ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮುಗಿಯದ ಶೈವ-ವೈಷ್ಣವ ವಿವಾದ | ಹಿಂದೂ ಸಮಾಜದ ನಿರ್ಲಕ್ಷ್ಯದ ಬಗ್ಗೆ ವಿದ್ಯಾಪ್ರಸನ್ನ ಶ್ರೀಗಳ ವಿಷಾದದ ಮಾತು

March 10, 2021
8:45 PM

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉಮಾಮಹೇಶ್ವರ ಗುಡಿಯಲ್ಲಿ ಶಿವರಾತ್ರಿಯಂದು ಶೈವ ಪದ್ಧತಿ ಪ್ರಕಾರ ಪೂಜೆ ನಡೆಯಬೇಕು ಎಂಬ ವಿವಾದ ರಾಜ್ಯದಲ್ಲಿ ಸುದ್ದಿಯಾಗಿತ್ತು. ಅದಾದ ಬಳಿಕ ಮುಜರಾಯಿ ಇಲಾಖೆ ಶೈವ ಪದ್ದತಿಯ ಪ್ರಕಾರ ಪೂಜೆ ನಡೆಸಲು ತಿಳಿಸಿತ್ತು. ಈ ಬಗ್ಗೆ ಮತ್ತೆ ವಿವಾದ ನಡೆದು  ನ್ಯಾಯಾಲಯದ ಮೆಟ್ಟಿಲೇರಿದ ಈ ಪ್ರಕರಣದಲ್ಲಿ ಯಥಾ ಪ್ರಕಾರ ಕಾಯ್ದುಕೊಳ್ಳಲು ನ್ಯಾಯಾಲಯ ನಿರ್ದೆಶನ ನೀಡಿದೆ.

Advertisement

ಈ ನಡುವೆ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಶೈವ-ವೈಷ್ಣವ ಹಾಗೂ ಹಿಂದೂ ಧರ್ಮದ ಬಗ್ಗೆ ಹೇಳಿರುವ ಹೇಳಿಕೆ ಇದೀಗ ವೈರಲ್‌ ಆಗುತ್ತಿದೆ. ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸ್ವಾಮೀಜಿಗಳ ಈ ಮಾತಿನ ಬಗ್ಗೆ ವಿವಿಧ ಚರ್ಚೆಗಳು ಆರಂಭವಾಗಿದೆ. ಮಾತಿನ ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ನಿಷ್ಟೆಯ ಬಗ್ಗೆ ಮಾತನಾಡಿದ ಶ್ರೀಗಳು ನಂತರ ಶೈವ-ವೈಷ್ಣವ ಚರ್ಚೆಯ ಬಗ್ಗೆ ಮಾತನಾಡಿ ಹಿಂದೂ ಸಮಾಜವು ಮಾಡುತ್ತಿರುವ ನಿರ್ಲಕ್ಷ್ಯದ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಮಠದ ವಿರುದ್ಧವೂ ನಿರಂತರ ಕಿರುಕುಳದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ವೈರಲ್‌ ಆಗಿರುವ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ಹೇಳಿಕೆಯ ಲಿಂಕ್..

 

ಹಿಂದೂ ಧರ್ಮದೊಳಗೆ ಶೈವ-ವೈಷ್ಣವ ಚರ್ಚೆಯನ್ನು ಬಗೆಹರಿಸುವವರು ಯಾರು ಎಂಬ ಪ್ರಶ್ನೆಗೆ ಸದ್ಯ ಉತ್ತರಲಿಲ್ಲ. ಹಿಂದೂ ಸಂಘಟನೆಗಳು ಅದರಲ್ಲೂ ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರು ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಬಗೆಹರಿಸಲು ಪ್ರಯತ್ನಿಸಿದ್ದರೂ ಫಲ ನೀಡಿರಲಿಲ್ಲ. ಹಿಂದೂಗಳ ನಡುವೆತೇ ಐಕ್ಯತೆ ತರಲು ಸಾಧ್ಯವಾಗಿರಲಿಲ್ಲ. ಪ್ರತಿಷ್ಟೆಯ ಈ ವಿಷಯದಲ್ಲಿ ಈಗ ಸ್ವಾಮೀಜಿಗಳ ಹೇಳಿಕೆ ಕೂಡಾ ಚರ್ಚೆಗೆ ಕಾರಣವಾಗಿದೆ.

ಸದ್ಯ ಚರ್ಚೆ ಅಂತ್ಯ ಕಾಣುವ ಲಕ್ಷಣಗಳು ಕಾಣುತ್ತಿಲ್ಲ. ಶಿವಾರಾಧಕರಿಗೆ ಶಿವ ಪೂಜೆ ನಡೆಯಬೇಕಾದರೆ ಪೂಜೆ ನಡೆಸುವವರು ಯಾರು ಎಂಬ ಪ್ರಶ್ನೆ ಒಂದು ಕಡೆ ಇದ್ದರೆ , ಈ ಹಿಂದಿನಂತೆಯೇ ಪೂಜೆ ನಡೆಯುತ್ತದೆ ಎನ್ನುವುದು  ಇನ್ನೊಂದು ವಾದ. ಶಿವರಾತ್ರಿಯಂದು ಗೊಂದಲದ ಪೂಜೆ ನಡೆಯುತ್ತಿರುವುದು  ಮಾತ್ರಾ ಈಗಿನ ವಿಪರ್ಯಾಸ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ
February 21, 2026
8:36 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?
February 21, 2026
2:42 PM
by: ದ ರೂರಲ್ ಮಿರರ್.ಕಾಂ
ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ
February 21, 2026
10:19 AM
by: ಮಹೇಶ್ ಪುಚ್ಚಪ್ಪಾಡಿ
ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ
February 21, 2026
10:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror