#KukkeSubrahmanaya | ಬಸ್ ತಂಗುದಾಣ ಅಭಿವೃದ್ಧಿ ನಮ್ಮ ವ್ಯಾಪ್ತಿಯಲ್ಲಿ ಇಲ್ಲ | ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

July 29, 2023
8:16 PM
ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್. ಆರ್.ಟಿ. ಬಸ್ ತಂಗುದಾಣಕ್ಕೆ ಹೋಗುವ ರಸ್ತೆ ಅವ್ಯವಸ್ಥೆ ಬಗ್ಗೆ ದೇವಸ್ಥಾನ ಜವಾಬ್ದಾರಿ ಅಲ್ಲ, ಅದು ಕೆಎಸ್‌ಆರ್‌ಟಿಸಿ ಜವಾಬ್ದಾರಿ ಆಗಿದೆ ಎಂದು ದೇವಸ್ಥಾನದ ಆಡಳಿತವು ಸ್ಪಷ್ಟಪಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ. ಬಸ್ ತಂಗುದಾಣ ಹಾಗೂ ತಂಗುದಾಣ ಕ್ಕೆ ಬರುವ ರಸ್ತೆ ಅಭಿವೃದ್ಧಿ ನಮ್ಮ ವ್ಯಾಪ್ತಿಯಲ್ಲಿ ಇಲ್ಲ, ಅದು ಕೆ.ಎಸ್.ಆರ್.ಟಿ.ಯ ಆಸ್ತಿ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟ ಪಡಿಸಿದೆ.

ಜು.28 ರಂದು ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದ ರಸ್ತೆ ದುರವ್ಯವಸ್ಥೆ ಬಗ್ಗೆ ಮಾಡಿರುವ ವರದಿಗೆ ಪ್ರತಿಕ್ರಿಯಿಸಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಸುಮಾರು 45 ವರ್ಷಗಳ ಹಿಂದೆ ದೇವಾಲಯದ ವತಿಯಿಂದ ಕೆ.ಎಸ್.ಆರ್.ಟಿ.ಸಿ.ಗೆ ಬಸ್ ನಿಲ್ದಾಣದ ಅವಶ್ಯಕತೆಗಾಗಿ 2 ಎಕ್ರೆ ಜಾಗವನ್ನು ಉಚಿತವಾಗಿ ದಾನ ನೀಡಿತ್ತು. ದೇವಾಲಯ ವತಿಯಿಂದ ಮಾಸ್ಟರ್ ಪ್ಲಾನ್ ಕೆಲಸಕ್ಕಾಗುವಾಗ ದೇವಾಲಯ ವತಿಯಿಂದ 25 ಸೆಂಟ್ಸ್ ಜಾಗವನ್ನು ಮತ್ತೆ ದೇವಾಲಯದ ರಸ್ತೆಗಾಗಿ ಪಡೆದುಕೊಳ್ಳುವಾಗ 84 ಲಕ್ಷ ರೂಪಾಯಿಯನ್ನು ಕೂಡ ಕೆ.ಎಸ್.ಆರ್.ಟಿ.ಗೆ ಪಾವತಿಯೂ ಮಾಡಿತ್ತು. ಆದರೆ ಆ ಜಾಗವನ್ನು ಪೂರ್ಣವಾಗಿ ವಶಕ್ಕೆ ಪಡೆದಿಲ್ಲ 84 ಲಕ್ಷ ಪಾವತಿ ಮಾತ್ರ ಆಗಿದೆ ಆ ಹಣದಲ್ಲಿ ಅವರ ಈ ರಸ್ತೆಯನ್ನು ಅಭಿವೃದ್ಧಿ ಮಾಡಬಹುದಿತ್ತು ಆದರೆ ಅವರು ಮಾಡದೆ ಆ ಹಣವನ್ನು ಬೇರೆಲ್ಲಿಗೋ ಖರ್ಚು ಮಾಡಿದ್ದಾರೆ ಇವಾಗ ಅವರ ಒಳಾಂಗಣದ ರಸ್ತೆಯನ್ನ ದೇವಸ್ಥಾನದ ತಲೆಗೆ ಕಟ್ಟುವುದು ಎಷ್ಟು ಸರಿ.

ಕೆ.ಎಸ್. ಆರ್.ಟಿ. ಬಸ್ ತಂಗುದಾಣಕ್ಕೆ ಹೋಗುವ ರಸ್ತೆ ಅವ್ಯವಸ್ಥೆ ಬಗ್ಗೆ ದೇವಸ್ಥಾನ ಜವಾಬ್ದಾರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

#KukkeSubrahmanya | ಪ್ರಸಿದ್ಧ ಪುಣ್ಯ ಕ್ಷೇತ್ರ | ಬಸ್‌ ನಿಲ್ದಾಣದ ಅವಸ್ಥೆ…! | ರಸ್ತೆ ಅಭಿವೃದ್ಧಿಗೆ ಯಾವುದಾದರೂ “ಮಾಸ್ಟರ್‌ ಪ್ಲಾನ್”‌ ಮಾಡಿ…!

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror