ಕುಕ್ಕೆ ದೇವಾಲಯದಲ್ಲಿ ಕುಕ್ಕೆ ಲಿಂಗ ದೇವರಿಗೆ ಒಂದು ಹೊತ್ತು ಪೂಜೆ…! | ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ದೂರು |

September 23, 2021
10:26 PM

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕುಕ್ಕೆ ಲಿಂಗ ದೇವರು, ಶ್ರೀ ಕಾಲಭೈರವ ದೇವರು, ಶ್ರೀ ಚಂದ್ರಮೌಳೀಶ್ವರ ದೇವರುಗಳಿಗೆ ನಿತ್ಯ ಮೂರು ಹೊತ್ತು ಪೂಜೆ ಮತ್ತು ನೈವೇದ್ಯ ನಡೆಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ಮುಜರಾಯಿ ಇಲಾಖೆಗೆ, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಭಕ್ತಾದಿ ಟಿ ಎಸ್‌ ಶ್ರೀನಾಥ್‌ ಎಂಬವರು  ದೂರು ನೀಡಿದ್ದಾರೆ.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ವಾರ್ಷಿಕವಾಗಿ 95  ಕೋಟಿಗಿಂತಲೂ ಅಧಿಕ ಆದಾಯ ಬರುತ್ತಿದೆ. ಆದರೆ ಕುಕ್ಕೆ ದೇವಸ್ಥಾನದ ಒಳಾಂಗಣದಲ್ಲಿರುವ ಪರಿವಾರ ದೇವರುಗಳಾದ ಶ್ರೀ ಕುಕ್ಕೆ ಲಿಂಗ ದೇವರು, ಶ್ರೀ ಕಾಲಭೈರವ ದೇವರು ಹಾಗೂ ಹೊರಾಂಗಣದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವರುಗಳಿಗೆ ಸದ್ಯ ಬೆಳಗಿನ ಪೂಜೆ ಮಾತ್ರಾ ನಡೆಯುತ್ತಿದೆ, ಇದು ಸರಿಯಲ್ಲ, ಮೂರು ಹೊತ್ತಿನ ಪೂಜೆ ನಡೆಯಬೇಕು ಎಂದು ಟಿ ಎಸ್‌ ಶ್ರೀನಾಥ್‌ ಒತ್ತಾಯಿಸಿದ್ದಾರೆ. ಎಲ್ಲಾ ಪರಿವಾರ ದೇವರುಗಳಿಗೂ ಮೂರು ಹೊತ್ತು ಪೂಜೆ ನಡೆಯಬೇಕು ಎಂಬುದು  ಭಕ್ತರ ಆಶಯವಾಗಿದ್ದು ಒಂದು ಹೊತ್ತಿನ ಪೂಜೆ ಮಾತ್ರವೇ ಮಾಡಿ ಭಕ್ತರ ವಿಶ್ವಾಸ, ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಮನವಿಯಲ್ಲಿ  ತಿಳಿಸಿದ್ದಾರೆ. ದಿಟ್ಟಂನಲ್ಲಿ  ಕೂಡಾ ಮೂರು ಹೊತ್ತಿನ ಪೂಜೆ ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.ಆದರೆ ಇಲ್ಲಿನ ಅರ್ಚಕರು  ಇದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಮನವಿಯಲ್ಲಿ  ತಿಳಿಸಿದ್ದಾರೆ.

 

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ | ಉಜ್ವಲ ಯೋಜನೆ 2.0ಗೆ ಅರ್ಜಿ ಹೇಗೆ ?
January 17, 2026
7:09 AM
by: ಮಿರರ್‌ ಡೆಸ್ಕ್
ಅಡಿಕೆ ಸಿಪ್ಪೆಯಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ | ವಿಜ್ಞಾನಿಗಳ ಮಹತ್ವದ ಸಂಶೋಧನೆ
January 17, 2026
7:00 AM
by: ದ ರೂರಲ್ ಮಿರರ್.ಕಾಂ
ಜ.30 ರಿಂದ ಮೂಡಬಿದ್ರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ : | 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ
January 16, 2026
9:37 PM
by: ದ ರೂರಲ್ ಮಿರರ್.ಕಾಂ
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror