ಚುನಾವಣಾ ಕಣ | ಸುಳ್ಯದಲ್ಲಿ ಈ ಬಾರಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಅಭ್ಯರ್ಥಿ|

April 30, 2023
10:48 PM
ಲಂಚ ಮುಕ್ತ ಹಾಗೂ ಬಸವಣ್ಣನ ಕಲ್ಯಾಣ ಕರ್ನಾಟಕಕ್ಕಾಗಿ, ಕುವೆಂಪುರವರ ಸರ್ವೋದಯ ಕರ್ನಾಟಕಕ್ಕಾಗಿ ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಪ್ರಾದೇಶಿಕ ಪಕ್ಷ ವಾದ  “ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ” ತನ್ನ 199 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ, ಇವರಲ್ಲಿ ಸುಳ್ಯ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ  ಗಣೇಶ್ ಎಂ(ಸುಧೀಶ್) ರವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಗಣೇಶ್ ಎಂ(ಸುಧೀಶ್ ) ಮೂಲತಃ ಕೊಕ್ರಾಡಿ ಗ್ರಾಮ, ಬೆಳ್ತಂಗಡಿ ತಾಲೂಕಿನವರು, ಇವರು ರೈತ ಕುಟುಂಬದಿಂದ ಬಂದಂತಹ ರಾಜಕಾರಣದಲ್ಲಿ ಆಸಕ್ತಿಹೊಂದಿರುವಂತಹ  ಯುವಕ, ತನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಕೊಕ್ರಾಡಿ ಪ್ರೌಢ ಶಾಲೆಯಲ್ಲಿ ಮುಗಿಸಿ , ಮಂಗಳೂರಿನಲ್ಲಿ ತಾಂತ್ರಿಕ ಕೌಶಲ್ಯವನ್ನು ಪಡೆದು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯವಸ್ಥಾಪಕನಾಗಿ ದುಡಿಯುತ್ತಿದ್ದು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
ಇವರು ಮತ್ತು ಇವರ ಪತ್ನಿ ಶ್ರೀಮತಿ ರಶ್ಮಿತಾರವರು  ಸಮಾಜಸೇವೆಯಲ್ಲಿ ಆಸಕ್ತಿ ವಹಿಸಿಕೊಂಡಿದ್ದು, ಪ್ರಸ್ತುತ ಗಣೇಶ್ ಎಂ(ಸುಧೀಶ್)  ಬೆಂಗಳೂರಿನ ಎಂ.ಡಬ್ಲ್ಯೂ ಅಸ್ಸೋಸ್ಸಿಯೇಶನ್ ನ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಸಮುದಾಯ ಸಂಘದ ಜಂಟಿ-ಕಾರ್ಯದರ್ಶಿಯಾಗಿದ್ದು ಸಮಾಜದ ಬಂಧುಗಳಿಗೆ ಹಲವು ರೀತಿಯ ಸಮಾಜ ಸೇವೆಯಲ್ಲಿ ತನ್ನನು ತಾನು ತೊಡಗಿಸಿಕೊಂಡಿದ್ದಾರೆ ಮತ್ತು  ಕೋವಿಡ್ ಸಂಧರ್ಭದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕೆಸಿವಿಟಿ ತಂಡದ ಮೂಲಕ ಸಹಾಯವಾಣಿ ಸ್ಥಾಪಿಸಿ ಅವಶ್ಯಕತೆಯಿರುವ ಕೋವಿಡ್ ಸಂತ್ರಸ್ತರಿಗೆ ಸೂಕ್ತ ಮಾಹಿತಿಯನ್ನು ತಂಡದ ಮೂಲಕ ನೀಡಿ ನೆರವಾಗಿದ್ದಾರೆ. ಇವರ ಪತ್ನಿಯು ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಲಯನ್ ಕ್ಲಬ್ ಹಾಗೂ ಕೆಲವು ಇತರ   ಸಂಸ್ಥೆಗಳ ಮೂಲಕ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದು , ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ “ಪರಿಸರ ಸ್ನೇಹಿ ಮುಟ್ಟಿನ ನೈರ್ಮಲ್ಯ” ದ ಬಗ್ಗೆ ಉತ್ತಮ ತರಬೇತಿಯನ್ನು ನೀಡುವ ಮೂಲಕ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳಿಂದ ಪ್ರಶಂಸೆಗೊಳಗಾಗಿದ್ದಾರೆ ಹಾಗೂ ಇವರು ರಾಜ್ಯ ಮಟ್ಟ , ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಹಲವಾರು ಪ್ರಶಸ್ತಿಗೆ ಭಾಜನಾರಾಗುವ ಮೂಲಕ ಓರಿಫ್ಲೇಮ್ ಎಂಬ ಅಂತಾರಾಷ್ಟ್ರೀಯ ಕಂಪೆನಿಯಿಂದ ಆಯೋಜಿಸಲಾದ ಇಂಡಿಯಾ ಯಂಗ್ ಎಂಟರ್ಪ್ರೆನರ್ ಸ್ಪರ್ಧೆಯಲ್ಲಿ ಭಾರತದ ಟಾಪ್ -15 ನಲ್ಲಿ  ಅರ್ಹತೆ ಪಡೆದಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ವಿವಿಧ ಅಭಿವೃದ್ಧಿ , ಬದಲಾವಣೆಯೂ ಓರ್ವ ಅಧಿಕಾರದಲ್ಲಿರುವ  ಜನಪ್ರತಿನಿಧಿಯಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಲಿದೆ ಎಂಬ ವಾಸ್ತವ ಅರಿವು ಎಲ್ಲರಿಗೆ ಮನವರಿಕೆಯಾಗಬೇಕು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣ ಹಾಗೂ ಭ್ರಷ್ಟ್ರಾಚಾರ ನಿರ್ಮೂಲನೆಕ್ಕಾಗಿ ಪಣ ತೊಟ್ಟಿರುವ ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿಯ ಮೂಲಕ ಸಾಧ್ಯವಿದೆ ಎನ್ನುವ ಗಣೇಶ್ ಎಂ (ಸುಧೀಶ್) ರವರು ಪ್ರಸ್ತುತ ಕೆಲಸ ಮಾಡುವ ಖಾಸಗಿ ಕಂಪೆನಿಗೆ ರಾಜೀನಾಮೆ ನೀಡಿ ಸುಳ್ಯದ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದಾರೆ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ
ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಾಗಿಲ್ಲ | ಯಾವುದೇ ಆತಂಕ ಬೇಡ – ಸಚಿವ ಶರಣಪ್ರಕಾಶ್ ಪಾಟೀಲ್
July 15, 2025
9:31 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ | ತುಂಬಿ ಹರಿಯುತ್ತಿರುವ ನದಿಗಳು
July 15, 2025
9:29 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group