ಕೊರಗಜ್ಜ ದೈವ ತುಳುನಾಡಿನಲ್ಲಿ ಅತ್ಯಂತ ಕಾರಣಿಕ ದೈವವಾಗಿ ಹೆಸರುವಾಗಿಯಾಗಿದೆ. ಈ ದೈವಕ್ಕೆ ಹರಕೆ ಹೇಳಿದರೆ , ಪ್ರಾರ್ಥನೆ ಮಾಡಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದೀಗ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆ ಎಂಬಲ್ಲಿ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಮಾಡಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಹಾಗೂ ಕುತೂಹಲದ ಜೊತೆಗೆ ದೈವದ ಮೇಲಿನ ನಂಬಿಕೆ ಇಮ್ಮಡಿಯಾಗಿದೆ.
ಸುಳ್ಯದ ಗುತ್ತಿಗಾರು ಬಳಿಯ ಮೊಗ್ರದ ಮಾತ್ರಮಜಲು ಎಂಬಲ್ಲಿ ಶೀನಪ್ಪ ಎಂಬವರ ಮನೆಯ ವಠಾರದಲ್ಲಿ ಕೊರಗಜ್ಜ ದೈವದ ಕಟ್ಟೆ ಇದೆ. ಇಲ್ಲಿ ಪ್ರತೀ ತಿಂಗಳು ಸಂಕ್ರಮಣದ ದಿನ ಆರಾಧನೆಯಾಗುತ್ತದೆ. ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಇದ್ದಾಗ ಸಮೀಪದವರು ಕೊರಗಜ್ಜ ದೈವಕ್ಕೆ ಹರಿಕೆ ಹೇಳಿದ್ದರು. ಈ ಸಂದರ್ಭ ಕೊರಗಜ್ಜನಿಗೆ ಪ್ರಿಯವಾದ ವೀಳ್ಯದೆಲೆ , ಅಡಿಕೆಯನ್ನು ಕಟ್ಟೆಯ ಮೇಲೆ ಇರಿಸಿ ಪ್ರಾರ್ಥನೆ ಮಾಡಿದ್ದರು. ಅದಾಗಿ ಕೆಲವು ದಿನಗಳವರೆಗೂ ಹಸಿರಾಗಿಯೇ ಇದ್ದ ವೀಳ್ಯದೆಲೆ ನಂತರ ಬೇರು ಬರಲು ಆರಂಭಿಸಿತು. ತಕ್ಷಣವೇ ಶೀನಪ್ಪ ಅವರು ದೈವಜ್ಞರ ಮೂಲಕವೂ ತಿಳಿದಾಗ ಸತ್ಯದ ಅರಿವಾಯಿತು. ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಈಗ ಹೂಕುಂಡದಲ್ಲಿ ಇರಿಸಿದ್ದಾರೆ. ಈಗಲೂ ವೀಳ್ಯದೆಲೆ ಹಸಿರಾಗಿಯೇ ಇದೆ. ಕಳೆದ ತಿಂಗಳು ಈ ವೀಳ್ಯದೆಲೆಯನ್ನು ಕಟ್ಟೆಯ ಮೇಲೆ ಇರಿಸಲಾಗಿತ್ತು ಎಂದು ಹೇಳುತ್ತಾರೆ ಶೀನಪ್ಪ.
ಕೊರಗಜ್ಜ ದೈವ ತುಳುನಾಡಿನಲ್ಲಿ ಅತ್ಯಂತ ಕಾರಣಿಕ ದೈವ. ನಂಬಿದವರಿಗೆ ಇಂಬು ನೀಡುವ, ಮಾನಸಿಕ ಧೈರ್ಯ ನೀಡುವ ದೈವವಾಗಿ ಆರಾಧನೆಯಾಗುತ್ತಿದೆ. ಅಲ್ಲಲ್ಲಿ ಕೊರಗಜ್ಜನ ಕಟ್ಟೆಗಳು ಇವೆ, ಆರಾಧನೆಗಳು ನಡೆಯುತ್ತವೆ. ಪ್ರತೀ ಕಡೆಯಲ್ಲೂ ಇಂತಹದ್ದೇ ಒಂದೊಂದು ಪವಾಡಗಳು ನಡೆಯುತ್ತವೆ ಎಂದು ಹೇಳುತ್ತಾರೆ ದೈವ ನರ್ತಕ ವಸಂತ ಮೊಗ್ರ.
ವೀಳ್ಯದೆಲೆಯು ಸಾಮಾನ್ಯವಾಗಿ ವಾರದಲ್ಲಿ ಬಾಡಿ ಹೋಗುತ್ತದೆ. ಅಂತಹದ್ದರಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇರಿಸಿರುವ ಈ ವೀಳ್ಯದೆಲೆಯು ಹಸಿರಾಗಿಯೇ ಇದ್ದು ಈಗ ಬೇರು ಮೂಡಿರುವುದು ಭಕ್ತರಿಗೆ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…