ನಮ್ಮ ಕೃಷಿಯಲ್ಲಿ ಬಿಸಿನೆಸ್ಸಿಗೆ (Agri business) ಅನುಯೋಜ್ಯವಾದ ದೃಷ್ಟಿಕೋನದ ಕೊರತೆ ಇದೆ. ನಮ್ಮ ದೀರ್ಘಾವಧಿ ಬೆಳೆಗಳು ಉದ್ಯಮಶೀಲತೆಗೆ ಅತ್ಯಂತ ಸಮರ್ಪಕವಾಗಿವೆ. ಅದರ ಮಧ್ಯೆ ನಾವು ಅನಾವಶ್ಯಕವಾಗಿ ಮಾರುಕಟ್ಟೆಗೆ ಅವಶ್ಯಕತೆವಲ್ಲದ ತಳಿಗಳ ಬಗ್ಗೆ ಕನ್ಫ್ಯೂಸ್ ಆಗಬಾರದು. ಅದೇ ರೀತಿ ಎಡೆ ಬೆಳೆಗಳ ಬಗ್ಗೆಯೂ ಕನ್ಫ್ಯೂಸ್ ಆಗಬಾರದು.
ನಮ್ಮದೇ ಒಂದೊಂದು ಕ್ಲಸ್ಟರ್ ರೂಪಿಕರಣ ಮಾಡಿ ಅದರ ಉತ್ಪನ್ನಗಳನ್ನು ಉತ್ತರ ಭಾರತದ ಗ್ರಾಹಕರ ಕ್ಲಸ್ಟರ್ಗೆ ತಲುಪಿಸುವ ಪ್ರಯತ್ನ ಮಾಡಬಹುದು. ಹವಾಮಾನ ವೈಪರಿತ್ಯ ಹಾಗೂ ಕಾರ್ಮಿಕರ ವೆಚ್ಚದಿಂದಲಾಗಿ ಅಡಿಕೆಯ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. 2016 ರಲ್ಲಿ 200 ರೂಪಾಯಿ ಉತ್ಪಾದನೆ ವೆಚ್ಚ ಇದ್ದ ಅಡಿಕೆಗೆ ಈಗ 300-350 ರೂಪಾಯಿ ವೆಚ್ಚಕ್ಕೆ ತಲುಪಿದೆ. ಉದ್ಯಮಶೀಲತೆ ಹಾಗೂ ಮೌಲ್ಯವರ್ಧನೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಆದಾಯಕ್ಕೂ ಸ್ಥಿರ ಮಾರುಕಟ್ಟೆಗೂ ಪೂರಕವಾಗುವಲ್ಲದು.

ಡಾ ವೇಣುಗೋಪಾಲ ಕಳೆಯತ್ತೋಡಿಯವರು ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು. ಶ್ರೀಹರಿ ಭಟ್ ಇವರು ತಂತ್ರಜ್ಞಾನದ ಬಳಕೆಯಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ರೋಪ್ ವೆ ಯಂತಹ ಪರಿಹಾರದ ಮಾರ್ಗವನ್ನು ಸೂಚಿಸಿದರು. ಕಸ್ತೂರಿ ಅಡ್ಯಂತಾಯ 30 ದನದಿಂದ 25,000 ರಿಂದ 30,000 ಆದಾಯ ಪಡೆಯುವ ಬಗ್ಗೆ ತಿಳಿಸಿದರು.
ವಿಶ್ವೇಶ್ವರ ಭಟ್ ಬಂಗಾರಡ್ಕ ಇವರು ಸರ್ಕಾರ ಯಾವ ರೀತಿ ಸಣ್ಣ ಹಿಡುವಳಿದಾರರ ಹಿತವನ್ನು ಗಮನಿಸುತ್ತದೆ ಎಂಬುದನ್ನು ತಿಳಿಸಿದರು. ಯಾವ ರೀತಿ ವೆಚ್ಚಗಳನ್ನು ನಿಯಂತ್ರಿಸಬಹುದು ಹಾಗೂ ನಷ್ಟದ ಮಾರ್ಗಗಳನ್ನು ತಡೆಯಬಹುದು ಎಂದು ತಿಳಿಸಿದರು. ಸುರೇಶ್ ಗೌಡ ಅವರು ತಮ್ಮ ಬಸಳೆ ಕೃಷಿಯ ಯಶೋಗಾಥೆಯನ್ನು ತಿಳಿಸಿದರು.ಗೋವಿಂದ ಭಟ್ ಮಾಣಿಲ ಇವರು ತಮ್ಮ 22 ಸುರಂಗಗಳ ಮೂಲಕ ಪಡೆಯುವ ನೀರಿನ ನೀರಾವರಿ ಸೌಲಭ್ಯವನ್ನು ತಿಳಿಸಿದರು. ಅಶೋಕ ಕುಮಾರ್ ಕರಿಕಳ ಇವರು ಗ್ರಾಹಕರ ಆಸಕ್ತಿಗನುಸಾರವಾಗಿ ಉತ್ಪಾದನೆ ಮಾಡುವ ಬಗ್ಗೆ ಹಾಗೂ ಮುಂದಿನ 25 ವರ್ಷಗಳಲ್ಲಿ ಏಷ್ಯಾದ ದೇಶಗಳು ಪ್ರಬಲ ಗ್ರಾಹಕ ದೇಶಗಳಾಗಿ ಮಾರ್ಪಾಡಾಗುವ ಬಗ್ಗೆ ತಿಳಿಸಿದರು. ಡಾ ಹರಿಕೃಷ್ಣ ಪಾಣಾಜೆ ಇವರು ಆಯುರ್ವೇದದಲ್ಲಿ ಗಿಡಮೂಲಿಕೆಗಳ ಅವಶ್ಯಕತೆ ಹಾಗೂ ಬೃಂಗರಾಜ, ನೆಲನೆಲ್ಲಿ, ತುಳಸಿ, ಚಿತ್ರಮೂಲ, ಅಮೃತಬಳ್ಳಿ, ಮುಂತಾದ ಗಿಡಗಳ ಕೃಷಿಯಿಂದ ಉದ್ಯಮಶೀಲತೆ ಸಾಧ್ಯ ಎಂದು ತಿಳಿಸಿದರು.ವೇಣುಗೋಪಾಲ ಮುಂಡೂರು ಇವರು ಸ್ಥಳೀಯ ಅವಶ್ಯಕತೆಗೆ ಅನುಸಾರವಾಗಿ ಉಪಯುಕ್ತ ಗಿಡಗಳ ಉತ್ಪಾದನೆ ಮಾಡುತ್ತಿರುವುದಾಗಿ ತಿಳಿಸಿದರು.ಕೃಷ್ಣಮೋಹನ ಇವರು ಇನ್ಸ್ಟಾ ಬಾಸ್ಕೆಟ್ ಮಾದರಿಯನ್ನು ತಿಳಿಸಿದರು. ಇಲ್ಲಿ ಯಾವ ರೀತಿ ಗ್ರಾಹಕರೇ ಮಾಲಕರಾಗಿರುತ್ತಾರೆ. ಅದೇ ರೀತಿ ಸ್ಥಳೀಯವಾಗಿ ಹೊಸ ಹೊಸ ಮಳಿಗೆಗಳನ್ನು ಮಾಡಲು ನೀಡುವ ಪ್ರೋತ್ಸಾಹವನ್ನು ತಿಳಿಸಿದರು.ಕೇಶವ ಪ್ರಸಾದ ಮುಳಿಯ ಇವರು ಭತ್ತದ ಕೃಷಿಯ ಯಶೋಗಾಥೆ ಹಾಗೂ ಸುಮಾರು 10 ಸಾವಿರ ರೂಪಾಯಿ ನಿವ್ವಳ ಆದಾಯ ಪಡೆದುವುದನ್ನು ತಿಳಿಸಿದರು.ಮಹೇಶ್ ಪುಚ್ಚಪ್ಪಾಡಿ ಇವರು ಸಾಮಾಜಿಕ ಜಾಲತಾಣಗಳ ಮಹತ್ವ ಹಾಗೂ ಕೃಷಿ ಕರು ಇದರಲ್ಲಿ ಕೈಜೋಡಿಸಬೇಕಾದ ಅವಶ್ಯಕತೆಯನ್ನು ತಿಳಿಸಿದರು.




