Advertisement

ಸಾಧನೆಗೆ ಒಲಿದ ಕಲಾದೇವತೆ | ಓದುವುದಿಲ್ಲ , ಕೇಳುತ್ತಲೇ 250 ಹಾಡು ಕಂಠಪಾಠ ಮಾಡಿರುವ “ಕಿಶೋರ” |

Share

ಈ ಬಾಲಕ ಓದುವುದಿಲ್ಲ, ಕೇಳುತ್ತಲೇ ಹಾಡು ಕಲಿತು ಕಂಠಪಾಠ ಮಾಡಿ  250 ಹಾಡುಗಳನ್ನು  ಎಲ್ಲಿ, ಯಾವಾಗ ಬೇಕಾದರೂ ಹಾಡಬಲ್ಲರು. ಸಂಗೀತದಲ್ಲಿ  ಈಗ ಉನ್ನತ ಕಲಿಕೆಯಲ್ಲಿದ್ದಾರೆ. ಸ್ವತಂತ್ರವಾಗಿ ಕೀಬೋರ್ಡ್‌ ನುಡಿಸುತ್ತಾರೆ. ಸುಮಾರು 50 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಸುಶ್ರಾವ್ಯವಾಗಿ ಹಾಡುತ್ತಾರೆ. ಆದರೆ, ಈ ಸಾಧಕನಿಗೆ ಕಣ್ಣು ಕಾಣಿಸದು….!, ಭಗವಂತ ಸಾಧನೆಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಈ ಬಾಲಕ ಗಡಿನಾಡು ಜಿಲ್ಲೆ ಕಾಸರಗೋಡಿನ ಬದಿಯಡ್ಕ ಬಳಿಯ ಪೆರ್ಮುಖದ ಕೃಷ್ಣಕಿಶೋರ್.

ಸಾಧನೆಗೆ ಬೇಕಾದ್ದು ಛಲ ಹಾಗೂ ಪರಿಶ್ರಮ, ಹಾಗಿದ್ದರೇ ಭಗವಂತ ಒಲಿಯುತ್ತಾನೆ. ಇಲ್ಲೂ ಹಾಗೆಯೇ. ಪೆರ್ಮುಖದ ಕೃಷ್ಣಕಿಶೋರ ಅವರಿಗೆ ಈಗ  24  ವರ್ಷ. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡಿದ್ದರು. ತಿಂಗಳಾಗುವ ಮೊದಲೇ ಜನಿಸಿದ ಕೃಷ್ಣ ಕಿಶೋರಗೆ ದೃಷ್ಟಿ ಕಾಣಿಸದಾಗಿತ್ತು. ಶಾಲೆಗೆ ತೆರಳುವುದು ಕಷ್ಟವಾಗಿತ್ತು. ಆದರೆ 7  ನೇ ತರಗತಿ ವರೆಗೆ ಅಂಧರ ಶಾಲೆಗೆ ತೆರಳಿ ಬ್ರೈಲ್‌ ಲಿಪಿಯಲ್ಲಿ  ಕಲಿತು ಆ ಬಳಿಕ ಸಾಮಾನ್ಯ ಶಾಲೆಗೆ ತೆರಳಿ ಪಾಠವನ್ನು  ಕೇಳಿ, ಬೇರೆಯವರಿಂದ ಕೇಳಿಸಿಕೊಂಡು ಬೇರೆಯವರ ಮೂಲಕ ಪರೀಕ್ಷೆ ಬರೆಯುತ್ತಾ ಪಿಯುಸಿವರೆಗೆ ‌ ಎಡನೀರು ಮಠದ ಕಾಲೇಜಿನಲ್ಲಿ  ವ್ಯಾಸಾಂಗ ಮಾಡಿದ್ದಾರೆ. ಇದರ ಜೊತೆಗೇ ಸಂಗೀತವನ್ನೂ ಅಭ್ಯಾಸ ಮಾಡುತ್ತಾ ಹಾಡುಗಳನ್ನು ಕಂಠಪಾಠ ಮಾಡುತ್ತಾ ಸಂಗೀತ ಕ್ಷೇತ್ರದಲ್ಲಿ  ಸಾಧನೆಗೆ ತೊಡಗಿಸಿದರು.
ಆರಂಭದಲ್ಲಿ  ಕುದುಮಾರು ವೆಂಕಟ್ರಾಮ್‌ ಅವರಿಂದ ಮನೆಯಲ್ಲಿಯೇ ಪ್ರಾರಂಭಿಸಿ ಸಂಗೀತ ಕಲಿತು ಬಳಿಕ ಶಕುಂತಲಾ ಕೃಷ್ಣ ಭಟ್‌ ಅವರಿಂದ ಸಂಗೀತ ಪಾಠ ಕಲಿತು ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿ ಬಳಿಕ ವೆಳ್ಳಿಕ್ಕೋತ್‌ ವಿಷ್ಣು ಭಟ್‌, , ಗೀತಾ ಸಾರಡ್ಕ ಅವರ ಜೊತೆ ಸೀನಿಯರ್‌ ವ್ಯಾಸಾಂಗ ಮಾಡಿ  ನಂತರ ಲಲಿತಾ ಬರಿನಾಥ್‌ ಅವರಿಂದ ಕಲಿತು ಸದ್ಯ ವಿದ್ವಾನ್‌ ಕಾಂಚನ ಈಶ್ವರ ಭಟ್‌  ಅವರ ಜೊತೆ ವಿದ್ವತ್‌ ಪಾಠವನ್ನು  ಕಲಿಯುತ್ತಿರುವ ಕೃಷ್ಣ ಕಿಶೋರ್ ಈಗಾಗಲೇ 250 ಹಾಡುಗಳನ್ನು ಕಂಠಪಾಠ ಮಾಡಿದ್ದಾರೆ.
ಹಾಡುಗಳನ್ನು ಮೊಬೈಲ್‌ ಮೂಲಕ ಕೇಳುತ್ತಲೇ ಕಂಠಪಾಠ ಮಾಡುವ ಕೃಷ್ಣ ಕಿಶೋರ್‌ ಒಂದು ವಾರದಲ್ಲಿ  ಹಾಡನ್ನು ಕಂಠಪಾಠ ಮಾಡುತ್ತಾರೆ. ಒಮ್ಮೆ ಕಂಠಪಾಠ ಮಾಡಿದ ಹಾಡನ್ನು  ನೆನಪಲ್ಲಿ ಅಚ್ಚೊತ್ತಿದ ಬಳಿಕ ಆಗಾಗ ಹೇಳುತ್ತಲೇ ನೆನಪಿಟ್ಟುಕೊಳ್ಳುತ್ತಾರೆ. ಸುಮಾರು 8 ನೇ ವರ್ಷ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಮಾಡುತ್ತಿದ್ದಾಗ ಕೆಲವು ವರ್ಷದ ಬಳಿಕ ಧ್ವನಿಯ ಕಾರಣದಿಂದ ಸಂಗೀತ ಹಾಡಲು ಕಷ್ಟವಾದಾಗ ಕೀಬೋರ್ಡ್‌ ನುಡಿಸಲು ಸ್ವತ: ಆರಂಭಿಸಿದರು. ಹಾಡು ಕೇಳುತ್ತಾ, ಕೀಬೋರ್ಡ್‌ ನುಡಿಸುತ್ತಾ ಅಭ್ಯಾಸ ಮಾಡಿ, ಈಗ ಕೀಬೋರ್ಡ್‌ ಕೂಡಾ ನುಡಿಸುತ್ತಾರೆ.  ಈಗಾಗಲೇ ಸುಮಾರು  50 ಕ್ಕೂ ಅಧಿಕ ಸಂಗೀತ ಕಛೇರಿಯನ್ನೂ ನಡೆಸಿಕೊಟ್ಟಿದ್ದಾರೆ.
ಸದ್ಯ ಹಾಡು ಕಲಿಯುತ್ತಾ ಕಲಾರಾಧನೆಯನ್ನು, ಅಧ್ಯಯನವನ್ನೂ ಮುಂದುವರಿಸಿರುವ ಕೃಷ್ಣ ಕಿಶೋರ್‌ ಅವರು ದಿವಂಗತ ರಾಮ ಭಟ್‌ ಪೆರ್ಮುಖ ಹಾಗೂ ಸತ್ಯಭಾಮಾ ಅವರ ಪುತ್ರ. ಬಡಿಯಡ್ಕದ ಪೆರ್ಮುಖದಲ್ಲಿ ಕೃಷಿ ಹೊಂದಿರುವ ಇವರು  ಸದ್ಯ ತಾಯಿ ಹಾಗೂ ಸಹೋದರಿಯ ಜೊತೆ ಸಂಗೀತಾರಾಧನೆಯನ್ನು  ಮಾಡುತ್ತಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

1973 ರ ಅಡಿಕೆ ಬಿಕ್ಕಟ್ಟು 2026ಕ್ಕೆ ನೀಡುವ ಎಚ್ಚರಿಕೆ ಏನು..?

1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…

2 hours ago

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

11 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

2 days ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

2 days ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

2 days ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

2 days ago