ಕುಮಾರಯಾತ್ರೆಗೆ ಸಜ್ಜಾಗುತ್ತಿರುವ ಭಕ್ತರು | 10 ಕಿಮೀ ಬೆಟ್ಟ ಕಾಲ್ನಡಿಗೆಯಲ್ಲಿ ಏರಲು ಸಿದ್ಧತೆ | ಕುಕ್ಕೆ-ಕುಮಾರಪರ್ವತಕ್ಕೆ ಪೌರಾಣಿಕ ಸಂಬಂಧ |

December 30, 2023
10:30 AM
ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರಯಾತ್ರೆಯು ಜ.1 ರಂದು ನಡೆಯುತ್ತದೆ. ಜ.2 ರಂದು ಕುಮಾರಪರ್ವತದಲ್ಲಿ ವಿಶೇಷ ಪೂಜೆ ನಡೆಯಲಿದೆ.

ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರಪಾದ ಮತ್ತು  ವಾಸುಕಿಗೆ ಕುಕ್ಕೆಸುಬ್ರಹ್ಮಣ್ಯ ದೇವಳದ ವತಿಯಿಂದ ಜ.2 ರಂದು ಪೂಜೆ  ನಡೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಜ.1 ರಂದು ಕುಮಾರ ಯಾತ್ರೆ ಆರಂಭವಾಗಲಿದೆ.

Advertisement
Advertisement

ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರವಿರುವ  ಕುಮಾರಪರ್ವತದ ತುತ್ತ ತುದಿಗೆ 10 ಕಿ.ಮೀ. ದೂರ ಕಡಿದಾದ ಬೆಟ್ಟದ ಹಾದಿಯಲ್ಲಿ ಪಾದುಕೆಯಿಲ್ಲದೆ ಕಾಲ್ನಡಿಗೆಯಲ್ಲಿ ಅರ್ಚಕರು ಮತ್ತು ಭಕ್ತರು ತೆರಳಿ ಪೂಜೆ ನಡೆಯುವ ವಿಶೇಷ ಸಂಪ್ರದಾಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ.ಜ.1 ರಂದು ಯಾತ್ರೆ ಆರಂಭವಾಗಿ ಜ.2 ರಂದು ಕುಮಾರ ಪರ್ವತದಲ್ಲಿ ಪೂಜೆ ನಡೆಯಲಿದೆ.

Advertisement

ಕುಕ್ಕೆ-ಕುಮಾರಪರ್ವತಕ್ಕೆ ಪವಿತ್ರ ಸಂಬಂಧ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದೆ. ಕುಮಾರಪರ್ವತದ ತುತ್ತ ತುದಿಯಲ್ಲಿನ ಶಿಲೆಯಲ್ಲಿ ಕುಮಾರಸ್ವಾಮಿಯ ಪಾದಗಳ ಪಡಿಯಚ್ಚು ಇದೆ. ಇದರ ಪಕ್ಕದಲ್ಲಿ ವಾಸುಕಿ ನೆಲೆಯಾಗಿದ್ದಾರೆ. ಜಾತ್ರೋತ್ಸವ ಕೊನೆಯಾದ 10 ದಿನಗಳ ಒಳಗೆ ಕುಮಾರಪರ್ವತಕ್ಕೆ ದೇವಳದ  ಅರ್ಚಕರೇ ತೆರಳಿ ಕುಮಾರ ಪಾದಗಳಿಗೆ ಮತ್ತು ವಾಸುಕಿಗೆ ಅಭಿಷೇಕ ನೆರವೇರಿಸಿ ಪೂಜೆ ಮಾಡುವುದು ಸಂಪ್ರದಾಯ.

Advertisement

ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರೆಯಲ್ಲಿ ತೊಳೆದ. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದ ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ಪುರಾಣದಲ್ಲಿ ಉಲ್ಲೇಖಗೊಂಡಿರುವ ಪ್ರಕಾರ ಸುಬ್ರಹ್ಮಣ್ಯ ದೇವರು ತಾರಕಾಸುರನ ವಧೆಯನ್ನು ಇದೇ ಪರ್ವತ ಶ್ರೇಣಿಯಲ್ಲಿ ಮಾಡಿ ಕುಮಾರ ಪರ್ವತದಲ್ಲಿ ತ್ರಿಮೂರ್ತಿಗಳು ದೇವತೆಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿಯಂದು ದೇವತೆಗಳ ರಾಜ ದೇವೇಂದ್ರನ ಮಗಳಾದ ದೇವರಮನೆಯನ್ನು ಸುಬ್ರಹ್ಮಣ್ಯ ದೇವರಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿದರು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರ ನದಿಯಾಯಿತು ಎಂದು ಪುರಾಣವು ಹೇಳುತ್ತದೆ.ಕುಮಾರಪರ್ವತದ ಶಿಖರದಲ್ಲಿ ಈಗಲೂ ಸುಬ್ರಹ್ಮಣ್ಯ ದೇವರ ಪಾದ ಚಿಹ್ನೆಯ ಗುರುತು ಇದೆ. ಇದನ್ನು ಕುಮಾರ ಪಾದ ಕರೆಯಲಾಗುತ್ತದೆ.  ಕುಮಾರ ಪರ್ವತದಲ್ಲಿ ದೊರೆಯುವ ಕುಮಾರಲಿಂಗಕ್ಕೂ ಹೆಚ್ಚಿನ ಮಹತ್ವ ಇದೆ.

ಪೌರಾಣಿಕ ಹಿನ್ನೆಲೆಯ ಕಾರಣದಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಿಂದ ಕುಮಾರ ಪರ್ವತಕ್ಕೆ ಅರ್ಚಕರು ತೆರಳಿ ಅಲ್ಲಿ ಪೂಜೆ ನೆರವೇರಿಸುವ ಕಾರ್ಯ ತಲೆತಲಾಂತರದಿಂದ ನಡೆಯುತ್ತಿದೆ. ಕುಮಾರ ಪರ್ವತಕ್ಕೆ ತೆರಳುವ ಈ ವಿಶೇಷ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಲು ಈಚೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ  ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಮಾರ ಪರ್ವತ ಯಾತ್ರೆಗೆ ತೆರಳಿ ಪೂಜಾ ವಿಧಿವಿಧಾನ ವೀಕ್ಷಿಸಲು ಶ್ರೀ ದೇವಳದಿಂದ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಸುಬ್ರಹ್ಮಣ್ಯದಿಂದ ಕಾಲ್ನಡಿಗೆಯಲ್ಲಿ ಚಾರಣ ಮಾಡಲು ಇಚ್ಛಿಸುವವರು ಜ.1 ರಂದು ಹೊರಟು ಗಿರಿಗದ್ದೆಯಾಗಿ ಹೋದರೆ, ಗಿರಿಗದ್ದೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ದೇವಸ್ಥಾನದ ಅರ್ಚಕರು ಸೇರಿ ಭಕ್ತಾದಿಗಳ ಇನ್ನೊಂದು ತಂಡ ಕುಮಾರ ಪಾದ ಪೂಜೆಯ ದಿನದಂದು ವಾಹನ ವ್ಯವಸ್ಥೆಯ ಮೂಲಕ ಬಿಸಿಲೆಯಾಗಿ ಹೆಗಡೆ ಮನೆಗೆ ಹೋಗಿ ಅಲ್ಲಿಂದ ಕುಮಾರ ಪರ್ವತಕ್ಕೆ ಹೋಗುತ್ತಾರೆ. ಯಾತ್ರೆಗೆ ಹೋಗುವವರಿಗೆ ಬೇಕಾದ  ವ್ಯವಸ್ಥೆಗೆ ಮುಂಚಿತವಾಗಿಯೇ ದೇವಸ್ಥಾನಕ್ಕೆ ತಿಳಿಸಬೇಕು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror