#ಕೃಷಿಕೋದ್ಯಮ | ಕೃಷಿ ಬದುಕಿನ ಪಯಣದಲ್ಲಿ ವ್ಯಾವಹಾರಿಕ ಪ್ರಜ್ಞೆ | ಕೃಷಿಯನ್ನು ಉದ್ಯಮವಾಗಿಸುವುದು ಸಾಧ್ಯವೇ? | ಸೆ.20 ರಂದು ಪುತ್ತೂರಿನಲ್ಲಿ ಕಾರ್ಯಕ್ರಮ |

September 17, 2022
6:06 PM

ಕೃಷಿಯನ್ನು(Agriculture) ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ ? ನೋಡಬಹುದೇ?. ಖರ್ಚು. ಹಣಕಾಸು ನಿರ್ವಹಣೆ, ಹೂಡಿಕೆಯ ಮೇಲಿನ ಪ್ರತಿಫಲ, ಕೆಲಸಗಾರರ ತರಬೇತಿ, ಜವಾಬ್ದಾರಿ, ತಾಂತ್ರಿಕತೆಯ ಬಳಕೆ, … ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದರ ಬಗ್ಗೆ ಸಂವಾದವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೆ.20 ರಂದು ನಡೆಯಲಿದೆ.

Advertisement

ಸೆ.20 ರಂದು ಪುತ್ತೂರಿನ ಮುಳಿಯ ಜ್ಯುವೆಲ್ಸ್  ಪುತ್ತೂರಿನಲ್ಲಿರುವ ಮುಳಿಯ ಜ್ಯುವೆಲ್ಸ್ ಕಟ್ಟಡದಲ್ಲಿ ಬೆಳಿಗ್ಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕೃಷಿಯ ಕುರಿತ ಹಲವು ವರ್ಷಗಳ ಅನುಭವದೊಂದಿಗೆ ಹಾಗೂ ಮಣ್ಣು ಪರೀಕ್ಷೆ, NPK ತೆಂಗು-ಕಂಗು-ರಬ್ಬರ್ ಎಲ್ಲವೂ ನಮ್ಮ ಅನುಭವದ ಜ್ಞಾನ ದೊಂದಿಗೆ ನಾವು ಕೃಷಿಯನ್ನು ಮಾಡುತ್ತಿದ್ದೇವೆ. ಹಲವರಿಗೆ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬಳಕೆ ಬಗ್ಗೆ ಕುತೂಹಲ ಹಾಗೂ ಕೊರೋನಾ ಸಂದರ್ಭದಲ್ಲಿ ನಾವು ಮನೆಯೊಳಗೇ ನಿಂತು ಹೋದಾಗ ನಮ್ಮ ತೋಟದಲ್ಲೂ ಕೆಲವನ್ನು ಅಳವಡಿಸಿ ಬೆಳವಣಿಗೆಯನ್ನು ಕಂಡಿದ್ದೇವೆ.

ಆದರೆ, ಕೃಷಿಯನ್ನು ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ? ನೋಡಬಹುದೇ? ಖರ್ಚು. ಹಣಕಾಸು ನಿರ್ವಹಣೆ, ಹೂಡಿಕೆಯ ಮೇಲಿನ ಪ್ರತಿಫಲ, ಕೆಲಸಗಾರರ ತರಬೇತಿ, ಜವಾಬ್ಧರಿ, ತಾಂತ್ರಿಕತೆಯ ಬಳಕೆ, … ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದು ಈ ಸಂವಾದ ಕಾರ್ಯಕ್ರಮದ ಚರ್ಚೆ-ಚಿಂತನೆಯ ವಿಷಯ.

