ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಬೀದಿ ಮಡೆಸ್ನಾನ ನಡೆಯುತ್ತದೆ. ಈ ಸಂದರ್ಭ ರಸ್ತೆಯಲ್ಲಿನ ಮರಳು, ಕಸ ಬೀದಿ ಮಡೆಸ್ನಾನ ಮಾಡುವ ಭಕ್ತಾದಿಗಳಿಗೆ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯವು ಕುಮಾರಧಾರದಿಂದ ಸುಬ್ರಹ್ಮಣ್ಯದ ಕಾಶಿಕಟ್ಟೆ ತನಕ ನಡೆಯಿತು.
ಸಮಾಜ ಸೇವೆಯಲ್ಲಿಯೆ ತೊಡಗಿರುವ ಟ್ರಸ್ಟ್ ನ ಅಧ್ಯಕ್ಷರಾದ ಡಾ.ರವಿಕಕ್ಕೆಪದವು ಹಾಗೂ ಸ್ವಯಂಸೇವಕರೆಲ್ಲಾ ಸೇರಿ ರಸ್ತೆಯನ್ನು ನೀರು ಹಾಕಿ ಗುಡಿಸಿ ಪ್ಲಾಸ್ಟಿಕ್, ಕಸ ಕಡ್ಡಿಗಳು, ಹಾಗೂ ರಸ್ತೆಯಲ್ಲಿದ್ದಂತಹ ಚೂರುಗಳನ್ನು ತೆಗೆದು ಸ್ವಚ್ಛ ಮಾಡಲಾಯಿತು.ಇದರಿಂದ ರಸ್ತೆಯಲ್ಲಿ ಉರುಳುಸೇವೆ ಮಾಡುವ ಭಕ್ತಾದಿಗಳಿಗೂ ಉಪಯುಕ್ತವಾಗುತ್ತದೆ ಹಾಗೂ ಸ್ವಚ್ಛತೆಯು ಆಗುವುದರೊಂದಿಗೆ ದೇವರ ಸೇವೆಯು ಆಗುತ್ತದೆ ಎನ್ನುವ ಉದ್ದೇಶದಿಂದ ಈ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel