ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಆಸುಪಾಸಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇವಲ ಮೂರು ಗಂಟೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ 265 ಮಿಮೀ ಗಿಂತಲೂ ಅಧಿಕ ಮಳೆಯಾಗಿದೆ. ಸಮೀಪದ ಕಲ್ಲಾಜೆಯಲ್ಲಿ 400 ಮಿಮೀ ಮಳೆಯಾಗಿದೆ. ಇದನ್ನು ಮೇಘಸ್ಫೋಟ ಎಂದೇ ಹೇಳಲಾಗುತ್ತಿದೆ. ಇದೀಗ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು, ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಮನೆ ಮಂದಿ ಮಣ್ಣಿನಡ್ಡಿ ಸಿಲುಕಿದ್ದಾರೆ. ಮಕ್ಕಳು ಸಹಿತ ಮನೆಯಲ್ಲಿ ವಾಸಿಸುತ್ತಿದ್ದರು.
ಸುಮಾರು ಮೂರು ತಾಸುಗಳ ನಿರಂತರವಾದ ಧಾರಾಕಾರ ಮಳೆಗೆ ಕುಮಾರಧಾರಾ ಬಳಿಯ ಪರ್ವತಮುಖಿ ಎಂಬಲ್ಲಿನ ಕುಶಾಲಪ್ಪ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ. ಮನೆಯಲ್ಲಿ ಇಬ್ಬರು ಮಕ್ಕಳು ಓರ್ವ ವೃದ್ದೆ ಸಹಿತ ನಾಲ್ಕು ಮಂದಿ ವಾಸಿಸುತ್ತಿದ್ದರು. ಮಕ್ಕಳು ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಮಣ್ಣಿನಡಿ ಸಿಲುಕಿರುವವರನ್ನು ಹೊರತೆಗೆಯಲು ಸಾಹಸ ಪಡಲಾಗುತ್ತಿದೆ. ಸ್ಥಳೀಯರು ನಿರಂತರ ಪ್ರಯತ್ನದಲ್ಲಿದ್ದಾರೆ. ಭಾರೀ ಮಳೆಗೆ ರಸ್ತೆ ಬ್ಲಾಕ್ ಆಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಧಾವಿಸಲು ಅಡ್ಡಿಯಾಗಿದೆ.ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…