
ಈ ಭಾಗದ ರಸ್ತೆಯ ಮಧ್ಯದಲ್ಲಿ ಒಂದು ಸೇತುವೆ ಇದ್ದು, ಸೇತುವೆಯ ಒಂದು ಭಾಗ ಕಡಬ ತಾಲೂಕಿಗೆ ಸೇರಿದರೆ ಸೇತುವೆಯ ಇನ್ನೊಂದು ಭಾಗದ ರಸ್ತೆಯು ಬೆಳ್ತಂಗಡಿ ತಾಲೂಕಿಗೆ ಸೇರಿದೆ. ಪ್ರಸ್ತುತ ಈ ರಸ್ತೆಯು ಜಿಲ್ಲಾ ಪಂಚಾಯತ್ ರಸ್ತೆಯಿಂದ ಕಳೆದ ಐದು ತಿಂಗಳ ಹಿಂದೆಯೇ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದೆ. ಹಾಗೂ ಈ ರಸ್ತೆಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ನೋಡಿಕೊಳ್ಳುತ್ತಿದೆ.
ಕರ್ನಾಟಕ ಕೇರಳದ ಗಡಿಭಾಗವಾದ ಸುಳ್ಯ ಸಮೀಪದ ಪೈಚಾರಿನಿಂದ ಆರಂಭಗೊಳ್ಳುವ ಈ ರಸ್ತೆಯು ಬೆಳ್ಳಾರೆ – ಸವಣೂರು- ಆಲಂಗಾರು – ನೆಲ್ಯಾಡಿ- ಕೊಕ್ಕಡ- ಪಟ್ರಮೆ -ಧರ್ಮಸ್ಥಳ – ಉಜಿರೆ- ಮುಂಡಾಜೆ ಮೂಲಕ ದಿಡುಪೆ ಸೇರಲಿದೆ. ರಸ್ತೆಯು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಕಾರಣ ಇಲ್ಲಿನ ಸ್ಥಳೀಯ ಆಡಳಿತಗಳು ಕೂಡ ಈ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯನ್ನು ಪ್ರಶ್ನಿಸಿದರೆ ನಮಗೆ ಸರಕಾರದಿಂದ ಅನುದಾನ ದೊರೆತಿಲ್ಲ ಹಾಗಾಗಿ ಕಾಮಗಾರಿಯನ್ನು ಆರಂಭಿಸಲು ಆಗುವುದಿಲ್ಲ ಎನ್ನುತ್ತಾರೆ.
ಸರ್ಕಾರ, ಆಡಳಿತ ಎಲ್ಲವೂ ಇದ್ದರೂ ಇಚ್ಛಾಶಕ್ತಿ ಮಾತ್ರ ನಿಮ್ಮಲ್ಲಿಲ್ಲ. ಚುನಾವಣೆ ಹತ್ತಿರ ಬಂದಾಗ ಮತಪ್ರಚಾರಕ್ಕಾಗಿ ಬರುವ ಜನಪ್ರತಿನಿಧಿಗಳು ಈಗೊಂದು ಬಾರಿ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಇಲ್ಲಿನ ಜನರ ಕಷ್ಟ ಅರ್ಥ ಆದೀತು ಅನ್ನುವುದು ಇಲ್ಲಿನ ಜನರ ವಿಷಾದ.
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…