ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಸಂಭ್ರಮದ ನಡುವೆ ಬೀದಿ ಮಡೆ ಸ್ನಾನ ನಡೆಯುತ್ತಿದೆ. ಕುಮಾರಧಾರದಿಂದ ಸುಬ್ರಹ್ಮಣ್ಯ ದೇವಸ್ಥಾನ ವರೆಗೆ ಸುಮಾರು 2 ಕಿ.ಮೀ ಬೀದಿ ಮಡೆ ಸ್ನಾನ ಹರಕೆಯನ್ನು ಸಲ್ಲಿಸುತ್ತಿದ್ದಾರೆ. ಈ ಸಂದರ್ಭ ಭಕ್ತಾದಿಗಳಿಗೆ ಸಮಸ್ಯೆಯಾಗದಂತೆ ಸ್ವಚ್ಛತಾ ಕಾರ್ಯವನ್ನು ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರಮದಾನ ಸೇವೆ ನಡೆಯಿತು.
ಶ್ರೀ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ಅವರ ನೇತೃತ್ವದಲ್ಲಿ ದೇವಸ್ಥಾನ ದಿಂದ ಕುಮಾರಧಾರ ವರೆಗೆ ರಸ್ತೆ ಮದ್ಯೆಇದ್ದ ಕಸ, ಮರಳುಗಳನ್ನು ತೆಗೆದು ನೀರುಹಾಕಿ ತೊಳೆದು ಸ್ವಚ್ಛತಾ ಕಾರ್ಯ ನಡೆಯಿತು.ಈ ಸಂದರ್ಭದಲ್ಲಿ ಸುಮಾರು ಶ್ರೀ ಮಠದಲ್ಲಿ ದುಡಿಯುವ ಸಿಬ್ಬಂಧಿ ಸ್ವಚ್ಛತೆ ಮಾಡುವುದರ ಮೂಲಕ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸೇವೆ ಸಲ್ಲಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel