ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಈಗಿನ ಆಡಳಿತ ಮಂಡಳಿ ವಿರುದ್ಧ ದುರಾಡಳಿತದ ಆರೋಪವನ್ನು ಕಾಂಗ್ರೆಸ್ ಮಾಡಿದೆ. ಟೆಂಡರ್ ರದ್ದು ಮಾಡಿ ದುಬಾರಿ ಬೆಲೆಯಲ್ಲಿ ಜನತಾ ಬಜಾರಿನಿಂದ ಖರೀದಿಸಿ ದೇವಳಕ್ಕೆ ಕೋಟ್ಯಾಂತರ ನಷ್ಟ ಉಂಟು ಮಾಡಿರುತ್ತಾರೆ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ.
ಸುಬ್ರಹ್ಮಣ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಆಡಳಿತದಿಂದ ದುರಾಡಳಿತ ನಡೆಯುತಿದ್ದು ಇದರಿಂದ ದೇವಸ್ಥಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.ಇಲಾಖಾ ಅನುಮತಿ ಪಡೆದು ಮಾಡಿರುವ ಕಾಮಗಾರಿ, ಟೆಂಡರ್ ಕರೆದು ಆದೇಶ ನೀಡಿರುವ ಕೆಲಸವನ್ನು ಈಗಿನ ಅಡಳಿತ ಮಂಡಳಿಯವರು ಸ್ಥಗಿತಗೊಳಿಸಿದ್ದಾರೆ. ದೇವಳಕ್ಕೆ ಟೆಂಡರ್ ಮುಖಾಂತರ ದಿನಸಿ ವಸ್ತುಗಳನ್ನು ಖರೀದಿ ಮಾಡದೇ ದುಬಾರಿ ಬೆಲೆಯಲ್ಲಿ ಜನತಾ ಬಜಾರಿನಿಂದ ಖರೀದಿಸಿ ಕೋಟ್ಯಾಂತರ ನಷ್ಟ ಉಂಟು ಮಾಡಿರುತ್ತಾರೆ. ಹೀಗೆ ಹಲವು ನಿಯಮ ಬಾಹಿರ ಕೆಲಸಗಳನ್ನು ಆಡಳಿತ ಮಂಡಳಿ ಮಾಡಿದ್ದು ಈ ಆಡಳಿತ ಮಂಡಳಿಯನ್ನು ವಜಾಗೊಳಿಸ ಬೇಕು ಅದಕ್ಕಾಗಿ ಪತ್ರ ಚಳವಳಿ ಮಾಡಲಿದ್ದೇವೆ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ದತ್ತು ತೆಗೆದುಕೊಂಡ ದೇವಾಲಯಗಳಿಗೆ ಹಣ ಬಿಡುಗಡೆಗೊಳಿಸಬೇಕಾದ ಹಣವನ್ನು ನೀಡದೆ ಹಿಂದು ವಿರೋಧಿ ನೀತಿ ಅನುಸರಿಸಲಾಗಿದೆ. ಸುಬ್ರಹ್ಮಣ್ಯದ ಒಳಚರಂಡಿ ಯೋಜನೆಯ ಶುಲ್ಕ ವಸೂಲಾತಿ ಮಾಡದೆ ದೇವಳದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟು ಮಾಡಲಾಗಿದೆ. ದೇವಳದಿಂದ ಅಪಾರ ಪ್ರಮಾಣದ ಲಾಡು ಕದ್ದು ಸಾಗಾಟ ಮಾಡಿರುವುದು ಅಲ್ಲದೆ ದೇವಳದ ವಾಹನದಲ್ಲಿ ಮೀನು ಸಾಗಾಟ ಮಾಡಿರುವುದು ಇತ್ಯಾದಿ ವಿಷಯಗಳು ಭಕ್ತಾದಿಗಳು ತಲೆತಗ್ಗಿಸುವ ಕೆಲಸ ಮಾಡಿದಂತೆ ಎಂದು ಆರೋಪಿಸಿದರು.ದೇವಸ್ಥಾನದ ಅವ್ಯವಸ್ಥೆಗೆ ಕಾರಣವಾಗಿರುವ ಈಗಿನ ಆಡಳಿತ ಮಂಡಳಿಯನ್ನು ವಜಾಗೊಳಿಸಲು ಭಕ್ತಾಧಿಗಳ ಮುಖಾಂತರ ಒತ್ತಾಯ ಪಡಿಸುವ ಪತ್ರಚಳುವಳಿಯನ್ನು ನಡೆಸಲು ತೀರ್ಮಾನಿಸಿರುವುದಾಗಿ ಎಂದವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಶಿವರಾಮ ರೈ , ಹರೀಶ್ ಇಂಜಾಡಿ , ಕೃಷ್ಣಮೂರ್ತಿ ಭಟ್ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ, ವಿಮಲಾ ರಂಗಯ್ಯ, ಬಾಲಕೃಷ್ಣ ಮರೀಲ್, ಮಾದವ ದೇವರಗದ್ದೆ, ಲಕ್ಷ್ಮೀ ಸುಬ್ರಹ್ಮಣ್ಯ, ಸೌಮ್ಯ, ಲೋಲಾಕ್ಷ, ಚಿದಾನಂದ ಮಾನಾಡು, ದಿನೇಶ್ ದೇವರಗದ್ದೆ, ಪವನ್ ಕುಮಾರ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…