ಕುಕ್ಕೆಯಲ್ಲಿ ಆಶ್ಲೇಷ ಬಲಿ..! ಈಗ Online ವ್ಯವಹಾರ…! | ದೈವ ಕೋಲದ ಬಳಿಕ ಈಗ ಪೂಜೆಯೂ ವ್ಯವಹಾರವೇ…? |

December 29, 2023
10:53 PM

ಈಚೆಗೆ ವೀಕೆಂಡ್‌ ಟೂರ್‌ನಲ್ಲಿ ತುಳುನಾಡಿನ ದೈವಾರಾಧನೆಯೂ ಸೇರಿದಂತೆ ಪ್ಯಾಕೇಜ್‌ ವ್ಯವಸ್ಥೆಯಲ್ಲಿ  ಕಂಡುಬಂದ ಉದ್ಯಮವೊಂದು ವಿರೋಧದ ಕಾರಣದಿಂದ ಸ್ಥಗಿತವಾಯಿತು. ಇದೀಗ ಕುಕ್ಕೆಯಲ್ಲಿ ಆಶ್ಲೇಷ ಬಲಿಯೂ ವ್ಯವಹಾರವಾಗಿದೆ. Online ನಲ್ಲಿ ಬುಕಿಂಗ್‌ ಮಾಡಿ ಪ್ರಸಾದವೂ ಕೊರಿಯರ್‌ ಮೂಲಕ ಕಳುಹಿಸುವ ವ್ಯವಸ್ಥೆ ಇದಾಗಿದೆ..!. 

ರಾಜ್ಯದ ನಂಬರ್‌ ವನ್‌ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಸರ್ಪ ದೋಷ ನಿವಾರಣೆಯ ಪ್ರಸಿದ್ಧ ಕ್ಷೇತ್ರ. ಈಗ ಇದುವೇ ಕೆಲವು ಕಡೆ ಉದ್ಯಮದ ಭಾಗವಾಗಿ ಬೆಳೆದಿದೆ. ಧಾರ್ಮಿಕ ಭಾವನೆಗಳೂ ಉದ್ಯಮ, ವ್ಯವಹಾರವಾದಾಗಲೂ ಯಾವ ಆಡಳಿತವೂ ಧ್ವನಿ ಎತ್ತುತ್ತಿಲ್ಲ. ಮೌನವಾಗಿದೆ ಎಂದು ಭಕ್ತಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವ-ಸೇವಾ ಎನ್ನುವ ಆನ್‌ ಲೈನ್‌ ವ್ಯವಹಾರದ ಧಾರ್ಮಿಕ ಕಾರ್ಯಕ್ರಮದ ಡಿಜಿಟಲ್‌ ಪ್ಲಾಟ್‌ ಫಾರಂನಲ್ಲಿ ಶುಕ್ರವಾರ ಬೆಳಗಿನಿಂದ ಜಾಹೀರಾತು ರೂಪದಲ್ಲಿ ಪ್ರಸಾರವಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಯಂದು ವಿಶೇಷವಾಗಿ ಆಶ್ಲೇಷ ಬಲಿ ಪೂಜೆ ಮಾಡಲಾಗುತ್ತದೆ. ತಮ್ಮ ದೋಷ ನಿವಾರಣೆಗೆ ಇಲ್ಲಿ ಬುಕಿಂಗ್‌ ಮಾಡಿ ಸೇವೆ ಸಲ್ಲಿಸಬಹುದು. ರಾಶಿ ಹಾಗೂ ನಕ್ಷತ್ರವನ್ನು ತಿಳಿಸಿದರೆ ಪುರೋಹಿತರು ಸಂಕಲ್ಪ ಮಾಡಿ ತಮ್ಮ ದೋಷ ನಿವಾರಣೆಗೆ ಪೂಜೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಲಾಗಿದೆ. ಈ ಪೂಜೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತದೆ, ನೇರ ಪ್ರಸಾರದ ಮೂಲಕವೂ ನೋಡಬಹುದು ಎಂದು ಹೇಳಲಾಗಿದೆ. ಇದರ ಜೊತೆಗೆ ಪ್ರಸಾದವನ್ನು ಕೂಡಾ ಕಳುಹಿಸಿ ಕೊಡುವ ವ್ಯವಸ್ಥೆ ಇದೆ ಎಂದು ಉಲ್ಲೇಖಿಸಲಾಗಿದೆ.

ಆದರೆ ಕುಕ್ಕೆ ಸುಬ್ರಹ್ಮಣ್ಯದ ಎಲ್ಲಿ ಪೂಜೆ ನಡೆಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲ. ದೇವಸ್ಥಾನದಲ್ಲೋ ಅಥವಾ ಬೇರೆಲ್ಲಾದರೂ ನಡೆಯುತ್ತದೆಯೂ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ಬಹುತೇಕ ಉತ್ತರ ಭಾರತದ ಮಂದಿ ಈ ಡಿಜಿಟಲ್‌ ಪ್ಲಾಟ್‌ ಫಾರಂಗೆ ಸ್ಪಂದನೆ ನೀಡಿದ್ದು ಸಂಜೆಯ ವೇಳೆಗೆ 2 ಸಾವಿರಕ್ಕೂ ಅಧಿಕ ಮಂದಿ ಸ್ಪಂದಿಸಿದ್ದಾರೆ. 60 ಕ್ಕೂ ಹೆಚ್ಚು ಜನರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪೇಸ್‌ ಬುಕ್‌ ಮೂಲಕ ಪ್ರಚಾರ ನೀಡಲಾಗಿದೆ.

ಸಂಜೆಯವರೆಗೂ ಈ ಪೂಜೆ ಎಲ್ಲಿ ನಡೆಯುತ್ತದೆ, ಯಾರು ನಡೆಸುತ್ತಾರೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಇದುವರೆಗೂ ಯಾವುದೇ ಆಡಳಿತವು ಯಾವ ಪ್ರತಿಕ್ರಿಯೆಯೂ ನೀಡಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಎನ್ನುವ ಹೆಸರು ಉಲ್ಲೇಖ ಮಾಡಿರುವುದರಿಂದ ದೇವಸ್ಥಾನವು ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿತ್ತು, ಇದು ದೇವಸ್ಥಾನದ ವತಿಯಿಂದಲೇ ಮಾಡಲಾಗುತ್ತದೆಯೇ, ಅಥವಾ ಬೇರೆ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಬೇಕಾಗಿತ್ತು ಎಂಬುದು ಭಕ್ತರ ಅಪೇಕ್ಷೆಯಾಗಿದೆ. ಆಶ್ಲೇಷ ಬಲಿ ಸಹಿತ ಯಾವ ಪೂಜೆಗಳು ಎಲ್ಲಿ ಬೇಕಾದರೂ ನಡೆಯಬಹುದು, ಆದರೆ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ, ನಾಗದೋಷ ನಿವಾರಣೆಯ ಹೆಸರಿನಲ್ಲಿ ನಡೆಯುವ ಪೂಜೆ ಎಲ್ಲಿ ನಡೆಯುತ್ತದೆ,ಯಾರು ನಡೆಸುತ್ತಾರೆ ಎಂಬುದರ ಉಲ್ಲೇಖ ಇರಬೇಕಾಗಿದೆ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 22, 2025
7:04 PM
by: ದ ರೂರಲ್ ಮಿರರ್.ಕಾಂ
ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಇಂದಿನಿಂದ ‘ನವರಾತ್ರ ನಮಸ್ಯಾ’ | ವೈಭವದೊಂದಿಗೆ ಸಂಪನ್ನವಾದ ರಾಘವೇಶ್ವರ ಶ್ರೀಗಳ ಪುರಪುವೇಶ ಮೆರವಣಿಗೆ
September 22, 2025
7:26 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-09-2025 | ಸೆ.29 ರವರೆಗೆ ಅಲ್ಲಲ್ಲಿ ಮಳೆ ನಿರೀಕ್ಷೆ | ವಾಯುಭಾರ ಕುಸಿತದ ಪರಿಣಾಮ ಏನು..?
September 21, 2025
9:24 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group