ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶೈವ-ವೈಷ್ಣವ ವಿವಾದವಲ್ಲ | ಹಿಂದೂ ಏಕತೆಯ ವಿಚಾರ – ಹಿತರಕ್ಷಣಾ ವೇದಿಕೆ ಹೇಳಿಕೆ |

March 18, 2021
2:40 PM

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಶೈವ-ವೈಷ್ಣವ ಪೂಜಾ ವಿವಾದದ ಬಗ್ಗೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಸ್ಪಷ್ಟನೆ ನೀಡಿದೆ. ಇದು ಶೈವ ವೈಷ್ಣವ ವಿವಾದ ಅಲ್ಲ, ಹಿಂದೂ ಏಕತೆಯ ಪ್ರಶ್ನೆ ಎಂದು ವೇದಿಕೆಯ ಪದಾಧಿಕಾರಿಗಳು ಹೇಳಿದ್ದಾರೆ.

Advertisement
Advertisement
Advertisement
ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗ ಸಲ್ಲಬೇಕಾದ ರೀತಿಯಲ್ಲಿಯೇ ಪೂಜೆ ನಡೆಯಬೇಕು, ಅಂತರ್ಯಾಮಿ ಪೂಜೆ ಸಲ್ಲದು , ಪೂಜಾ ಪದ್ಧತಿಯಲ್ಲಿ ತಾರತಮ್ಯ ಸಲ್ಲದು,  ಹೀಗಾಗಿ ಇದು  ಶೈವ-ವೈಷ್ಣವ ವಿವಾದ ಅಲ್ಲ , ಹಿಂದೂ ಏಕತೆಯ ವಿಚಾರ

Advertisement

            – ಮಹೇಶ್‌ ಕುಮಾರ್‌ ಕರಿಕಳ

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್‌ ಕುಮಾರ್‌ ಕರಿಕಳ, ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗ ಸಲ್ಲಬೇಕಾದ ರೀತಿಯಲ್ಲಿಯೇ ಪೂಜೆ ನಡೆಯಬೇಕು, ಅಂತರ್ಯಾಮಿ ಪೂಜೆ ಸಲ್ಲದು , ಪೂಜಾ ಪದ್ಧತಿಯಲ್ಲಿ ತಾರತಮ್ಯ ಸಲ್ಲದು,  ಹೀಗಾಗಿ ಇದು  ಶೈವ-ವೈಷ್ಣವ ವಿವಾದ ಅಲ್ಲ , ಹಿಂದೂ ಏಕತೆಯ ವಿಚಾರ ಎಂದು ಸ್ಪಷ್ಟಪಡಿಸಿ , ಮಾಧ್ವರ ಬಗ್ಗೆ ನಮ್ಮ ವಿರೋಧ ಅಲ್ಲವೇ ಅಲ್ಲ, ಆ ರೀತಿಯಾಗಿ ಬಿಂಬಿಸಬೇಕಾಗಿಯೂ ಇಲ್ಲ. ಶಿವಳ್ಳಿ ಬ್ರಾಹ್ಮಣರಲ್ಲಿ ಶೇ 75  ರಷ್ಟು ಮಂದಿ ಎಲ್ಲಾ ದೇವರನ್ನೂ ಪೂಜಿಸುತ್ತಾರೆ. ಆದರೆ ಶೇ.25  ರಷ್ಟು ಮಂದಿ ಎಲ್ಲಾ ದೇವರನ್ನೂ ಪೂಜೆ ಮಾಡುವುದಿಲ್ಲ, ಅದಕ್ಕೆ ಉದಾಹರಣೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಈಚೆಗೆ ನಡೆದ ಶಿವರಾತ್ರಿ ಆಚರಣೆಯ ವಿವಾದ ಎಂದರು. ಇದು ಮಾತ್ರವಲ್ಲ ಕೆಲವು ಕಡೆ, ಸಾರ್ವಜನಿಕ ದೇವಾಲಯಗಳಲ್ಲಿ ನೇರವಾಗಿ ಆಯಾ ದೇವರಿಗೆ ಪೂಜೆ ಮಾಡದೆ, ವಿಷ್ಣು ಪೂಜೆ ಮಾಡುತ್ತಾರೆ,ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ. ಶಿವ ದೇವರ ನೈವೇದ್ಯ ಪ್ರಸಾದವನ್ನೂ ಕೆಲವು ಸ್ವೀಕರಿಸುವುದಿಲ್ಲ. ಹಿಂದೂ ಧರ್ಮದೊಳಗೆ ಇದೆಂತಹ ಆಚರಣೆ, ಇದನ್ನು ಹಿಂದೂ ಸಮಾಜ ಕೇಳಿದ್ದು ತಪ್ಪಾಗುತ್ತದೆಯೇ ಎಂದು ಮಹೇಶ್‌ ಕುಮಾರ್‌ ಪ್ರಶ್ನಿಸಿದರು.

Advertisement

This is box title
ಅಂತಹ ಅಂತರ್ಯಾಮಿ ಸಿದ್ಧಾಂತವನ್ನು ಮನೆ ಮನೆಗಳಲ್ಲಿ ಆಚರಣೆ ಮಾಡಲಿ, ಅದಕ್ಕೆ ಯಾವುದೇ ವಿರೋಧ ಇಲ್ಲ. ಆದರೆ ಸಾರ್ವಜನಿಕ ದೇವಸ್ಥಾನಗಳಲ್ಲಿ  ಹಿಂದೂ ಪದ್ಧತಿ, ಧಾರ್ಮಿಕ ಪದ್ಧತಿಯಂತೆಯೇ ಆಚರಣೆಗಳು ನಡೆಯಬೇಕು. ಮಠಾಧಿಪತಿಗಳು ಇದನ್ನು ಸಮಾಜಕ್ಕೂ ತಿಳಿ ಹೇಳಬೇಕು, ಮಾರ್ಗದರ್ಶನ ಮಾಡಬೇಕು, ಭಕ್ತಾದಿಗಳಿಗೆ ಅನ್ಯಾಯ ಮಾಡಬಾರದು ಎಂದು ಮಹೇಶ್‌ ಕುಮಾರ್‌ ಹೇಳಿದರು.

ಶೈವ-ವೈಷ್ಣವರಲ್ಲಿ  ಬೇಧವಿಲ್ಲ. ನಾವು ರುದ್ರನನ್ನೂ ಪೂಜೆ ಮಾಡುತ್ತೇವೆ ಎನ್ನುವವರು ಆಯಾಯ ದೇವಸ್ಥಾನಗಳಲ್ಲಿ  ಆಯಾಯ ದೇವರಿಗೇ ಪೂಜೆ ಮಾಡಬೇಕು, ಹಿಂದೂ ಧಾರ್ಮಿಕ ಪದ್ಧತಿಯನ್ನು ಆಚರಣೆ ಮಾಡಬೇಕು ಎಂಬುದು  ತಿಳಿದಿಲ್ಲವೇ ? ಪೂಜಾ ಪದ್ಧತಿ ತಿಳಿಯದ ಮುಗ್ದ ಭಕ್ತರನ್ನು  ದಾರಿ ತಪ್ಪಿಸುವುದು  ಏಕೆ ? ಎಂದು ಪ್ರಶ್ನಿಸಿದರು.

Advertisement

ಸುದ್ದಿಗೋಷ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ  ಟಿ ಎಸ್‌ ಶ್ರೀನಾಥ್‌, ಪದಾಧಿಕಾರಿಗಳಾದ ಮೋನಪ್ಪ ಮಾನಾಡು, ಗುರುಪ್ರಸಾದ್‌ ಪಂಜ, ಪ್ರಶಾಂತ್‌ ಭಟ್‌ ಮಾಣಿಲ ಉಪಸ್ಥಿತರಿದ್ದರು.

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ |  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
January 23, 2025
10:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror