ಪುತ್ತೂರಿನಲ್ಲಿ ನಡೆದ ಐದನೇ ಕೃಷಿ ಯಂತ್ರ ಮೇಳಕ್ಕೆ ಭಾನುವಾರ ತೆರೆ ಬಿದ್ದಿದೆ. ಮೂರು ದಿನಗಳ ಮೇಳದಲ್ಲಿ ಸುಮಾರು 4 ಲಕ್ಷದಷ್ಟು ಜನರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ಕೃಷಿಕರಿಗೆ ಅಗತ್ಯ ಯಂತ್ರಗಳ ಪ್ರದರ್ಶನ ಹಾಗೂ ಕನಸಿನ ಮನೆಗೆ ಅಗತ್ಯವಾದ ಮಾಹಿತಿಯು ಈ ಕೃಷಿ ಯಂತ್ರ ಮೇಳದಲ್ಲಿ ಲಭ್ಯವಾಯಿತು.
ಕ್ಯಾಂಪ್ಕೋ ಮಂಗಳೂರು, ಅಡಿಕೆ ಸಂಶೋಧನೆ ಮತ್ತುಅಭಿವೃದ್ಧಿ ಪ್ರತಿಷ್ಠಾನ , ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಪುತ್ತೂರು, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತಆಶ್ರಯದಲ್ಲಿ ನಡೆದ 5ನೇ ಬೃಹತ್ ಕೃಷಿ ಯಂತ್ರವು ಭಾನುವಾರ ಸಂಜೆ ಕೊನೆಗೊಂಡಿತು. ಮೇಳದಲ್ಲಿ ಕೃಷಿಯಂತ್ರಗಳ ಮಾಹಿತಿ, ಪ್ರದರ್ಶನ ಸೇರಿದಂತೆ ವಿವಿಧ ಮಳಿಗೆಗಳ ಮೂಲಕ ಕೃಷಿ ಸಂಬಂಧಿತ ಹಾಗೂ ಕನಸಿನ ಮನೆಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗಿತ್ತು.
ಮೂರು ದಿನಗಳ ಮೇಳದಲ್ಲಿ ಒಟ್ಟಾಗಿ ಸುಮಾರು 4 ಲಕ್ಷ ಕೃಷಿಕರು ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾನುವಾರ ರಾತ್ರಿಯಾದರೂ ಮೇಳದಲ್ಲಿ ಕೃಷಿಕರು ಹಾಗೂ ಸ್ಥಳೀಯರು ತುಂಬಿದ್ದರು. ಮೇಳದ ವ್ಯವಸ್ಥಿತ ಆಯೋಜನೆ ಈ ಬಾರಿ ವಿಶೇಷವಾಗಿ ಗಮನ ಸೆಳೆಯಿತು. ವಾಹನ ಪಾರ್ಕಿಂಗ್ ಸಹಿತ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿತ್ತು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…