ಶಿಥಿಲಾವಸ್ಥೆಯಿಂದ ಸಂಪೂರ್ಣ ಶಿಥಿಲಾವಸ್ಥೆಗೆ….! | ಕಟ್ಟ-ಕೊಲ್ಲಮೊಗ್ರ ಜನರ ಪಾಡು…! |

October 21, 2021
11:18 AM

ಅಭಿವೃದ್ಧಿ ನಿರಂತರ. ಯಾವತ್ತೂ  ಶಿಥಿಲದಿಂದ ಸುಧಾರಣೆಯ ಕಡೆಗೆ. ಆದರೆ ಗ್ರಾಮೀಣ ಭಾಗ ಕಟ್ಟ-ಕೊಲ್ಲಮೊಗ್ರ ಪ್ರದೇಶ ಜನರಿಗೆ ಹಾಗಲ್ಲ ಶಿಥಿಲದಿಂದ ಶಿಥಿಲಾವಸ್ಥೆ ಕಡೆಗೆ..!. ಬುಧವಾರದ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿ ಈ ಸ್ಥಿತಿ ಬಂದಿದೆ..!. ಘಟನೆ ಇದು.

Advertisement

ಸುಳ್ಯ ತಾಲೂಕಿನ ಕಟ್ಟ-ಕೊಲ್ಲಮೊಗ್ರ ಗ್ರಾಮೀಣ ಭಾಗ. ಕಾಡು ಹಾಗೂ ಶಿಥಿಲ ರಸ್ತೆಯ ಮೂಲಕ ಸಂಪರ್ಕ ಇರುವ ಊರು. ಇಲ್ಲಿ ಕಟ್ಟ – ಕೊಲ್ಲಮೊಗ್ರ ಮಾರ್ಗ ಮಧ್ಯೆ  ಮುಳುಗು ಸೇತುವೆ ಇದೆ. ಕಳೆದ ಸುಮಾರು ಆರು ವರ್ಷದಿಂದ ಸ್ವಲ್ಪ ಸ್ವಲ್ಪ ಶಿಥಿಲಾವಸ್ಥೆಯಿಂದ ಕೂಡಿತ್ತು. ಬುಧವಾರ ಸುರಿದ ಮಳೆಗೆ ಇದ್ದ ಸೇತುವೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ. 

ಈ ಹಿಂದೆ ದ್ವಿಚಕ್ರ ವಾಹನ ಸವಾರರು ದಾಟುತ್ತಿದ್ದು ಈಗ ದ್ವಿಚಕ್ರವಾಹನಕ್ಕೂ ಸವಾರಿ ಕಷ್ಟವಾಗಿದೆ. ಪಾದಾಚಾರಿಗಳಿಗೆ ಮಾತ್ರಾ ಹೋಗುವ ಸ್ಥಿತಿಗೆ ಬಂದಿದೆ. ಆಡಳಿತವು ಈ ಕಡೆಗೆ ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ  ಇಂತಹ ಸೇತುವೆಗಳು ಸಂಪರ್ಕದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಅತೀ ಅಗತ್ಯವಾಗಿ ದುರಸ್ತಿ ಆಗಬೇಕಿದೆ ಎಂಬುದು ಜನರ ಒತ್ತಾಯ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |
April 30, 2025
1:54 PM
by: ಸಾಯಿಶೇಖರ್ ಕರಿಕಳ
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ
ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ
April 30, 2025
10:18 AM
by: The Rural Mirror ಸುದ್ದಿಜಾಲ
ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!
April 30, 2025
10:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group