ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಹಾರಿದ್ದ ಬೆಂಗಳೂರು ಯುವಕ ಸ್ವಾಮಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸತತವಾಗಿ ನಾಲ್ಕು ದಿನದ ಕಾರ್ಯಚರಣೆ ಬಳಿಕ ಬುಧವಾರ ಸಂಜೆ ಮೃತದೇಹ ಪತ್ತೆಯಾಗಿದೆ.
ಪ್ರವಾಸಿಗರಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಬೆಂಗಳೂರು ದೀಪಾಂಜಲಿ ನಗರದ ತಂಡದಲ್ಲಿದ್ದ ಯುವಕ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದಿಂದ ಹಿಂತಿರುಗುವ ವೇಳೆ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ನದಿಗೆ ಹಾರಿದ್ದ. ಆ ಬಳಿಕ ನಾಪತ್ತೆಯಾಗಿದ್ದ. ಸತತ ಕಾರ್ಯಾಚರಣೆ ಬಳಿಕ ಬುಧವಾರ ಸಂಜೆ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಸುಮಾರು 15 ಜನ ನುರಿತ ಈಜುಗಾರರು, ಸಮಾಜ ಸೇವಕ ರವಿಕಕ್ಕೆಪದವು,ಅಗ್ನಿಶಾಮಕ ದಳ,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಂದಾಯ ಅಧಿಕಾರಿಗಳು, ಗ್ರಹರಕ್ಷಕ ದಳ,ಸ್ಥಳೀಯ ಜನನಾಯಕರು ಹಾಗೂ ಸ್ಥಳೀಯರು ಸೇರಿ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.
ಸ್ಥಳದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್, ಗ್ರಾ. ಪಂಚಾಯತ್ ಪಿಡಿಒ ಯು. ಡಿ ಶೇಖರ್, ಸುಬ್ರಹ್ಮಣ್ಯ ಗ್ರಾ. ಪಂಚಾಯತ್ ಸದಸ್ಯರು,ಅಗ್ನಿಶಾಮಕದಳದ ಸಿಬಂದಿಗಳು, ಸ್ಥಳೀಯರು ಇದ್ದರು.