ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆಯೊಂದು ಪುತ್ತೂರಿನಲ್ಲಿ ಗುರುವಾರ ನಡೆದಿದೆ.ಬಸ್ ನಿಲ್ದಾಣದಿಂದ ಹೊರಡುವ ವೇಳೆ ವಿದ್ಯಾರ್ಥಿ ರೈಟ್ ಪೋಯಿ ಎಂದು ಹೇಳಿದ್ದ ಹಾಗಾಗಿ ನಿರ್ವಾಹಕನೇ ರೈಟ್ ಪೋಯಿ ಎಂದು ಹೇಳಿದ್ದಾಗಿ ಭಾವಿಸಿಕೊಂಡು ಚಾಲಕ ಬಸ್ ಚಲಾಯಿಸಿದ್ದಾರೆ.
ಪುತ್ತೂರಿನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಬಸ್ ಪುತ್ತೂರಿನಿಂದ ಹೊರಟು ಎಂ.ಟಿ.ರಸ್ತೆಯಾಗಿ ತಾಲೂಕು ಕಚೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್ಸಿನಲ್ಲಿ ನಿರ್ವಾಹಕ ಇಲ್ಲದಿರುವುದು ಅರಿವಾಯಿತು. ಈ ಸಂದರ್ಭದಲ್ಲಿ ಬೇರೊಂದು ಕೆ.ಎಸ್.ಆರ್ .ಟಿ.ಸಿ. ಬಸ್ ಮೂಲಕ ನಿರ್ವಾಹಕ ಬಂದು ತನ್ನ ಕರ್ತವ್ಯದ ಬಸ್ ನ್ನು ಸೇರಿಕೊಂಡಿದ್ದಾರೆ.
ಚಾಲಕ ಮತ್ತು ನಿರ್ವಾಹಕನ ಎಡವಟ್ಟಿನಿಂದ ಸುಮಾರು 15 ನಿಮಿಷ ಸಮಯ ಬಸ್ ಸಂಚಾರ ತಡವಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.