ಕುಕ್ಕೆಯ ಜಾತ್ರೆಯ ಸಂದರ್ಭ ನಾಲ್ಕು ಹನಿಯಾದರೂ ಮಳೆ ಬರುತ್ತದೆ…!. ಇದು ಸಂಪ್ರದಾಯದಿಂದ, ಪರಂಪರಾಗತವಾಗಿ ಬಂದಿರುವ ಮಾತು. ಈ ಬಾರಿಯೂ ಈ ವಾಡಿಕೆಯ ಮಾತು ನಿಜವಾಯ್ತು. ಪಂಚಮಿಯ ದಿನ ಸಂಜೆ ಕುಕ್ಕೆಯಲ್ಲಿ ಮಳೆ ಸುರಿಯಿತು. ಈ ಮೂಲಕ ಚಂಪಾಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ವೀಕ್ಷಿಸಲು ಆಗಮಿಸಿದ ಭಕ್ತರಿಗೆ ಮಳೆರಾಯನ ಸಿಂಚನವಾಯಿತು. ವಾಡಿಕೆಯ ಮಾತು ಈ ಬಾರಿಯೂ ನಿಜವಾಗಿದೆ. ಇದುವರೆಗೂ ಈ ವಾಡಿಕೆಯ ಮಾತುಗಳು ನಿಜವಾಗಿದೆ.
ಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಕೃಷಿಕರು ಕೂಡಾ ಕುಕ್ಕೆಯ ಜಾತ್ರೆಯ ನಂತರ ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಜಾತ್ರೆಯ ನಂತರ ಕೃಷಿ ಕಾರ್ಯಗಳು, ಅಡಿಕೆ ತೋಟದ ಕಾರ್ಯಗಳು, ಮರ ಏರುವ ಕಾರ್ಯಗಳು ನಡೆಯುತ್ತದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಕುಕ್ಕೆಜಾತ್ರೆ | ಕುಕ್ಕೆಯ ಷಷ್ಠಿಗೆ ನಾಲ್ಕು ಹನಿ ಮಳೆ | ಈ ಬಾರಿಯೂ ನಿಜವಾಯ್ತು ವಾಡಿಕೆಯ ಮಾತು |"