ಎರಡು ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ- ತಿರುಪತಿ ಸಂಪರ್ಕಿಸಲು ಕೆ ಎಸ್ ಆರ್ ಟಿ ಸಿ ಬಸ್ಸು ಸೇವೆ ಶನಿವಾರ ಸಂಜೆ ಆರಂಭಗೊಂಡಿದೆ. ಸಚಿವ ಎಸ್ ಅಂಗಾರ ಬಸ್ಸು ಸೇವೆಯನ್ನು ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ದಿ ವಿಭಾಗದ ಪುತ್ತೂರು ಉಪ ವಿಭಾಗದ ಧರ್ಮಸ್ಥಳ ಡಿಪೋದ ವತಿಯಿಂದ ಈ ಸೇವೆ ಆರಂಭಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ-ತಿರುಪತಿ ಬಸ್ ರಾತ್ರಿ 9 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಹೊರಡಲಿದೆ. ಬೆಳಗ್ಗೆ 4.30 ಗಂಟೆಗೆ ಗೆ ಬೆಂಗಳೂರು ತಲುಪಲಿದೆ.ಅಲ್ಲಿಂದ 5 ಗಂಟೆಗೆ ಹೊರಟು 10.30 ಗಂಟೆಗೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಸಂಜೆ 4 ಗಂಟೆಗೆ ಹೊರಡಲಿದೆ.ಅಲ್ಲಿಂದ ಬೆಂಗಳೂರು ಮೂಲಕ ಬೆಳಗ್ಗೆ 5 ಗಂಟೆಗೆ ಸುಬ್ರಹ್ಮಣ್ಯ ತಲುಪಲಿದೆ.ಬಸ್‌ನಲ್ಲಿ ಇಬ್ಬರು ಚಾಲಕರು ಇರಲಿದ್ದಾರೆ.
ಬಸ್ಸು ಸೇವೆ ಉದ್ಘಾಟಿಸಿದ ಸಚಿವ ಎಸ್ ಅಂಗಾರ, ಎರಡು ಪುಣ್ಯ ಕ್ಷೇತ್ರಗಳ ಸಂಪರ್ಕದ ಈ ಬಸ್ಸು ಸೇವೆಯನ್ನು ಎಲ್ಲರೂ ಬಳಸಿಕೊಳ್ಳಬೇಕು, ಯಾತ್ರಾ ಕ್ಷೇತ್ರಗಳಿಗೆ ನೇರವಾಗಿ ಪ್ರಯಾಣ ಬೆಳೆಸಲು ಬಸ್ ವ್ಯವಸ್ಥೆ ಬೇಕು ಎಂದು ಭಕ್ತರು ಬೇಡಿಕೆ ಇರಿಸಿದ್ದರು ಎಂದರು.
#ಕುಕ್ಕೆಸುಬ್ರಹ್ಮಣ್ಯ – #ತಿರುಪತಿ #KSRTC ಬಸ್ಸು ಸೇವೆ ಆರಂಭ. @KSRTC_Journeys @AngaraSBJP pic.twitter.com/80onSE54DH
Advertisement— theruralmirror (@ruralmirror) March 26, 2022
ಪುರೋಹಿತ ಪ್ರಸನ್ನ ಹೊಳ್ಳ ವೈದಿಕ ವಿದಿ ವಿಧಾನಗಳ ಮೂಲಕ ಬಸ್‌ಗೆ ಪೂಜೆ ನೆರವೇರಿಸಿದರು. ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಪುತ್ತೂರು ವಿಭಾಗೀಯ ಸಂಚಾರಾಧಿಕಾರಿ ಮುರಳೀಧರ ಆಚಾರ್,ಕಾರ್ಯನಿರ್ವಾಹಕ ಅಭಿಯಂತರ ಮಂಜುನಾಥ್ ಗುಡಿಗಾರ್, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ್, ಸಂಚಾರ ನಿಯಂತ್ರಕರಾದ ಗೋಪಾಲಕೃಷ್ಣ ಎಡಮಂಗಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್ ಮೊದಲಾದವರಿದ್ದರು.