ಕೋಟ ಶಿವರಾಮ ಕಾರಂತರ ಜನುಮ ದಿನ | ಎಷ್ಟು ಕಲಿತರೂ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ….

October 10, 2020
10:35 AM
ಮನುಷ್ಯ ಎಷ್ಟು ಕಲಿತರೂ ,ಕಲಿಯ ಬೇಕಾದದ್ದು ಬಹಳ ಎಂದು ನಂಬಿದ ಡಾ.ಶಿವರಾಮ ಕಾರಂತರ ಬದುಕೇ ಒಂದು ಪಾಠ ಶಾಲೆಯಾಗಿದೆ

 

ಆಧುನಿಕ ಭಾರತದ ರವೀಂದ್ರನಾಥ್ ಠಾಗೋರ್ ಎಂದೇ ಖ್ಯಾತರಾದ ಕಾರಂತರ ಹುಟ್ಟುಹಬ್ಬ ಇಂದು. 10 ಒಕ್ಟೋಬರ್ 1902  ರಂದು ಸಾಲಿಗ್ರಾಮದಲ್ಲಿ ಜನಿಸಿದರು. ಭಾರತದ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ವಾದ ಕೊಡುಗೆಗಳನ್ನು ಕೊಟ್ಟವರು. 427  ಪುಸ್ತಕಗಳ ಕರ್ತೃ. ಅವುಗಳಲ್ಲಿ 47  ಕಾದಂಬರಿಗಳು. ಮೂಕಜ್ಜಿಯ ಕನಸುಗಳು ಕೃತಿ ಗೆ ಜ್ಞಾನ ಪೀಠ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರವಾಸವನ್ನು ಬಹು ಇಷ್ಟ ಪಡುತ್ತಿದ್ದ ಕಾರಂತರು ರಷ್ಯಾ ಹೊರತು ಪಡಿಸಿ ವಿಶ್ವದೆಲ್ಲೆಡೆ ಪಯಣಿಸಿದ್ದರು. ನಮ್ಮ ಸುಳ್ಯ , ಪುತ್ತೂರು ಪರಿಸರವೆಂದರೆ ವಿಶೇಷ ಪ್ರೀತಿ. ಬೆಟ್ಟದ ಜೀವ ಕಾದಂಬರಿಯನ್ನು ಕಟ್ಟ ಗೋವಿಂದಯ್ಯನವರ ಮನೆಯಲ್ಲೇ ಬರೆದರಂತೆ. ಸಾಹಿತ್ಯ ದ ಎಲ್ಲಾ ಪ್ರಾಕಾರ ಗಳಲ್ಲಿ ತಮ್ಮ ಪ್ರೌಢ್ಯ ಮೆರೆದಿದ್ದಾರೆ.

 

ಆ ದಿನವನ್ನು ನಮ್ಮಲ್ಲಿ ಯಾರೂ ಮರೆಯಲಾರರು. ಅಂದು‌ ನಮ್ಮ ಶಾರದ ನಿಲಯ ಅಯ್ಯನಕಟ್ಟೆ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆ ಮಂದಿ , ನೆಂಟರಿಷ್ಟರು, ಊರ ಮಹನೀಯರು , ಶಾಲಾ ಶಿಕ್ಷಕರು, ಆತ್ಮೀಯರೆಲ್ಲರೂ ಸೇರಿದ್ದರು. ಹಾಗೆಂದು ಅಲ್ಲಿ ಯಾವುದೇ ಸಭೆಯಾಗಲಿ , ಸಮಾರಂಭವಾಗಲಿ ಇರಲಿಲ್ಲ. ಆದರೆ ಎಲ್ಲರೂ ಸೇರಿದ್ದಾರೆ ಎಂದರೆ ಅದಕ್ಕೊಂದು ಪ್ರಬಲ ಕಾರಣವಿತ್ತು. ಕನ್ನಡ ನಾಡಿನ ಮಹಾ ಮಾನವತಾವಾದಿ, ವಿಶ್ವ ಪ್ರೇಮಿ ಕೋಟ ಶಿವರಾಮ ಕಾರಂತರು ಖಾಸಗಿ ಭೇಟಿಗೆ ಬರುವವರಿದ್ದರು. ಆರ್. ಕೆ . ಭಾಸ್ಕರ್ ಬಾಳಿಲ ಅವರ ನೇತೃತ್ವದಲ್ಲಿ ವಿನ್ಯಾಸ ಬಾಳಿಲ ವೇದಿಕೆಯಲ್ಲಿ” ಕಾರಂತರು ಮಾತನಾಡುತ್ತಾರೆ” ಕಾರ್ಯಕ್ರಮ ವನ್ನು 1983 ರ ಡಿಸೆಂಬರ್ 3 ರಂದು ಬಾಳಿಲ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆ ಯಲ್ಲಿ
ಹಮ್ಮಿಕೊಳ್ಳಲಾಗಿತ್ತು. ಆ ದಿನಗಳಲ್ಲಿ ಮಾವ ಡಾ.ಪಿ .ಎಸ್ ಗಣಪಯ್ಯರು ಖ್ಯಾತ ಲೇಖಕರು ಹಾಗೂ ವಿನ್ಯಾಸ ಬಾಳಿಲದ ಸಂಚಾಲಕರಾಗಿದ್ದರು. ಶಿವರಾಮ ಕಾರಂತರು ನಮ್ಮ ಊರಿಗೆ ಬರುತ್ತಾರೆ ಎಂಬುದೇ ಹೆಮ್ಮೆಯ ವಿಷಯ. ಅವರನ್ನು ಸತ್ಕರಿಸುವ ಅವಕಾಶವನ್ನು ಪ್ರೀತಿಯಿಂದಲೇ ನಿಭಾಯಿಸಲಾಯಿತು. ಅತ್ತೆಯವರಾದ ಪಿ..ಜಿ .ಸಾವಿತ್ರಿಯವರು ಆ ದಿನಗಳ ಸಂಭ್ರಮ ವನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ಕಬ್ಬಿನ ಹಾಲೆಂದರೆ ಕಾರಂತರಿಗೆ ಬಹಳ ಇಷ್ಟವೆಂದು ಮಾವ ಅದರ ವ್ಯವಸ್ಥೆಯನ್ನು ಮಾಡಿದ್ದರಂತೆ. ಮಧ್ಯಾಹ್ನ ಕ್ಕೆ ರಾಮಚಂದ್ರ ದೀಕ್ಷಿತರ ಹೋಳಿಗೆ ಊಟ ಅವರಿಗೆ ಬಹಳ ಮೆಚ್ಚುಗೆಯಾಯಿತೆಂದು ನೆನಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗಿನ ಮಾತುಕತೆಯನ್ನು ಮಕ್ಕಳು ಮೆಲುಕು ಹಾಕುತ್ತಾರೆ. ಅವರು ಬರೆದು ಕೊಟ್ಟ ಅಟೋಗ್ರಾಫ್ ಈಗಲೂ ಜೋಪಾನವಾಗಿದೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಇಳುವರಿ ಕುಸಿತ | ಮಿಶ್ರ ತೋಟಗಳಲ್ಲಿ ಹೆಚ್ಚು ಸಮಸ್ಯೆ…! ಯಾವ ತಳಿ ಆಯ್ಕೆ ಮಾಡಿದ್ದಾರೆ…? | ಅಡಿಕೆ ಇಳುವರಿ ಕುಸಿತದ ವಿಶ್ಲೇಷಣೆ
March 13, 2026
10:48 AM
by: ದ ರೂರಲ್ ಮಿರರ್.ಕಾಂ
ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು
March 13, 2026
6:58 AM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಕಡಲ್ಕೊರೆತ ಗಂಭೀರತೆ : ಲೋಕಸಭೆಯಲ್ಲಿ ಧ್ವನಿಯೆತ್ತಿದ ಸಂಸದ
March 12, 2026
9:11 PM
by: ದ ರೂರಲ್ ಮಿರರ್.ಕಾಂ
ಭಾರತೀಯ ಕೊಕ್ಕೋಗೆ ಜಾಗತಿಕ ಮಟ್ಟದ ಮಾನ್ಯತೆ | ಈಗ ಮೌಲ್ಯವರ್ಧನೆಯೇ ರೈತರಿಗೆ ಹೊಸ ದಾರಿ
March 12, 2026
8:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror