KSRTC | ಬ್ರಾಂಡ್ ಹೆಸರು, ಟ್ಯಾಗ್ ಲೈನ್, ಗ್ರಾಫಿಕ್ ಡಿಸೈನ್ ಮಾಡಿ ಕೊಟ್ಟವರಿಗೆ ಬಹುಮಾನ…!

November 30, 2022
9:51 AM

ಕೆಎಸ್‌ಆರ್‌ಟಿಸಿಯು(KSRTC) ಪ್ರಯಾಣಿಕರಿಗೆ ನೂತನ ಸೇವೆಗಳಿಗೆ ಮುಂದಾಗಿದ್ದು, ಬ್ರಾಂಡಿಂಗ್‌ ಪರಿಕಲ್ಪನೆಯನ್ನು ಜನರ ತೀರ್ಮಾನಕ್ಕೆ ಬಿಟ್ಟಿದೆ. ಬಿಎಸ್‌ 6-9600 ವೋಲ್ವೋ ಮಲ್ಟಿ ಆಕ್ಸಲ್‌ ಸ್ಲೀಪರ್‌ ಮತ್ತು ಒಲೆಕ್ಸಾ ಎಲೆಕ್ಟ್ರಿಕ್‌ ಈ ಎರಡು ಮಾದರಿಯ ಬಸ್‌ಗಳಿಗೆ ನಿಮ್ಮ ಉತ್ತಮವಾದ ಐಡಿಗಳನ್ನು ಕಳುಹಿಸುವ ಮೂಲಕ ನಗದು ಬಹುಮಾನವನ್ನು ಪಡೆಯಬಹುದು ಎಂದು ತಿಳಿಸಿದೆ.

Advertisement
Advertisement
Advertisement

ನೂತನ ಶ್ರೇಣಿಯ ಎರಡು ರೀತಿಯ ಬಸ್‌ಗಳಿಗೆ ತಮ್ಮಿಂದ ಸೂಕ್ತವಾದ ಬ್ರಾಂಡ್‌, ಹೆಸರು, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ ವಿನ್ಯಾಸಗಳನ್ನು ನಿರೀಕ್ಷಿಸುತ್ತಿದೆ. ಅಲ್ಲದೇ ಉತ್ತಮ ಟ್ಯಾಗ್‌ನೊಂದಿಗೆ ಬ್ರಾಡ್‌ ಹೆಸರನ್ನು ಯಾರು ಸೂಚಿಸುತ್ತಾರೆಯೋ ಅಂತಹವರಿಗೆ 10,000 ರೂಪಾಯಿ ನಗದು ಬಹುಮಾನವನ್ನು ಕೊಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಅಲ್ಲದೆ ಉತ್ತಮವಾಗಿ ಗ್ರಾಫಿಕ್ಸ್‌ ನೀಡಿದವರಿಗೆ 25,000 ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದೆ.

Advertisement

ನೀವು ಮಾಡುವ ಬ್ರಾಂಡ್‌ ಐಡಿಯಾಗಳನ್ನು [email protected] ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅಥವಾ ಟ್ವಿಟರ್‌ ಖಾತೆಯಾದ KSRTC-journeys, KSRTC.karnataka ಫೇಸ್‌ ಬುಕ್‌ ಐಡಿಗೆ ಕಳುಹಿಸಬಹುದಾಗಿದೆ. ನೀವು ಡಿಸೆಂಬರ್‌ 05, 2022ರ ಒಳಗೆ ನಿಮ್ಮ ಐಡಿಯಾಗಳನ್ನು ಕಳುಹಿಸಬೇಕು ಎಂದು ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror