ತುಳುನಾಡು ಎಂದರೆ ದೈವಗಳ ನಾಡು. ದೈವಾರಾಧನೆಯೇ ಇಲ್ಲಿ ಪ್ರಮುಖ. ಹೀಗಾಗಿ ನಂಬಿದವನಿಗೆ ಇಂಬು ಖಚಿತ ಎಂಬುದು ಹಿಂದಿನಿಂದೂ ನಡೆದುಕೊಂಡಿದೆ ಬಂದಿದೆ. ಅಂತಹ ಪವಿತ್ರ ದೈವೀ ಶಕ್ತಿಗಳ ಪ್ರಕಟೀಕರಣವಾಗಿದೆ. ಮಂಗಳೂರಿನಲ್ಲಿ ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೇ ಕ್ಷೇತ್ರದಲ್ಲಿ ತಪ್ಪೊಪ್ಪಿ ಇದೀಗ ಪೊಲೀಸ್ ಇಲಾಖೆಯೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೊರಗಜ್ಜ ದೈವಸ್ಥಾನ ಇದೆ. ಅತ್ಯಂತ ಕಾರಣಿಕವಾದ ಈ ದೈವಗಳ ಆರಾಧನೆಯೂ ಶ್ರದ್ಧಾ ಭಕ್ತಿಯಿಂದ ಎಲ್ಲೆಡೆ ನಡೆಯುತ್ತದೆ. ಅಂತಹ ದೈವದ ಹುಂಡಿಯನ್ನು ಅಪವಿತ್ರಗೊಳಿಸಿದ ಘಟನೆ ನಡೆದಿತ್ತು. ಇದಕ್ಕಾಗಿ ಪೊಲೀಸ್ ಇಲಾಖೆಯೂ ಕ್ರಮ ಕೈಗೊಂಡಿತ್ತು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿತ್ತು.ಆದರೆ ಆರೋಪಿ ಪತ್ತೆಯಾಗಲಿಲ್ಲ.
ಇದೀಗ ಎಮ್ಮೆಕೆರೆಯಲ್ಲಿ ನಡೆದ ದೈವಸ್ಥಾನದ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ದೈವದ ಮುಂದೆ ಕ್ಷಮೆ ಕೇಳಿದ್ದು , ಎಲ್ಲಾ ಘಟನೆಗಳನ್ನು ವಿವರಿಸಿದ್ದಾನೆ, ಒಬ್ಬ ಮೃತಪಟ್ಟಿದ್ದು ಇನ್ನೊಬ್ಬನ ಆರೋಗ್ಯವೂ ಹದಗೆಟ್ಟಿದೆ ಎಂದೂ ಹೇಳಿದ್ದ.
ಈ ಘಟನೆಯ ಬಳಿಕ ಪೊಲೀಸ್ ಇಲಾಖೆ ಮಾಹಿತಿ ಪಡೆದಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಯುತ್ತಿದೆ.
ತುಳುನಾಡಿನ ದೈವ ದೇವರುಗಳು ನಂಬಿಕೆಯ ಪ್ರತೀಕಗಳು. ಹೀಗಾಗಿ ಇಲ್ಲಿ ದೈವಾರಾಧನೆ, ದೇವತಾ ಆರಾಧನೆಗಳಲ್ಲಿ ಎಲ್ಲೂ ಲೋಪಗಳು ನಡೆಯುವುದಿಲ್ಲ, ಮಾತ್ರವಲ್ಲ ಆ ದೈವೀ ಶಕ್ತಿಗಳ ಮುಂದೆ, ನಂಬಿಕೆಗಳ ಮುಂದೆ ಯಾವ ಆಟವೂ ನಡೆಯುವುದಿಲ್ಲ ಎನ್ನುವುದೂ ತಿಳಿಯುತ್ತದೆ ಎಂದು ಭಕ್ತರು ಅಭಿಪ್ರಾಯ ಪಡುತ್ತಾರೆ.