ಒಂದು ಲೀಟರ್ ಹಾಲಿನ ನಮ್ಮ ಖರ್ಚು ಎಷ್ಟು?, ಒಂದು ಕಿಲೋ ಅಡಿಕೆಯ ತಯಾರಿಯಲ್ಲಿ ಕೃಷಿಕನ ವೆಚ್ಚ ಎಷ್ಟು?, ಒಂದು ತೆಂಗಿನಕಾಯಿ ಅಸಲು ಎಷ್ಟು? ,ಕರಿ ಮೆಣಸು ಇವೆಲ್ಲಕ್ಕೂ ಬೋನಸ್ ಆಗಬಹುದೇ?, ರಬ್ಬರ್ ಟ್ಯಾಪಿಂಗ್-ಖರ್ಚು ವೆಚ್ಚ ನಿಭಾಯಿಸುವುದು ಹೇಗೆ?, ತರಕಾರಿ ಕೃಷಿ ಮಧ್ಯಮ ವರ್ಗದ ಕೃಷಿಕರಿಗೆ ಮತ್ತು ಕಡಿಮೆ,ಕೃಷಿ ಭೂಮಿ ಇರುವವರಿಗೆ ಲಾಭದಾಯಕವೇ? ಈ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಮೊದಲೇ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

ಕೃಷಿ ಬದುಕಿನಲ್ಲಿ ಸದಾ ಮುಳಿಯ ಪ್ರತಿಷ್ಠಾನ ಹಾಗೂ ನಮ್ಮ ಸಂಸ್ಥೆಗಳು ನಿಮ್ಮೊಂದಿಗೆ ಇರುತ್ತದೆ. ಹೆಚ್ಚು ಜನರನ್ನು ತಲುಪಲು ‘ಸುದ್ದಿ’ ಮಾಧ್ಯಮದ ಜೊತೆಗೆ ಸೇರಿ ಈ ವಿನೂತನ ಚಿಂತನ ಕಾರ್ಯಕ್ರಮ ಮಾಡುತಿದ್ದೇವೆ.” ಎಂದು ಕೇಶವ ಪ್ರಸಾದ್ ಮುಳಿಯ ಹೇಳುತ್ತಾರೆ. 

ಹಲವು ಕ್ಷೇತ್ರಗಳ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮೈ ಅಂತರಾತ್ಮ ಸಂಸ್ಥೆಯ  ವೇಣು ಶರ್ಮ ಕಾರ್ಯಕ್ರಮದ ಒಟ್ಟು ರೂಪುರೇಷೆಗಳನ್ನು ಮುನ್ನುಡಿಯಾಗಿ ಹೇಳುವರು.  ಕೇಶವ ಪ್ರಸಾದ್ ಮುಳಿಯ ಸಂವಾದ ಕಾರ್ಯಕ್ರಮ ವನ್ನು ವಿದ್ಯುಕ್ತವಾಗಿ ದೀಪೋಜ್ವಲನದ ಮೂಲಕ ಚಾಲನೆ ನೀಡಿ ಕಾರ್ಯಕ್ರಮದ ಆಶಯ ವ್ಯಕ್ತ ಪಡಿಸುವರು.ನಂತರದಲ್ಲಿ
ಅಶೋಕ್ ಕುಮಾರ್  ಫೌಂಡರ್, ಮಾ ಇಂಟಿಗ್ರೇಟರ್ಸ್, ಇಂಟಿಗ್ರೇಟೆಡ್ ಅಗ್ರಿಕಲ್ಚರಿಸ್ಟ್ , ಎಚ್ ಮುರಳಿಕೃಷ್ಣ – ಚೀಫ್ ಟೆಕ್ನಿಕಲ್ ಆಫೀಸರ್ (ಟೆಕ್. ಇನ್ಫೋ.) ,  ವಿಶ್ವೇಶ್ವರ ಭಟ್ – ಬಂಗಾರಡ್ಕ, ಇವರು ತಮ್ಮ ವಿಚಾರವನ್ನು ಮಂಡಿಸುವರು. ಕೃಷಿ ಸಲಹೆಗಾರ ಪುರಂದರ ಕುಬಣೂರಾಯ ಮತ್ತು ವೇಣು ಶರ್ಮ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸುವರು. ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಕೃಷಿಕರು ಮತ್ತು ಅವರು ನಿರ್ವಹಿಸುವ ಹಣಕಾಸಿನ ಖರ್ಚು ವೆಚ್ಚ ಮುಂತಾದ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಲಿರುವವರು.

