ಅಡಿಕೆಗೆ ಕೊಳೆರೋಗ | ದ ಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆಗಾರರನ್ನು ಕಾಡಿದೆ ಕೊಳೆರೋಗ |

August 12, 2021
1:44 PM

Advertisement
ಅಡಿಕೆಗೆ ಕೊಳೆರೋಗ ಈ ಬಾರಿಯೂ ಕಾಡಿದೆ. ಬೆಳೆಗಾರರು ಈ ಬಾರಿಯೂ ರೋಗ ನಿಯಂತ್ರಣದ ಸಾಹಸದಲ್ಲಿದ್ದಾರೆ. ಮಳೆ-ಬಿಸಿಲಿನ ಆಟದ ನಡುವೆ ಕೊಳೆರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಅಡಿಕೆ ಬೆಳೆಗಾರರಿಗೆ ಕೊಳೆರೋಗ ಅಥವಾ ಮಹಾಳಿ ರೋಗ ನಿಯಂತ್ರಣ ಪ್ರತೀ ವರ್ಷದ ಮಳೆಗಾಲ ಬಹುದೊಡ್ಡ ಸವಾಲಿನ ಕೆಲಸ. ಈ ಬಾರಿಯೂ ಅಡಿಕೆಗೆ ಕೊಳೆರೋಗ ಬಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಕೊಳೆರೋಗ ನಿಯಂತ್ರಣವೇ ಸವಾಲಿನ ಕೆಲಸ. ಪ್ರತೀ ಬಾರಿ ಮಳೆಗಾಲದ ಮುನ್ನ ಔಷಧಿ ಸಿಂಪಡಣೆ ಅತೀ ಜರೂರಾಗಿ ಆಗಬೇಕಾದ ಕೆಲಸ. ಅದಾಗಿ ಸುಮಾರು 30  ದಿನಗಳ ಬಳಿಕ ಇನ್ನೊಂದು ಸುತ್ತಿನ ಔಷಧಿ ಸಿಂಪಡಣೆ ಅತೀ ಅಗತ್ಯವಾಗಿದೆ. ಈ ಸಮಯದಲ್ಲಿ ಬೆಳೆಗಾರರು ಸೋಲುತ್ತಾರೆ. ಔಷಧಿ ಸಿಂಪಡಣೆಗೆ ನುರಿತ ಕಾರ್ಮಿಕರ ಕೊರತೆ ಒಂದು ಕಾರಣವಾದರೆ ಎಡೆಬಿಡದೆ ಸುರಿಯುವ ಮಳೆಯೂ ಇನ್ನೊಂದು ಕಾರಣ. ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ವಿಜ್ಞಾನಿಗಳು ತಿಳಿಸುತ್ತಾರಾದರೂ ಅದರ ಹೊರತಾಗಿ ವಿವಿಧ ಬಗೆಯ ಔಷಧಿಗಳ ಸಿಂಪಡಣೆಯನ್ನೂ ಬೆಳೆಗಾರರು ಮಾಡಿ ಯಶಸ್ಸು ಕಂಡವರೂ ಇದ್ದಾರೆ.

ಈ ಬಾರಿ ವರ್ಷವಿಡೀ ಮಳೆಯ ಪ್ರಭಾವ ಇತ್ತು. ಮೇ ತಿಂಗಳ ಕೊನೆಯಲ್ಲಿಯೇ ಅಡಿಕೆ ಬೆಳೆಗಾರರಿಗೆ ಔಷಧಿ ಸಿಂಪಡಣೆ ಕೆಲವರಿಗೆ ಸಾಧ್ಯವಾಗಿತ್ತು. ಜೂನ್‌ ತಿಂಗಳಲ್ಲಿ  ಮಳೆಯ ಪ್ರಭಾವ ಸ್ವಲ್ಪ ಕಡಿಮೆ ಇದ್ದರೂ ಆ ಬಳಿಕ ಎಡೆಬಿಡದೆ ಸುರಿದ ಮಳೆಯ ಕಾರಣದಿಂದ ಮಲೆನಾಡು ಭಾಗವಾದ ಅದರಲ್ಲೂ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಕೊಳೆರೋಗ ಬಾಧಿಸಿದೆ. ಆದರೆ ಭಾರೀ ಪ್ರಮಾಣದಲ್ಲಿ ಕೊಳೆರೋಗ ಎಂದು ಹೇಳುವಷ್ಟು ಈ ಬಾರಿ ಇಲ್ಲದೇ ಇದ್ದರೂ ಕೆಲವು ಬೆಳೆಗಾರರ ತೋಟದಲ್ಲಿ  ವಿಪರೀತವಾಗಿ ಕಂಡುಬಂದಿದೆ. ಇದರ ನಿಯಂತ್ರಣಕ್ಕೆ ಸರ್ಕಸ್‌ ಮಾಡುತ್ತಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ
ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ
April 29, 2025
8:00 AM
by: ದ ರೂರಲ್ ಮಿರರ್.ಕಾಂ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group