ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಶೈವ-ವೈಷ್ಣವ ಪೂಜಾ ವಿವಾದದ ಬಗ್ಗೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಸ್ಪಷ್ಟನೆ ನೀಡಿದೆ. ಇದು ಶೈವ ವೈಷ್ಣವ ವಿವಾದ ಅಲ್ಲ, ಹಿಂದೂ ಏಕತೆಯ ಪ್ರಶ್ನೆ ಎಂದು ವೇದಿಕೆಯ ಪದಾಧಿಕಾರಿಗಳು ಹೇಳಿದ್ದಾರೆ.
– ಮಹೇಶ್ ಕುಮಾರ್ ಕರಿಕಳ
ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್ ಕುಮಾರ್ ಕರಿಕಳ, ಸಾರ್ವಜನಿಕ ದೇವಸ್ಥಾನಗಳಲ್ಲಿ ಆಯಾಯ ದೇವರಿಗ ಸಲ್ಲಬೇಕಾದ ರೀತಿಯಲ್ಲಿಯೇ ಪೂಜೆ ನಡೆಯಬೇಕು, ಅಂತರ್ಯಾಮಿ ಪೂಜೆ ಸಲ್ಲದು , ಪೂಜಾ ಪದ್ಧತಿಯಲ್ಲಿ ತಾರತಮ್ಯ ಸಲ್ಲದು, ಹೀಗಾಗಿ ಇದು ಶೈವ-ವೈಷ್ಣವ ವಿವಾದ ಅಲ್ಲ , ಹಿಂದೂ ಏಕತೆಯ ವಿಚಾರ ಎಂದು ಸ್ಪಷ್ಟಪಡಿಸಿ , ಮಾಧ್ವರ ಬಗ್ಗೆ ನಮ್ಮ ವಿರೋಧ ಅಲ್ಲವೇ ಅಲ್ಲ, ಆ ರೀತಿಯಾಗಿ ಬಿಂಬಿಸಬೇಕಾಗಿಯೂ ಇಲ್ಲ. ಶಿವಳ್ಳಿ ಬ್ರಾಹ್ಮಣರಲ್ಲಿ ಶೇ 75 ರಷ್ಟು ಮಂದಿ ಎಲ್ಲಾ ದೇವರನ್ನೂ ಪೂಜಿಸುತ್ತಾರೆ. ಆದರೆ ಶೇ.25 ರಷ್ಟು ಮಂದಿ ಎಲ್ಲಾ ದೇವರನ್ನೂ ಪೂಜೆ ಮಾಡುವುದಿಲ್ಲ, ಅದಕ್ಕೆ ಉದಾಹರಣೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಚೆಗೆ ನಡೆದ ಶಿವರಾತ್ರಿ ಆಚರಣೆಯ ವಿವಾದ ಎಂದರು. ಇದು ಮಾತ್ರವಲ್ಲ ಕೆಲವು ಕಡೆ, ಸಾರ್ವಜನಿಕ ದೇವಾಲಯಗಳಲ್ಲಿ ನೇರವಾಗಿ ಆಯಾ ದೇವರಿಗೆ ಪೂಜೆ ಮಾಡದೆ, ವಿಷ್ಣು ಪೂಜೆ ಮಾಡುತ್ತಾರೆ,ಶಿವಲಿಂಗಕ್ಕೆ ವಿಷ್ಣು ಅಂತರ್ಯಾಮಿ ಎಂದು ಪೂಜೆ ಮಾಡುತ್ತಾರೆ. ಶಿವ ದೇವರ ನೈವೇದ್ಯ ಪ್ರಸಾದವನ್ನೂ ಕೆಲವು ಸ್ವೀಕರಿಸುವುದಿಲ್ಲ. ಹಿಂದೂ ಧರ್ಮದೊಳಗೆ ಇದೆಂತಹ ಆಚರಣೆ, ಇದನ್ನು ಹಿಂದೂ ಸಮಾಜ ಕೇಳಿದ್ದು ತಪ್ಪಾಗುತ್ತದೆಯೇ ಎಂದು ಮಹೇಶ್ ಕುಮಾರ್ ಪ್ರಶ್ನಿಸಿದರು.
ಶೈವ-ವೈಷ್ಣವರಲ್ಲಿ ಬೇಧವಿಲ್ಲ. ನಾವು ರುದ್ರನನ್ನೂ ಪೂಜೆ ಮಾಡುತ್ತೇವೆ ಎನ್ನುವವರು ಆಯಾಯ ದೇವಸ್ಥಾನಗಳಲ್ಲಿ ಆಯಾಯ ದೇವರಿಗೇ ಪೂಜೆ ಮಾಡಬೇಕು, ಹಿಂದೂ ಧಾರ್ಮಿಕ ಪದ್ಧತಿಯನ್ನು ಆಚರಣೆ ಮಾಡಬೇಕು ಎಂಬುದು ತಿಳಿದಿಲ್ಲವೇ ? ಪೂಜಾ ಪದ್ಧತಿ ತಿಳಿಯದ ಮುಗ್ದ ಭಕ್ತರನ್ನು ದಾರಿ ತಪ್ಪಿಸುವುದು ಏಕೆ ? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಟಿ ಎಸ್ ಶ್ರೀನಾಥ್, ಪದಾಧಿಕಾರಿಗಳಾದ ಮೋನಪ್ಪ ಮಾನಾಡು, ಗುರುಪ್ರಸಾದ್ ಪಂಜ, ಪ್ರಶಾಂತ್ ಭಟ್ ಮಾಣಿಲ ಉಪಸ್ಥಿತರಿದ್ದರು.
ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…
ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ ಗ್ರಾಮ ಪಂಚಾಯತಿಯನ್ನು ದತ್ತು ಸ್ವೀಕಾರ ಮಾಡಬೇಕೆಂದು…
ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…