ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಈ ದೇಶದ ಪ್ರಸಿದ್ಧ ಪುಣ್ಯ ಕ್ಷೇತ್ರ. ಈಗ ಇಲ್ಲಿನ ಬಸ್ ನಿಲ್ದಾಣದ ರಸ್ತೆ ಸರಿ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಯಾತ್ರಾರ್ಥಿಗಳು ಹೇಳುವಂತಾಗಿದೆ…!. ಅಷ್ಟೊಂದು ಹದಗೆಟ್ಟಿದೆ ಈ ರಸ್ತೆ.
#Kukkesubrahmanya ಬಸ್ ನಿಲ್ದಾಣದ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. @KSRTC_Journeys @dineshgrao @BJPBhagirathi pic.twitter.com/WFbTP2HTgb
— theruralmirror (@ruralmirror) July 28, 2023
ಭಾರತದ ಪವಿತ್ರ ಯಾತ್ರಾಸ್ಥಳ, ನಾಗನಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದ ಬಸ್ ಸ್ಟ್ಯಾಂಡಿನ ರಸ್ತೆಯ ಅವ್ಯವಸ್ಥೆ ಈಗ ಎಲ್ಲರನ್ನೂ ನೋಡುವಂತೆ ಮಾಡಿದೆ. ಇಲ್ಲಿನ ಬಸ್ ಸ್ಟ್ಯಾಂಡಿಗೆ ದಿನನಿತ್ಯ ನೂರಾರು ಬಸ್ಸುಗಳು ನೃತ್ಯವನ್ನು ಮಾಡುತ್ತಾ ಬಸ್ ಸ್ಟ್ಯಾಂಡನ್ನು ತಲುಪುವಂತದ್ದು ಸರ್ವೇ ಸಾಮಾನ್ಯ. ಅದಲ್ಲದೆ ಅದೆಷ್ಟೋ ಜನ ಭಕ್ತಾದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ,ಇದೆ ಮಾರ್ಗದಲ್ಲಿ ಸಂಚರಿಸುವಂತಹ ಪರಿಸ್ಥಿತಿ ಕೂಡ ಇದೆ.

ಈ ಹಿಂದೆ ಹಲವಾರು ಬಾರಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಅವರು ಹೇಳುವ ಒಂದೇ ಉತ್ತರ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ನ ಲ್ಲಿ ಈ ಬಸ್ ಸ್ಟ್ಯಾಂಡಿನ ಮಾರ್ಗದ ಉನ್ನತಿಕರಿಸುವಿಕೆ ಹಾಗೂ ಸರಿಪಡಿಸುವಿಕೆ ವ್ಯವಸ್ಥೆ ಇದೆ” ಅವರೇ ಮಾಡುತ್ತಾರೆ ಎಂದು.
#Kukkesubrahmanya ಬಸ್ ನಿಲ್ದಾಣದ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. @KSRTC_Journeys @dineshgrao @BJPBhagirathi pic.twitter.com/iOL4PLoaJi
— theruralmirror (@ruralmirror) July 28, 2023
ಇಲ್ಲಿಯವರೆಗೆ ದೇವಸ್ಥಾನದ ಮಾಸ್ಟರ್ ಪ್ಲಾನ್ ಕೆಲಸವೂ ಮಾಡಿಲ್ಲ , ಕೆಎಸ್ಆರ್ಟಿಸಿ ವತಿಯಿಂದಲೂ ಆಗಿಲ್ಲ. ಈಗ ದಿನನಿತ್ಯ ಓಡಾಡುವ ಬಸ್ಸುಗಳು, ಭಕ್ತಾದಿಗ ಳು ,ಪ್ರಯಾಣಿಕರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಗೋಳು ತಪ್ಪಿದ್ದಲ್ಲ. ಯಾವುದಾದರೂ “ಮಾಸ್ಟರ್ ಪ್ಲಾನ್” ಮಾಡಿ ಯಾರಾದರೂ ಸರಿ ಮಾಡಿಸಿ ಎಂದು ಹೇಳುತ್ತಿದ್ದಾರೆ ಜನರು.
