ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಜ್ಯುವೆಲ್ಸ್ ಪುತ್ತೂರಿನಲ್ಲಿರುವ ಮುಳಿಯ ಜ್ಯುವೆಲ್ಸ್ ಕಟ್ಟಡದಲ್ಲಿ ಕೃಷಿಕೋದ್ಯಮ ಉದ್ಘಾಟನೆಗೊಂಡಿತು.
ಹಲವು ಕ್ಷೇತ್ರಗಳ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕೇಶವ ಪ್ರಸಾದ್ ಮುಳಿಯ ಸಂವಾದ ಕಾರ್ಯಕ್ರಮ ವನ್ನು ವಿದ್ಯುಕ್ತವಾಗಿ ದೀಪೋಜ್ವಲನದ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಫೌಂಡರ್, ಮಾ ಇಂಟಿಗ್ರೇಟರ್ಸ್, ಇಂಟಿಗ್ರೇಟೆಡ್ ಅಗ್ರಿಕಲ್ಚರಿಸ್ಟ್ , ಎಚ್ ಮುರಳಿಕೃಷ್ಣ – ಚೀಫ್ ಟೆಕ್ನಿಕಲ್ ಆಫೀಸರ್ (ಟೆಕ್. ಇನ್ಫೋ.) , ವಿಶ್ವೇಶ್ವರ ಭಟ್ – ಬಂಗಾರಡ್ಕ, ಇವರು ತಮ್ಮ ವಿಚಾರವನ್ನು ಮಂಡಿಸುವರು. ಕೃಷಿ ಸಲಹೆಗಾರ ಪುರಂದರ ಕುಬಣೂರಾಯ ಮತ್ತು ವೇಣು ಶರ್ಮ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಕೃಷಿಕರು ಮತ್ತು ಅವರು ನಿರ್ವಹಿಸುವ ಹಣಕಾಸಿನ ಖರ್ಚು ವೆಚ್ಚ ಮುಂತಾದ ವಿಷಯಗಳ ಕುರಿತು ಮಾತನಾಡುವರು.
ಕೃಷಿಯನ್ನು ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ? ನೋಡಬಹುದೇ? ಖರ್ಚು. ಹಣಕಾಸು ನಿರ್ವಹಣೆ, ಹೂಡಿಕೆಯ ಮೇಲಿನ ಪ್ರತಿಫಲ, ಕೆಲಸಗಾರರ ತರಬೇತಿ, ಜವಾಬ್ಧಾರಿ, ತಾಂತ್ರಿಕತೆಯ ಬಳಕೆ, … ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದು ಈ ಸಂವಾದ ಕಾರ್ಯಕ್ರಮದ ಚರ್ಚೆ-ಚಿಂತನೆಯ ವಿಷಯ.