ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ವಕ್ತಾರರ ಪಟ್ಟಿಯನ್ನು ಪುನರ್ ರಚನೆ ಮಾಡಲಾಗಿದೆ. ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿಕೆಶಿ ಅವರ ಅನುಮೋದನೆ ಮೂಲಕ ಕೆ.ಪಿ.ಸಿ.ಸಿ ಮಾಧ್ಯಮ ಘಟಕದ ಅಧ್ಯಕ್ಷರಾದ ಪ್ರಿಯಾಂಕಾ ಖರ್ಗೆಯವರು ಪ್ರತಿನಿಧಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಈ ಹಿಂದೆ ಮಾಧ್ಯಮ ವಕ್ತಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಭರತ್ ಮುಂಡೋಡಿ ಹಾಗೂ ಯುವ ನಾಯಕ ಶೌವದ್ ಗೂನಡ್ಕ ಅವರು ಹುದ್ದೆಗೆ ಭಡ್ತಿಗೊಳಿಸಿ ಪುನರ್ ಆಯ್ಕೆ ಮಾಡಲಾಗಿದ್ದರೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮಳ ರಾಮಚಂದ್ರ ಅವರಿಗೆ ಕಾಂಗ್ರೆಸ್ ವಕ್ತಾರರಾಗಿ ಆಯ್ಕೆ ಮಾಡಲಾಗಿದೆ.
ಮುಂದೆ ಬರುವ ವಿಧಾನ ಸಭಾ ಚುನಾವಣೆಯ ಹಿತದೃಷ್ಟಿಯಿಂದ ಯುವಕರಿಗೆ, ಹಿರಿಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕಾಂಗ್ರೆಸ್ (Congress) ಸಂಘಟನೆಯ ದೃಷ್ಟಿಯಿಂದಲೂ ಗ್ರಾಮೀಣ ಭಾಗದಿಂದ ಯುವಕರ ತಂಡವನ್ನು ಬಲಿಷ್ಟ ಮಾಡಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel