ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ ಭಕ್ತಾದಿಗಳು ಇದಕ್ಕೆ ಸಹಕರಿಸಿದರೆ ವಾಹನ ಸಂಚಾರವೂ, ವಾಹನ ಪಾರ್ಕಿಂಗ್ ವ್ಯವಸ್ಥೆಯೂ ಸುಗಮವಾಗಲಿದೆ. ಇದಕ್ಕಾಗಿ ಭಕ್ತಾದಿಗಳು ಸಹಕರಿಸಿ.
ಡಿ.17ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲೇ ನಿಲುಗಡೆಗೊಳಿಸಬೇಕು. ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿದವರು 4 ಗಂಟೆಯ ಒಳಗೆ ನಿಗದಿ ಪಡಿಸಿದ ವಸತಿಗೃಹಗಳಿಗೆ ತೆರಳಬೇಕು. ಅಲ್ಲದೆ ತುರ್ತು ಸಂದರ್ಭ ಹೊರತು ಪಡಿಸಿ ಸರ್ವರಿಗೂ ಈ ನಿಯಮಗಳು ಅನ್ವಯವಾಗಲಿದೆ.ಅಲ್ಲದೆ ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಿಲ್ದಾಣ ಮಾರ್ಗಸೂಚಿ: ಗುಂಡ್ಯ, ಉಪ್ಪಿನಂಗಡಿ, ಪುತ್ತೂರು, ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ಲಘು ವಾಹನಗಳಿಗೆ ಕುಮಾರಧಾರ ಹಲಿಪ್ಯಾಡ್ ಮತ್ತು ಪದವಿ ಪೂರ್ವ ಕಾಲೇಜು ಮೈದಾನ, ದ್ವಿಚಕ್ರ ವಾಹನಗಳಿಗೆ ಪದವಿ ಕಾಲೇಜು ಮೈದಾನ, ಬಿಲದ್ವಾರದ ಎದುರಿನ ಮೈದಾನಗಳನ್ನು ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ, ದ್ವಿಚಕ್ರ ವಾಹನಗಳು ಮತ್ತು ಲಘು ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.ಅಟೋ ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಎದುರಿನ ತನಕ ಸಾಗಾಟ ಮಾಡಬಹುದಾಗಿದೆ. ಜಾತ್ರೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಅವರ ಸುರಕ್ಷತಾ ದೃಷ್ಠಿಯಿಂದ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.