ಡಾ. ವೇಣು ಕಳೆಯತ್ತೋಡಿ – ( ಕರಿ ಮೆಣಸು ಮತ್ತು ಸಾವಯವ ಕೃಷಿ) ; ಶ್ರೀಹರಿ ಭಟ್ ಸಜಂಗದ್ದೆ – ( ಕೃಷಿಯಲ್ಲಿ ಸಣ್ಣ ವೆಚ್ಚದ ತಂತ್ರಗಾರಿಕೆ) ; ವೇಣು ಗೋಪಾಲ್ – (ನರ್ಸರಿ) ; ಸುರೇಶ್ ಗೌಡ – (ಬಸಳೆ ಕೃಷಿ) ; ಶ್ರೀನಿವಾಸ್ ಭಟ್ ಪಡುಮಲೆ – (ಅಡಿಕೆ ಕೃಷಿ) ;
ಗೋವಿಂದ ಭಟ್ ಮಾಣಿಲ – (ಸುರಂಗ ನೀರಾವರಿ) ; ಶ್ರೀಮತಿ ಕಸ್ತೂರಿ ಅಡ್ಯಂತಾಯ – (ಹೈನುಗಾರಿಕೆ) ; ಶ್ರೀರಾಮ ಭಟ್ಟ ಚೆನ್ನಾಂಗೋಡು – (ತರಕಾರಿ ಕೃಷಿ) ; ಡಾ. ಹರಿಕೃಷ್ಣ ಪಾಣಾಜೆ – (ಆಯುರ್ವೇದ ಮೂಲಿಕೆಗಳ ಕೃಷಿ) ; ಶ್ರೀ ಕೃಷ್ಣ ಮೋಹನ್ – ( ಸಂಘಟಿತ ಕೃಷಿ ವ್ಯಾಪಾರ) ; ಮಹೇಶ್ ಪುಚ್ಚಪ್ಪಾಡಿ – (ಕೃಷಿ ಸಂಘಟನೆ- ಸಾಮಾಜಿಕ ಜಾಲತಾಣ)  ಮುಂತಾದವರು ಭಾಗವಹಿಸಲಿರುವರು.

ಒಟ್ಟು 250 ಕೃಷಿಕರಿಗೆ (Agriculturist) ಮತ್ತು ಪ್ರಗತಿಪರ ಚಿಂತನೆಯ ಕೃಷಿಕರಿಗೆ ಭಾಗವಹಿಸುವ ಅವಕಾಶವಿದೆ . ಆಸಕ್ತರು ತಮ್ಮ ಹೆಸರು ಹೆಸರನ್ನು ಮೊದಲೇ ನೋಂದಾವಣೆ ಮಾಡಲು ಮುಳಿಯ ಜ್ಯುವೆಲ್ಸ್ ನ 8494938916 ಸಂಪರ್ಕಿಸಬೇಕಾಗಿ ಕೋರಿಕೆ. ಸಮಾರೋಪ ಸಮಾರಂಭದಲ್ಲಿ ‘ಸುದ್ದಿ’ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು ಪಿ ಶಿವಾನಂದ ಇವರು ಉಪಸಂಹಾರ ನುಡಿಯನ್ನು ನೀಡುವರು. ಕೃಷ್ಣ ನಾರಾಯಣ ಮುಳಿಯ ಕಾರ್ಯಕ್ರಮದ  ಸಮಾರೋಪ ಭಾಷಣ ಮಾಡಲಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ
ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ
April 10, 2025
7:35 AM
by: The Rural Mirror ಸುದ್ದಿಜಾಲ
ಪಾರಂಪರಿಕ ಮಾಗಿ ಉಳುಮೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ | ಕೃಷಿ ಇಲಾಖೆ
April 10, 2025
7:18 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group