ಅಡಿಕೆ ಬೆಳೆಗಾರರಿಗೆ ಕೊಳೆರೋಗ ಅಥವಾ ಮಹಾಳಿ ರೋಗ ನಿಯಂತ್ರಣ ಪ್ರತೀ ವರ್ಷದ ಮಳೆಗಾಲ ಬಹುದೊಡ್ಡ ಸವಾಲಿನ ಕೆಲಸ. ಈ ಬಾರಿಯೂ ಅಡಿಕೆಗೆ ಕೊಳೆರೋಗ ಬಾಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲ ಮಲೆನಾಡು ಭಾಗದ ಅಡಿಕೆ ಬೆಳೆಗಾರರಿಗೆ ಕೊಳೆರೋಗ ನಿಯಂತ್ರಣವೇ ಸವಾಲಿನ ಕೆಲಸ. ಪ್ರತೀ ಬಾರಿ ಮಳೆಗಾಲದ ಮುನ್ನ ಔಷಧಿ ಸಿಂಪಡಣೆ ಅತೀ ಜರೂರಾಗಿ ಆಗಬೇಕಾದ ಕೆಲಸ. ಅದಾಗಿ ಸುಮಾರು 30 ದಿನಗಳ ಬಳಿಕ ಇನ್ನೊಂದು ಸುತ್ತಿನ ಔಷಧಿ ಸಿಂಪಡಣೆ ಅತೀ ಅಗತ್ಯವಾಗಿದೆ. ಈ ಸಮಯದಲ್ಲಿ ಬೆಳೆಗಾರರು ಸೋಲುತ್ತಾರೆ. ಔಷಧಿ ಸಿಂಪಡಣೆಗೆ ನುರಿತ ಕಾರ್ಮಿಕರ ಕೊರತೆ ಒಂದು ಕಾರಣವಾದರೆ ಎಡೆಬಿಡದೆ ಸುರಿಯುವ ಮಳೆಯೂ ಇನ್ನೊಂದು ಕಾರಣ. ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ವಿಜ್ಞಾನಿಗಳು ತಿಳಿಸುತ್ತಾರಾದರೂ ಅದರ ಹೊರತಾಗಿ ವಿವಿಧ ಬಗೆಯ ಔಷಧಿಗಳ ಸಿಂಪಡಣೆಯನ್ನೂ ಬೆಳೆಗಾರರು ಮಾಡಿ ಯಶಸ್ಸು ಕಂಡವರೂ ಇದ್ದಾರೆ.
ಈ ಬಾರಿ ವರ್ಷವಿಡೀ ಮಳೆಯ ಪ್ರಭಾವ ಇತ್ತು. ಮೇ ತಿಂಗಳ ಕೊನೆಯಲ್ಲಿಯೇ ಅಡಿಕೆ ಬೆಳೆಗಾರರಿಗೆ ಔಷಧಿ ಸಿಂಪಡಣೆ ಕೆಲವರಿಗೆ ಸಾಧ್ಯವಾಗಿತ್ತು. ಜೂನ್ ತಿಂಗಳಲ್ಲಿ ಮಳೆಯ ಪ್ರಭಾವ ಸ್ವಲ್ಪ ಕಡಿಮೆ ಇದ್ದರೂ ಆ ಬಳಿಕ ಎಡೆಬಿಡದೆ ಸುರಿದ ಮಳೆಯ ಕಾರಣದಿಂದ ಮಲೆನಾಡು ಭಾಗವಾದ ಅದರಲ್ಲೂ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ಕೆಲವು ಕಡೆಗಳಲ್ಲಿ ಕೊಳೆರೋಗ ಬಾಧಿಸಿದೆ. ಆದರೆ ಭಾರೀ ಪ್ರಮಾಣದಲ್ಲಿ ಕೊಳೆರೋಗ ಎಂದು ಹೇಳುವಷ್ಟು ಈ ಬಾರಿ ಇಲ್ಲದೇ ಇದ್ದರೂ ಕೆಲವು ಬೆಳೆಗಾರರ ತೋಟದಲ್ಲಿ ವಿಪರೀತವಾಗಿ ಕಂಡುಬಂದಿದೆ. ಇದರ ನಿಯಂತ್ರಣಕ್ಕೆ ಸರ್ಕಸ್ ಮಾಡುತ್ತಿದ್ದಾರೆ.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…