ಬೈಕ್ ಎಂದರೆ ಹುಡುಗರಿಗೆ ಬಹುಪ್ರೀತಿ. ಅದರಲ್ಲೂ ಕೆಟಿಎಂ ಬೈಕ್ ವೇಗಕ್ಕೆ ಹೆಸರು. ಇದೀಗ ಕೆಟಿಎಂ ಅಂದರೆ ಹುಡುಗರಿಗಿಂತ ಹುಡುಗಿಯರಿಗೂ ಅತಿಪ್ರಿಯ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
2023 ಕೆಟಿಎಂ 390 ಅಡ್ವೆಂಚರ್ ಈಗ ಬಿಡುಗಡೆ ಮಾಡಲಾಗಿದ್ದು, ದೆಹಲಿಯಲ್ಲಿ ಇದರ ಬೆಲೆ 3.60 ಲಕ್ಷ ರೂಪಾಯಿಗಳಾಗಿದೆ. ಮೂರು ವರ್ಷಗಳ ಹಿಂದೆ ಕೆಟಿಎಂ 390 ಅಡ್ವೆಂಚರ್ ಬಿಡುಗಡೆಯಾಗಿದ್ದು, ಇದೀಗ ಮತ್ತಷ್ಟು ಸುಧಾರಿತ ಫೀಚರ್ ಗಳೊಂದಿಗೆ ಹೊಸ ಬೈಕ್ ಬಿಡುಗಡೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel