ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ವಿರುದ್ದ ಕಾಂಗ್ರೆಸ್‌ ಆರೋಪ | ಆಡಳಿತ ಮಂಡಳಿಯನ್ನು ವಜಾಗೊಳಿಸಲು ಒತ್ತಾಯಿಸಿ ಪತ್ರ ಚಳವಳಿ | ಟೆಂಡರ್‌ ಸ್ಥಗಿತ-ಕೋಟ್ಯಂತರ ರೂಪಾಯಿ ದೇವಾಲಯಕ್ಕೆ ನಷ್ಟ ಆರೋಪ |

March 26, 2022
11:16 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈಗಿನ ಆಡಳಿತ ಮಂಡಳಿ ವಿರುದ್ಧ ದುರಾಡಳಿತದ ಆರೋಪವನ್ನು ಕಾಂಗ್ರೆಸ್‌ ಮಾಡಿದೆ. ಟೆಂಡರ್‌ ರದ್ದು ಮಾಡಿ ದುಬಾರಿ ಬೆಲೆಯಲ್ಲಿ ಜನತಾ ಬಜಾರಿನಿಂದ ಖರೀದಿಸಿ ದೇವಳಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿರುತ್ತಾರೆ ಎಂದು ಕಾಂಗ್ರೆಸ್‌ ನೇರ ಆರೋಪ ಮಾಡಿದೆ.

Advertisement
Advertisement
Advertisement

Advertisement

ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಡಬ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಗಳು, ಆಡಳಿತದಿಂದ ದುರಾಡಳಿತ ನಡೆಯುತಿದ್ದು ಇದರಿಂದ ದೇವಸ್ಥಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.ಇಲಾಖಾ ಅನುಮತಿ ಪಡೆದು ಮಾಡಿರುವ ಕಾಮಗಾರಿ, ಟೆಂಡರ್ ಕರೆದು ಆದೇಶ ನೀಡಿರುವ ಕೆಲಸವನ್ನು ಈಗಿನ ಅಡಳಿತ ಮಂಡಳಿಯವರು ಸ್ಥಗಿತಗೊಳಿಸಿದ್ದಾರೆ. ದೇವಳಕ್ಕೆ ಟೆಂಡರ್ ಮುಖಾಂತರ ದಿನಸಿ ವಸ್ತುಗಳನ್ನು ಖರೀದಿ ಮಾಡದೇ ದುಬಾರಿ ಬೆಲೆಯಲ್ಲಿ ಜನತಾ ಬಜಾರಿನಿಂದ ಖರೀದಿಸಿ ಕೋಟ್ಯಾಂತರ ನಷ್ಟ ಉಂಟು ಮಾಡಿರುತ್ತಾರೆ.  ಹೀಗೆ ಹಲವು ನಿಯಮ ಬಾಹಿರ ಕೆಲಸಗಳನ್ನು ಆಡಳಿತ ಮಂಡಳಿ ಮಾಡಿದ್ದು ಈ ಆಡಳಿತ ಮಂಡಳಿಯನ್ನು ವಜಾಗೊಳಿಸ ಬೇಕು ಅದಕ್ಕಾಗಿ ಪತ್ರ ಚಳವಳಿ ಮಾಡಲಿದ್ದೇವೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ದತ್ತು ತೆಗೆದುಕೊಂಡ ದೇವಾಲಯಗಳಿಗೆ ಹಣ ಬಿಡುಗಡೆಗೊಳಿಸಬೇಕಾದ ಹಣವನ್ನು ನೀಡದೆ ಹಿಂದು ವಿರೋಧಿ ನೀತಿ ಅನುಸರಿಸಲಾಗಿದೆ. ಸುಬ್ರಹ್ಮಣ್ಯದ ಒಳಚರಂಡಿ ಯೋಜನೆಯ ಶುಲ್ಕ ವಸೂಲಾತಿ ಮಾಡದೆ ದೇವಳದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಲಾಗಿದೆ. ದೇವಳದಿಂದ ಅಪಾರ ಪ್ರಮಾಣದ ಲಾಡು ಕದ್ದು ಸಾಗಾಟ ಮಾಡಿರುವುದು ಅಲ್ಲದೆ ದೇವಳದ ವಾಹನದಲ್ಲಿ ಮೀನು ಸಾಗಾಟ ಮಾಡಿರುವುದು ಇತ್ಯಾದಿ ವಿಷಯಗಳು ಭಕ್ತಾದಿಗಳು ತಲೆತಗ್ಗಿಸುವ ಕೆಲಸ ಮಾಡಿದಂತೆ ಎಂದು ಆರೋಪಿಸಿದರು.ದೇವಸ್ಥಾನದ ಅವ್ಯವಸ್ಥೆಗೆ ಕಾರಣವಾಗಿರುವ ಈಗಿನ ಆಡಳಿತ ಮಂಡಳಿಯನ್ನು ವಜಾಗೊಳಿಸಲು ಭಕ್ತಾಧಿಗಳ ಮುಖಾಂತರ ಒತ್ತಾಯ ಪಡಿಸುವ ಪತ್ರಚಳುವಳಿಯನ್ನು ನಡೆಸಲು ತೀರ್ಮಾನಿಸಿರುವುದಾಗಿ ಎಂದವರು ತಿಳಿಸಿದರು.

Advertisement

ಸುದ್ದಿಗೋಷ್ಟಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಶಿವರಾಮ ರೈ ,  ಹರೀಶ್ ಇಂಜಾಡಿ ,  ಕೃಷ್ಣಮೂರ್ತಿ ಭಟ್ ,  ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ವಿಮಲಾ ರಂಗಯ್ಯ, ಬಾಲಕೃಷ್ಣ ಮರೀಲ್, ಮಾದವ ದೇವರಗದ್ದೆ, ಲಕ್ಷ್ಮೀ ಸುಬ್ರಹ್ಮಣ್ಯ, ಸೌಮ್ಯ, ಲೋಲಾಕ್ಷ, ಚಿದಾನಂದ ಮಾನಾಡು, ದಿನೇಶ್ ದೇವರಗದ್ದೆ, ಪವನ್ ಕುಮಾರ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ
ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ
November 23, 2024
6:21 AM
by: The Rural Mirror ಸುದ್ದಿಜಾಲ
ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ
November 23, 2024
6:12 AM
by: The Rural Mirror ಸುದ್ದಿಜಾಲ
ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ
November 23, 2024
6:06 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror