ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ ತಮ್ಮ ಊರಲ್ಲೇ ಆದಾಯವನ್ನು ಗಳಿಸಲು ರಾಜ್ಯ ಸರ್ಕಾರವೂ 2024-25 ಬಜೆಟ್ ನಲ್ಲಿ ಘೋಷಿಸಿದ ಕುಕ್ಕುಟ ಸಂಜೀವಿನಿ ಅಂದರೆ ಸರ್ಕಾರದಿಂದ ಉಚಿತ ಕೋಳಿ ಮರಿಗಳು ಇತ್ಯಾದಿಯನ್ನು ನೀಡುವುದಾಗಿದೆ.
2025 ರಲ್ಲಿ ಈ ಯೋಜನೆಯು ಹೆಚ್ಚಿನ ಜಿಲ್ಲೆಗಳಲ್ಲಿ ವಿಸ್ತರಣೆಯನ್ನು ಕಂಡಿದ್ದು, ಸಾವಿರಾರು ಮಹಿಳೆಯರಿಗೆ ಲಾಭ ತಂದುಕೊಟ್ಟಿದೆ. ಇದೀಗ ಈ ಯೋಜನೆಯನ್ನು ಇನ್ನು ಉಳಿದ ಮಹಿಳೆಯರು ಯಾವ ರೀತಿ ಪಡೆದುಕೊಳ್ಳಬಹುದು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.
ಪಶುಸಂಗೋಪನಾ ಇಲಾಖೆಯಿಂದ 6 ವಾರಗಳ ಹಳೆಯ ಉತ್ತಮ ನಾಟಿ ಕೋಳಿಮರಿಗಳನ್ನು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ವಿತರಿಸಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೆಡ್ ಕಟ್ಟುವ ಖರ್ಚಿಗೆ ಸಹಾಯ. ಹಾಗೂ 500 ಕೋಳಿಗಳ ಸಾಕಾಣಿಕೆಗೆ ರೂ4.5ಲಕ್ಷದವರೆಗೆ ಮತ್ತು 1000ಕೋಳಿಗಳಿಗೆ ರೂ7.5 ಲಕ್ಷದವರೆಗೆ ನೀಡಲಾಗುತ್ತದೆ. ಇನ್ನು ಪ್ರೋತ್ಸಾಹಧನವಾಗಿ ಆರ್ಥಿಕವಾಗಿ ಬೆಂಬಲ ನೀಡಲಾಗುತ್ತದೆ. ಹಾಗೂ ಉತ್ಪಾದಿತ ಮೊಟ್ಟೆಗಳನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಭೋಜನ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮಾರುಕಟ್ಟೆಯ ಬೆಲೆಯ ನೀಡಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
- ಆನ್ ಲೈನ್ ಮೂಲಕ ಅರ್ಜಿ ಇರುವುದಿಲ್ಲ ಆದ್ದರಿಂದ ಆಯಾ ತಾಲೂಕು ಪಶು ಸಂಗೋಪನಾ ಇಲಾಖೆಗೆಗೆ ಭೇಟಿ ನೀಡಿ. ಪಶುವೈದೈ ಅಧಿಕಾರಿಯಿಂದ ಕುಕ್ಕುಟ ಸಂಜೀವಿನಿ ಅರ್ಜಿ ಫಾರ್ಮ್ ಪಡೆಯಬಹುದು.
- ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸಂರ್ಪಕಿಸಿ ಶೆಡ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದು.
- ಅಗತ್ಯ ದಾಖಲೆಗಳು:
• ಆಧಾರ್ ಕಾರ್ಡ್
• ಪಾಸ್ ಪೋರ್ಟ್ ಫೋಟೋ
• ಬ್ಯಾಂಕ್ ಪಾಸ್ ಬುಕ್
• SHG ನೋಂದಣಿ ಮತ್ತು ಜಮೀನು ದಾಖಲೆ ಪ್ರತಿ
• ಮೊಬೈಲ್ ನಂಬರ್


